ದಾಂಪತ್ಯ ವರ್ಸಸ್‌ ಲೀವಿಂಗ್‌ ರಿಲೇಶನ್‌

Team Udayavani, May 7, 2018, 12:45 PM IST

dampathya.jpg

ನಿರ್ದೇಶಕ ನರೇಂದ್ರ ಬಾಬು ಅವರ “ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಂತರ ನಿರ್ದೇಶಿಸಿರುವ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಇದೇ 25 ರಂದು ತೆರೆಕಾಣುತ್ತಿದೆ. ಚಿತ್ರದಲ್ಲಿ ಅನಂತ್‌ನಾಗ್‌ ಹಾಗೂ ರಾಧಿಕಾ ಚೇತನ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಅನಂತ್‌ನಾಗ್‌ ಅವರು ವೈಯಕ್ತಿಕವಾಗಿ ತುಂಬಾ ಇಷ್ಟಪಟ್ಟ ಕಥೆಗಳಲ್ಲಿ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕೂಡಾ ಒಂದು.

ನಿರ್ದೇಶಕ ನರೇಂದ್ರ ಬಾಬು ಈ ಸಿನಿಮಾ ಬಗ್ಗೆ ಸಾಕಷ್ಟು ಎಕ್ಸೆ„ಟ್‌ ಆಗಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕಥೆ ಹಾಗೂ ಇಡೀ ಸಿನಿಮಾವನ್ನು ಅನಂತ್‌ನಾಗ್‌ ಅವರು ಆವರಿಸಿಕೊಂಡಿರುವ ರೀತಿ. “ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಿಗೆ ಹೋಲಿಸಿದರೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ತುಂಬಾ ವಿರಳವಾದ ಕಥೆ. ಈ ಶೇಡ್‌ನ‌ಲ್ಲಿ ಕಥೆ ಬಂದಿಲ್ಲ. ಈ ಸಿನಿಮಾ ಯಾವ ಜಾನರ್‌ಗೆ ಸೇರುತ್ತದೆ ಮತ್ತು ಸೇರಿಸಬೇಕು ಎಂಬುದು ನನಗೆ ಗೊತ್ತಿಲ್ಲ.

ಸಿನಿಮಾ ನೋಡಿ ಪ್ರೇಕ್ಷಕರೇ ನಿರ್ಧರಿಸಬೇಕು. ಒಂದಂತೂ ಹೇಳಬಲ್ಲೆ, ಅನಂತ್‌ನಾಗ್‌ ಅವರು ತುಂಬಾ ಇಷ್ಟಪಟ್ಟ ಕಥೆ. ಅವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅಷ್ಟೂ ಸಿನಿಮಾಗಳ ಅನುಭವ ಸಿನಿಮಾದ ಪ್ರತಿ ಜಾಗದಲ್ಲೂ, ಸ್ಕ್ರಿಪ್ಟ್ನ ಪ್ರತಿ ಹಂತದಲ್ಲೂ ಸಂಚರಿಸಿದೆ’ ಎನ್ನುವುದು ನರೇಂದ್ರ ಬಾಬು ಮಾತು. ನರೇಂದ್ರ ಬಾಬು ಈ ಬಾರಿ ಎರಡು ಜನರೇಶನ್‌ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

ಬೇರೆ ಬೇರೆ ಯೋಚನೆಯ, ತಮ್ಮದೇ ಆದ ಸಿದ್ಧಾಂತವನ್ನು ನಂಬಿಕೊಂಡಿರುವ ಎರಡು ಜನರೇಶನ್‌ಗಳು ಒಟ್ಟಾದಾಗ ಆ ಜರ್ನಿ ಹೇಗಿರುತ್ತದೆ ಎಂಬುದನ್ನು ಹೇಳಿದ್ದಾರಂತೆ. “ಇಲ್ಲಿ ಎರಡು ಜನರೇಶನ್‌ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ದಾಂಪತ್ಯವೇ ದೇವರು ಎಂದು ನಂಬುವ ವ್ಯಕ್ತಿ ಅನಿವಾರ್ಯವಾಗಿ ಕಾರ್ಪೋರೇಟ್‌ ಸಂಸ್ಥೆಯಲ್ಲಿ, ತನಗಿಂತ ಚಿಕ್ಕ ವಯಸ್ಸಿನ, ಲೀವಿಂಗ್‌ ರಿಲೇಶನ್‌ಶಿಪ್‌ ಬಗ್ಗೆ ಆಕರ್ಷಣೆ ಹೊಂದಿರುವ ಹುಡುಗಿಯ ಕೈ ಕೆಳಗೆ ಕೆಲಸ ಮಾಡುವ ಸಂದರ್ಭ ಬಂದಾಗ ಅಲ್ಲಿನ ವಾತಾವರಣ ಹೇಗಿರುತ್ತದೆ,

ಸರಿ ತಪ್ಪುಗಳ ನಡುವಿನ ಜರ್ನಿಯಲ್ಲಿ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎನ್ನುವ ನರೇಂದ್ರ ಬಾಬು ಇಲ್ಲಿ, ಯಾವುದೇ ಸಂದೇಶ ಹೇಳುವ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ.  ನರೇಂದ್ರ ಬಾಬು ಈ ಸಿನಿಮಾ ಬಗ್ಗೆ ಖುಷಿಯಾಗಲು ಕಾರಣ, ಯಾವುದೇ ರಾಜಿಯಾಗದೇ ಸಿನಿಮಾ ಮಾಡಿದ್ದು. ಸಿನಿಮಾದಲ್ಲಿ ಏನೇನು ಮಾಡಬೇಕೆಂದು ಬಯಸಿದ್ದರೋ ಅವೆಲ್ಲವನ್ನು ತೆರೆಮೇಲೆ ತರುವ ಅವಕಾಶ ಇಲ್ಲಿ ಸಿಕ್ಕಿತಂತೆ.

ಜೊತೆಗೆ ಕಥೆ ಕೇಳಿ ಅನಂತ್‌ನಾಗ್‌ ಅವರು ಸ್ಕಿಪ್ಟ್ನಲ್ಲಿ ತೊಡಗಿಸಿಕೊಂಡ ರೀತಿ ಕೂಡಾ ನರೇಂದ್ರ ಅವರು ಅವರಿಗೆ ಸಿನಿಮಾದ ಮೇಲಿನ ವಿಶ್ವಾಸ ಹೆಚ್ಚಿಸಿದೆ. “ಮೊದಲ ಹಂತದ ಸ್ಕ್ರಿಪ್ಟ್ ಮಾಡಿ, ಅನಂತ್‌ನಾಗ್‌ ಅವರಿಗೆ ಕೊಟ್ಟೆ. ಇನ್ನೂ ಫೈನಲ್‌ ಆಗಿರಲಿಲ್ಲ. ಏನು ಬೈಯ್ಯುತ್ತಾರೋ ಎಂದು ಭಯದಲ್ಲಿದ್ದೆ. ಆದರೆ, ಅನಂತ್‌ನಾಗ್‌ ಅವರು ಆ ಸ್ಕ್ರಿಪ್ಟ್ಗೆ ಒಂದು ಅಂತಿಮ ರೂಪ ಕೊಟ್ಟರು. ಎಲ್ಲೆಲ್ಲಿ ಏನೇನೋ ಬೇಕಿತ್ತೋ ಅವೆಲ್ಲವನ್ನು ನೀಟಾಗಿ ಮಾಡಿಕೊಟ್ಟರು. ಆ ನಂತರ ಚಿತ್ರೀಕರಣಕ್ಕೆ ಹೋದೆವು’ ಎನ್ನುವುದು ನರೇಂದ್ರ ಬಾಬು ಮಾತು. 

ಟಾಪ್ ನ್ಯೂಸ್

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

ಪ್ರಧಾನಮಂತ್ರಿ ಆವಾಜ್‌ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆ

ಪ್ರಧಾನಮಂತ್ರಿ ಆವಾಜ್‌ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಎರಡು ಸಾವಿರದ ಇಪ್ಪತ್ತು ಗೋಪಿಕೆಯರು

“ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ಚಿತ್ರದ ಹಾಡುಗಳ ಬಿಡುಗಡೆ

‘ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರಕ್ಕೆ ಮುಹೂರ್ತ

‘ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರಕ್ಕೆ ಮುಹೂರ್ತ

ಕೀರ್ತಿ ಭಟ್.. ”ಕಾಣೆಯಾದವಳ” ಹುಡುಕಾಟ ಶುರು…

ಕೀರ್ತಿ ಭಟ್.. ”ಕಾಣೆಯಾದವಳ” ಹುಡುಕಾಟ ಶುರು…

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

“ವಿಕ್ರಾಂತ್‌ ರೋಣ”:  ಕಿಚ್ಚನ ಪ್ಯಾನ್‌ ಇಂಡಿಯಾ ಸಿನ್ಮಾ ಮೇಲೆ ಹೆಚ್ಚಿದ ನಿರೀಕ್ಷೆ

“ವಿಕ್ರಾಂತ್‌ ರೋಣ”:  ಕಿಚ್ಚನ ಪ್ಯಾನ್‌ ಇಂಡಿಯಾ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.