ಅ.11ರಂದು ಮಂಗಳೂರು ಸೊಗಡಿನ `ಲುಂಗಿ’ ಕನ್ನಡ ಸಿನಿಮಾ ಬಿಡುಗಡೆ

Team Udayavani, Oct 9, 2019, 4:03 PM IST

ಮಂಗಳೂರು: ತುಳುವಿನಲ್ಲಿ ಎರಡು ಯಶಸ್ವಿ ಸಿನಿಮಾನಗಳನ್ನು ನಿರ್ಮಿಸಿರುವ ಮುಖೇಶ್ ಹೆಗ್ಡೆ ಸಿನಿಮಾ ನಿರ್ಮಾಣದ, ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶನದ ಮಂಗಳೂರು ಸೊಗಡಿನ ಕನ್ನಡ ಸಿನಿಮಾ `ಲುಂಗಿ’ ಅ.11ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಖಾರ ಎಂಟರ್‌ಟೈನ್‌ನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಕ್ಕೆ ಅರ್ಜುನ್ ಲೂವಿಸ್ ಅವರು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದು, ಚಿತ್ರದ ಟ್ರೇಲರ್ ನೋಡಿ ತೆಲುಗಿನ ವೆಂಕಟ್ ವಿಜಯ್ ಅನ್ನುವವರು ಉತ್ತಮ ಮೊತ್ತಕ್ಕೆ ತೆಲುಗು ರಿಮೇಕ್ ರೈಟ್ಸ್ ಖರೀದಿಸಿದ್ದಾರೆ ಎಂದು ಚಿತ್ರದ ನಾಯಕ ನಟ ಪ್ರಣವ್ ಹೆಗ್ಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಯಕಿಯರಾಗಿ ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ಅಭಿನಯಿಸಿದ್ದು, ಪ್ರಕಾಶ್ ಕೆ.ತೂಮಿನಾಡಿ, ವಿ.ಜೆ.ವಿನೀತ್, ಕಾರ್ತಿಕ್ ವರದರಾಜು, ದೀಪಕ್ ರೈ ಪಾಣಾಜೆ, ರೂಪಾ ವರ್ಕಾಡಿ ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ರಿಜೋ ಪಿ.ಜಾನ್ ಛಾಯಾಗ್ರಹಣ, ಪ್ರಸಾದ್ ಕೆ.ಶೆಟ್ಟಿ ಸಂಗೀತ, ಮನು ಶೆಡ್ಗಾರ್ ಸಂಕಲನ, ರಕ್ಷಿತ್ ರೈ ಸಹನಿರ್ದೇಶನ ಮತ್ತು ಮಹೇಶ್ ಎಣ್ಮೂರು ಕಲಾನಿರ್ದೇಶನ ಮಾಡಿದ್ದಾರೆ. ರಾಜ್ಯದ ಎಲ್ಲ 50 ಮಲ್ಟಿಪ್ಲೆಕ್ಸ್ ಸಹಿತ 80 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮಂಗಳೂರಿನಲ್ಲಿ ಪ್ರಭಾತ್, ಬಿಗ್‌ಸಿನಿಮಾಸ್, ಸಿಟಿ ಸೆಂಟರ್ ಮತ್ತು ಪಿವಿಆರ್‌ನಲ್ಲಿ, ಉಡುಪಿಯಲ್ಲಿ ಅಲಂಕಾರ್, ಮಣಿಪಾಲ ಐನಾಕ್ಸ್, ಕಾರ್ಕಳದಲ್ಲಿ ರಾಧಿಕಾ ಮತ್ತು ಕುಂದಾಪುರದಲ್ಲಿ ವಿನಾಯಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಮುಖೇಶ್ ಹೆಗ್ಡೆ, ನಾಯಕಿ ಅಹಲ್ಯಾ ಸುರೇಶ್, ನಿರ್ದೇಶಕ ಅರ್ಜುನ್ ಲೂವಿಸ್, ಸಂಗೀತ ನಿರ್ದೇಶಕ ಪ್ರಸಾದ್ ಕೆ.ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ