“ಮಾಲ್ಗುಡಿ ಡೇಸ್’ ಟೀಸರ್ ಬಂತು
ವಿಜಯ ರಾಘವೇಂದ್ರ ಚಿತ್ರಕ್ಕೆ ಶಿವಣ್ಣ ಸಾಥ್
Team Udayavani, Jan 12, 2020, 7:01 AM IST
ವಿಜಯ ರಾಘವೇಂದ್ರ ಅಭಿನಯದ ಹೊಸ ಚಿತ್ರವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಮಾಲ್ಗುಡಿ ಡೇಸ್’. ರೆಗ್ಯುಲರ್ ಜಾನರ್‌ನಿಂದ ಹೊರಬಂದು ಮಾಡಿರುವ ಈ ಸಿನಿಮಾದ ಲುಕ್ಸ್ ಗಮನ ಸೆಳೆಯುತ್ತಿದ್ದು, ಈಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಶಿವರಾಜಕುಮಾರ್ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಕಿಶೋರ್ ಮೂಡಬಿದ್ರೆ ನಿರ್ದೇಶನದ ಈ ಚಿತ್ರವನ್ನು ಕೆ. ರತ್ನಾಕರ್ ಕಾಮತ್ ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕಿಶೋರ್, “ಮಾಲ್ಗುಡಿ ಎಂಬ ಊರಲ್ಲಿ ನಡೆಯುವ ಕಾಲ್ಪನಿಕ ಕಥೆ ಇದು. ಮುಖ್ಯವಾಗಿ ಈ ಚಿತ್ರ ನೆನಪುಗಳ ಸುತ್ತ ಸಾಗಲಿದ್ದು, ಚಿತ್ರ ನೋಡುವ ಪ್ರತಿಯೊಬ್ಬರಿಗೂ ಇದು ತಮ್ಮ ಸುತ್ತಮುತ್ತಲಿನಲ್ಲಿ ನಡೆದ ಕಥೆಯೇನೋ ಎಂಬ ಭಾಸವಾಗುತ್ತದೆ. ಈ ಚಿತ್ರದ ಹೈಲೈಟ್ ಅಂದರೆ ವಿಜಯ ರಾಘವೇಂದ್ರ ಅವರು 75 ವರ್ಷ ವ್ಯಕ್ತಿಯಾಗಿ ಕಾಣಿಸಿಕೊಂಡಿರುವುದು.
ಪ್ರಾಸ್ಥೆಟಿಕ್ ಮೇಕಪ್ ಮೂಲಕ ಅವರೊಬ್ಬ ಸಾಹಿತಿಯಾಗಿ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದುದ್ದಕ್ಕೂ ವಿಜಯ ರಾಘವೇಂದ್ರ ಅವರು ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲೇ ಕಾಣುತ್ತಾರೆ. ಕೇರಳ ಮೂಲದ ರೋಶನ್ ಆ ಮೇಕಪ್ ಮಾಡಿದ್ದಾರೆ. ಇದು ಬಿಟ್ಟರೆ, ಇದರ ನಡುವೆ ಬೇರೆ ಗೆಟಪ್ ಇದ್ದರೂ, ಅದು ಸಹ ವಿನೂತನವಾಗಿಯೇ ಇರಲಿದೆ’ ಎನ್ನುವುದು ನಿರ್ದೇಶಕರ ಹೇಳಿಕೆ. ಚಿತ್ರ ಫೆಬ್ರವರಿ ಮೊದಲ ವಾರ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಕಟ್ಟಿಂಗ್ ಶಾಪ್’ನಲ್ಲಿ ರ್ಯಾಪ್ ಸಾಂಗ್!
ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್
ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ
ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?
‘ವೀಲ್ ಚೇರ್’ ನಲ್ಲಿ ರಾಮ್ ಚೇತನ್; ಚೊಚ್ಚಲ ಚಿತ್ರದ ಬಗ್ಗೆ ರೋಮಿಯೋ ನಿರೀಕ್ಷೆಯ ಮಾತು…