`ಮನರೂಪ’ದಲ್ಲಿದೆಯಾ ಹಾರರ್ ಗುಮ್ಮ?

Team Udayavani, Nov 18, 2019, 7:06 PM IST

ಕಿರಣ್ ಹೆಗ್ಡೆ ನಿರ್ದೇಶನದ ಮನರೂಪ ಇಪ್ಪತ್ತೆರಡನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ. ಮನರೂಪ ಮೂಲಕ ಒಂದು ಜನರೇಷನ್ನಿನ ಮನೋಲೋಕವನ್ನು  ಬಿಚ್ಚುವ ಕಥಾ ಹಂದರ ಹೊಂದಿರೋ ಈ ಚಿತ್ರ ತನ್ನ ಒಡಲೊಳಗೆ ನಾನಾ ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ. ಆರಂಭದಲ್ಲಿ ಟೈಟಲ್ ಪೋಸ್ಟರ್ ಲಾಂ ಚಿಂಗಲ್ಲೇ ಖದರ್ ತೋರಿಸಿದ್ದ ಚಿತ್ರ ಮನರೂಪ. ಇದೀಗ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಉಳಿದುಕೊಂಡಿರುವಾಗಲೇ ಈ ಸಿನಿಮಾ ಬಗ್ಗೆ ಮತ್ತೊಂದಷ್ಟು ವಿಚಾರಗಳು ಹೊರ ಬರುತ್ತಿವೆ.

ಹಲವಾರು ವರ್ಷಗಳ ನಂತರ ಭೇಟಿಯಾಗಿ ಅದೇ ಖುಷಿಯಲ್ಲಿ ಅತ್ಯಂತ ಅಪಾಯಕಾರಿಯಾದ ಪ್ರದೇಶದತ್ತ ಯಾನ ಹೊರಡೋ ಸ್ನೇಹಿತರ ಕಥೆ ಇಲ್ಲಿದೆ. ಅವರು ಹೋಗೋ ಕರಡಿ ಗುಡ್ಡ ಎಂಬ ಪ್ರದೇಶದ ಚಹರೆಗಳು ಇತ್ತೀಚೆಗೆ ಬಿಡುಗಡೆಯಾಗಿರೋ ಟೀಸರ್ ಮೂಲಕ ಅನಾವರಣಗೊಂಡಿವೆ. ಅದರಲ್ಲಿಯೇ ಪ್ರೇಕ್ಷಕರಿಗೆ ಹಾರರ್ ಚಹರೆಗಳೂ ಕೂಡಾ ಕಾಣಿಸಿವೆ. ಇದರಲ್ಲಿ ನಿಜಕ್ಕೂ ಹಾರರ್ ಸನ್ನಿವೇಶಗಳಿವೆಯಾ? ಗೂಬೆಯ ಮುಖವಾಡ ತೊಟ್ಟಿರೋದು ಕಾಡೊಳಗಿನ ದಂಧೆಕೋರರಾ ಅಥವಾ ಅದು ಅದು ದೆವ್ವವಾ ಎಂಬಂಥಾ ಹತ್ತಾರು ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಆದರೆ ಚಿತ್ರತಂಡ ಮಾತ್ರ ಈ ಪಾತ್ರದ ಬಗ್ಗೆ ಯಾವ ವಿಚಾರವನ್ನೂ ಹೇಳದೆ ತೆಳುವಾದ ಒಂದಷ್ಟು ಅಂಶಗಳನ್ನು ಮಾತ್ರವೇ ಜಾಹೀರು ಮಾಡಿವೆ.

ಈ ಗುಮ್ಮವೂ ಕೂಡಾ ಮನರೂಪದ ಕೇಂದ್ರ ಬಿಂದುವಿ ನಂಥಾ ಪಾತ್ರ. ಅದು ದೆವ್ವವಾ, ಗೂಬೆಯ ಮುಖವಾಡ ತೊಟ್ಟಿರುವ ಮನುಷ್ಯನಾ ಅನ್ನೋದು ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಗೊತ್ತಾಗಬೇಕಿದೆ. ಆದರೆ, ಈ ಗುಮ್ಮನ ಪಾತ್ರ ಎಲ್ಲರನ್ನೂ ಕಾಡುವಂತೆ ಮೂಡಿ ಬಂದಿದೆ ಯಂತೆ. ಅದುವೇ ಇಡೀ ಸಿನಿಮಾಗೆ ಹಾರರ್ ಟಚ್ ಕೊಡೋದು ಹೌದಾದರೂ ಯಾರೂ ಊಹಿಸಲು ಸಾಧ್ಯವಾಗದಂಥಾ ಟ್ವಿಸ್ಟ್ ಕೂಡಾ ಆ ಪಾತ್ರದ ಮೂಲಕವೇ ತೆರೆದುಕೊಳ್ಳಲಿದೆ. ಸಾಮಾನ್ಯವಾಗಿ ಚಿಕ್ಕಂದಿ ನಿಂದಲೂ ಗುಮ್ಮ ಎಂಬುದು ಒಂದು ಅಗೋಚರ ಭಯವಾಗಿ ಬಹುತೇಕರ ಮನಸುಗಳಲ್ಲಿ ಪ್ರತಿಷ್ಟಾಪಿತವಾಗಿರುತ್ತೆ. ಇಲ್ಲಿರುವ ಗುಮ್ಮ ಎಲ್ಲರೊಳಗಿನ ಭಯದ ಪ್ರತೀಕವಾ ಅಥವಾ ಅದು ಭೂತ ಚೇಷ್ಟೆಯ ಭಾಗವಾ ಅನ್ನೋದು ಬಯಲಾಗಲು ಇ ನ್ನು  ಬೆರಳೆಣಿಕೆಯಷ್ಟು ದಿನಗಳ ಕಾಲ ಕಾಯಬೇಕಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ