“ಟಕ್ಕರ್’ ಚಿತ್ರದ ಜಬರ್‌ದಸ್ತ್‌ ಟೀಸರ್ ಲಾಂಚ್!: Watch

Team Udayavani, Apr 21, 2019, 9:04 PM IST

ಮನೋಜ್ ಅಭಿನಯದ ಚೊಚ್ಚಲ ಚಿತ್ರ “ಟಕ್ಕರ್’ ಟೀಸರ್ ಲಾಂಚ್ ಆಗಿದೆ. ಪಕ್ಕಾ ಮಾಸ್ ಕಥಾ ಹಂದರ ಹೊಂದಿರೋ ಈ ಸಿನಿಮಾದ ಟೀಸರ್ ಅನ್ನು ನಿರ್ದೇಶಕ ದಿನಕರ್ ತೂಗುದೀಪ ಬಿಡುಗಡೆಗೊಳಿಸಿ ತಮ್ಮ ಸೋದರಳಿಯ ಮನೋಜ್ ಮತ್ತು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಮಾಸ್ ಡೈಲಾಗ್, ಅದಕ್ಕೆ ತಕ್ಕುದಾದ ಸನ್ನಿವೇಶಗಳೊಂದಿಗೆ ಜಬರ್ ದಸ್ತಾಗಿ ಮೂಡಿ ಬಂದಿರೋ “ಟಕ್ಕರ್’ ಟೀಸರ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ನೀನು ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ್ ಜೊತೆ ಎಂಬ ಡೈಲಾಗ್ ಮತ್ತು ಸಾಹಸ ಸನ್ನಿವೇಶಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ದರ್ಶನ್ ಕುಟುಂಬದ ಕುಡಿ ಮನೋಜ್ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಚೊಚ್ಚಲ ಚಿತ್ರವೆಂಬ ಕಾರಣದಿಂದಲೇ “ಟಕ್ಕರ್’ ಆರಂಭದಿಂದಲೂ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಈ ಕಾರಣದಿಂದಲೇ ಟಕ್ಕರ್ ಬಗ್ಗೆ ಮೂಡಿಕೊಂಡಿರೋ ನಿರಿಕ್ಷೆಗಳೇನು ಕಡಿಮೆಯಿಲ್ಲ. ಅದಕ್ಕೆ ತಕ್ಕುದಾಗಿಯೇ ಇದೀಗ ಈ ಟೀಸರ್ ಮೂಡಿ ಬಂದಿದೆ.

ಈ ಟೀಸರ್ ನಲ್ಲಿ ಮನೋಜ್ ಮಾಸ್ ಸೀನುಗಳಲ್ಲಿ ಅಬ್ಬರಿಸಿದ ರೀತಿಯೇ ಕನ್ನಡಕ್ಕೊಬ್ಬ ಆರಡಿ ಆಕ್ಷನ್ ಹೀರೋನ ಎಂಟ್ರಿಯನ್ನು ಖಚಿತಪಡಿಸುತ್ತಿದೆ. ಈ ಟೀಸರ್ ನಲ್ಲಿ ಯಾವ ಥರದ ಫೋರ್ಸ್ ಇದೆಯೋ ಅಂಥಾದ್ದೇ ಕಥಾ ಹಂದರವನ್ನು ಟಕ್ಕರ್ ಹೊಂದಿದೆ. ಈ ಚಿತ್ರದಲ್ಲಿ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ.

“ಹುಲಿರಾಯ’ ಖ್ಯಾತಿಯ ನಾಗೇಶ್ ಕೋಗಿಲು ಅವರು ಎಸ್ ಎಲ್ ಎನ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಘು ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಭಜರಂಗಿ ಲೋಕಿ ಮುಂತಾದ ಖಳ ನಟರೂ “ಟಕ್ಕರ್’ನಲ್ಲಿ ವಿಜೃಂಭಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಜಗ್ಗೇಶ್‌ ಅಭಿನಯದ "ಪ್ರೀಮಿಯರ್‌ ಪದ್ಮಿನಿ' ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಗೊತ್ತೇ ಇದೆ. ಆ ಚಿತ್ರ ಈಗ 25ದಿನ ಪೂರೈಸಿ ಮುನ್ನುಗ್ಗುತ್ತಿದೆ....

  • ಶಿವರಾಜಕುಮಾರ್‌ ದೊಡ್ಡ ಗ್ಯಾಪ್‌ನ ಬಳಿಕ ಒಪ್ಪಿಕೊಂಡ ರೀಮೇಕ್‌ ಚಿತ್ರ "ಕವಚ'. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು....

  • -ಕುರುಕ್ಷೇತ್ರ ಕನ್ನಡ ವರ್ಶನ್‌ ಟಿವಿ ರೈಟ್ಸ್‌ - 9 ಕೋಟಿ -ಹಿಂದಿ ಡಬ್ಬಿಂಗ್‌ ರೈಟ್ಸ್‌ -9.5 ಕೋಟಿ -ಕುರುಕ್ಷೇತ್ರ ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ -1.5 ಕೋಟಿ ಇದು...

  • ಯುವ ನಿರ್ದೇಶಕ ವಿಠಲ್‌ ಭಟ್‌ ನಿರ್ದೇಶನದ "ಹ್ಯಾಂಗೋವರ್‌' ಈಗ ಮತ್ತೆ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದ ಚಿತ್ರತಂಡ, ಈಗ ಪ್ರೇಕ್ಷಕರ...

  • ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ಬಹು ನಿರೀಕ್ಷಿತ ಮುನಿರತ್ನ "ಕುರುಕ್ಷೇತ್ರ' ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. "ಕುರುಕ್ಷೇತ್ರ'...

ಹೊಸ ಸೇರ್ಪಡೆ