ಮಾಲ್ಗುಡಿ ಡೇಸ್‌ 18 ಕೆಜಿ ಲಾಸ್‌

ಪಾತ್ರಕ್ಕಾಗಿ ತೂಕ ಇಳಿಸಿದ ವಿಜಯ ರಾಘವೇಂದ್ರ

Team Udayavani, Apr 16, 2019, 3:00 AM IST

ವಿಜಯರಾಘವೇಂದ್ರ ಅವರು “ಮಾಲ್ಗುಡಿ ಡೇಸ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗೊತ್ತೇ ಇದೆ. ವೃತ್ತಿಜೀವನದಲ್ಲಿ ಸಿಕ್ಕಿರುವ ವಿಭಿನ್ನ ಕಥೆ ಮತ್ತು ಪಾತ್ರ ಎಂಬುದನ್ನು ಸ್ವತಃ ವಿಜಯರಾಘವೇಂದ್ರ ಅವರೇ ಹೇಳಿಕೊಂಡಿದ್ದರು. ಈ “ಮಾಲ್ಗುಡಿ ಡೇಸ್‌’ ಚಿತ್ರಕ್ಕಾಗಿ ವಿಜಯರಾಘವೇಂದ್ರ ಅವರು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿರುವುದು ವಿಶೇಷತೆಗಳಲ್ಲೊಂದು.

ಹೌದು, ಈ ಚಿತ್ರಕ್ಕಾಗಿ ವಿಜಯರಾಘವೇಂದ್ರ ತುಂಬಾ ಸಣ್ಣಗಾಗುತ್ತಿದ್ದಾರಂತೆ. ಅದರಲ್ಲೂ ತಮ್ಮ ದೇಹದ ತೂಕವನ್ನು 18 ಕೆಜಿಯಷ್ಟು ಇಳಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಾಲ್ಕು ಕೆಜಿ ತೂಕವನ್ನು ಇಳಿಸಿಕೊಂಡಿರುವ ವಿಜಯರಾಘವೇಂದ್ರ, ಇನ್ನೂ ಹದಿನಾಲ್ಕು ಕೆಜಿ ತೂಕ ಇಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಪ್ರತಿನಿತ್ಯ ಸಾಕಷ್ಟು ವರ್ಕೌಟ್‌ ಮಾಡುತ್ತಿದ್ದಾರೆ.

ಇನ್ನು, ವಿಜಯರಾಘವೇಂದ್ರ ಅವರಿಗೆ “ಮಾಲ್ಗುಡಿ ಡೇಸ್‌’ ಚಿತ್ರದ ಮೇಲೆ ವಿಶ್ವಾಸ ತುಸು ಹೆಚ್ಚಾಗಿದೆ. “ಈ ಚಿತ್ರ ನನಗೆ ಹೊಸ ಇಮೇಜ್‌ ಕಲ್ಪಿಸಿಕೊಡುತ್ತೆ ಎಂಬ ಭರವಸೆ ಇದೆ “ಮಾಲ್ಗುಡಿ ಡೇಸ್‌’ ಅಂದಾಕ್ಷಣ, ಶಂಕರ್‌ನಾಗ್‌ ಅವರು ನೆನಪಾಗುತ್ತಾರೆ. ಅದರಲ್ಲೂ ಆ ಬಾಲ್ಯದ ದಿನಗಳೂ ನೆನಪಾಗುತ್ತವೆ.

ಕಿರುತೆರೆಯಲ್ಲಿ ಪ್ರಸಾರಗೊಳ್ಳುತ್ತಿದ್ದ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ “ಮಾಲ್ಗುಡಿ ಡೇಸ್‌’ ಮೂಡಿಬಂದಿತ್ತು. ಹಾಗಂತ, ಶಂಕರ್‌ನಾಗ್‌ ಅವರ “ಮಾಲ್ಗುಡಿ ಡೇಸ್‌’ಗೂ ನಮ್ಮ ಈ “ಮಾಲ್ಗುಡಿ ಡೇಸ್‌’ಗೂ ಯಾವುದೇ ಸಂಬಂಧವಿಲ್ಲ. ಕೇವಲ ಆ ಶೀರ್ಷಿಕೆಯನ್ನು ಮಾತ್ರ ಇಲ್ಲಿ ಬಳಕೆ ಮಾಡಲಾಗುತ್ತಿದೆ.

ಈ ಚಿತ್ರ ನೋಡಿದವರಿಗೂ ಸಹ ಚಿಕ್ಕಂದಿನ ನೆನಪುಗಳೆಲ್ಲವೂ ಕಣ್ಣ ಮುಂದೆ ಬರುತ್ತವೆ. ಅಷ್ಟರ ಮಟ್ಟಿಗೆ ಚಿತ್ರದ ಕಥೆ ಮಾಡಿಕೊಳ್ಳಲಾಗಿದೆ. ನಿರ್ದೇಶಕ ಕಿಶೋರ್‌ ಮೂಡಬಿದಿರೆ ಅವರು ಒಳ್ಳೆಯ ಕಥೆಯೊಂದಿಗೆ ಹೊಸ ವಿಷಯವನ್ನು ಹೇಳಲು ಹೊರಟಿದ್ದಾರೆ. ಚಿತ್ರಕ್ಕೆ ಬೇಕಾದೆಲ್ಲವನ್ನೂ ಒದಗಿಸಲು ನಿರ್ಮಾಪಕ ರತ್ನಾಕರ ಕಾಮತ್‌ ಉತ್ಸಾಹದಲ್ಲಿದ್ದಾರೆ.

ಈಗಾಗಲೇ ಒಂದು ಹಂತದ ಚಿತ್ರೀಕರಣ ತೀರ್ಥಹಳ್ಳಿ, ಆಗುಂಬೆ, ಹೊರನಾಡು ಸುತ್ತಮುತ್ತಲ ಭಾಗದಲ್ಲಿ ನಡೆದಿದೆ. ಇಷ್ಟರಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ತಯಾರಿ ನಡೆಸಿದೆ. ಪಾಂಡಿಚೆರಿಯಲ್ಲಿ ಈಗಾಗಲೇ ಲೊಕೇಷನ್‌ ನೋಡಿಕೊಂಡು ಬಂದಿದ್ದು, ಚಿತ್ರೀಕರಣಕ್ಕೆ ಅಲ್ಲಿಗೆ ತೆರಳುವುದಾಗಿ ಹೇಳುವ ವಿಜಯರಾಘವೇಂದ್ರ, “ಮಾಲ್ಗುಡಿ ಡೇಸ್‌’ ನನ್ನ ವೃತ್ತಿಬದುಕಿನಲ್ಲಿ ಹೊಸತನ ತುಂಬಿರುವ ಚಿತ್ರವಾಗಲಿದೆ.

ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಭಿನ್ನವಾಗಿರುವಂತಹ ಕಥೆ, ಪಾತ್ರ ಇಲ್ಲಿದೆ. ಎಷ್ಟೋ ದಿನಗಳ ಕಾಲ ಯಶಸ್ಸು ಇಲ್ಲದೆ ಕಾದಿರುವ ನನಗೆ “ಮಾಲ್ಗುಡಿ ಡೇಸ್‌’ ಒಂದು ಯಶಸ್ಸು ತಂದುಕೊಡುತ್ತೆ ಎಂದು ನಂಬಿದ್ಧೇನೆ. ನನಗಷ್ಟೇ ಅಲ್ಲ, ಇಡೀ ಚಿತ್ರತಂಡಕ್ಕೂ ಚಿತ್ರ ದೊಡ್ಡ ಗೆಲುವು ತಂದುಕೊಡಲಿದೆ ಎಂಬ ಭರವಸೆ ಇದೆ.

ನನಗೂ ಎಲ್ಲೋ ಒಂದು ಕಡೆ ಕಾಡುತ್ತಿತ್ತು. ಏನಾದರೂ ಮಾಡಬೇಕು, ಹೊಸ ಬಗೆಯ ಕಥೆ ಆಯ್ಕೆ ಮಾಡಿಕೊಂಡು, ಒಂದು ಗೆಲುವು ಪಡೆಯಬೇಕು ಅಂತ. ಈಗ ಅಂತಹ ಸ್ಕ್ರಿಪ್ಟ್ ಸಿಕ್ಕಿದೆ. “ಮಾಲ್ಗುಡಿ ಡೇಸ್‌’ ಎಂಬ ಶೀರ್ಷಿಕೆಯಲ್ಲೇ ಕುತೂಹಲವಿದೆ. ಹಾಗೆಯೇ ಚಿತ್ರ ಕೂಡ ಎಲ್ಲರಿಗೂ ರುಚಿಸಲಿದೆ’ ಎನ್ನುತ್ತಾರೆ ವಿಜಯರಾಘವೇಂದ್ರ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ