ಮೇ 12 ವಿಜಯ್‌ ಪ್ರಕಾಶ್‌ ಡೇ

ಅಮೆರಿಕಾ ಘೋಷಣೆ

Team Udayavani, Jun 18, 2019, 3:00 AM IST

ಗಾಯಕ ವಿಜಯ ಪ್ರಕಾಶ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ ಪರದೇಶದ ಮಂದಿ ನೀಡಿದ ಗೌರವ, ಸನ್ಮಾನ. ಅದು ಅಂತಿಂಥ ಗೌರವವಲ್ಲ, ಮೇ 12 ನ್ನು ವಿಜಯ ಪ್ರಕಾಶ್‌ ಡೇ ಎಂದು ಘೋಷಿಸಿದಂತಹ ಗೌರವ.

ಹೌದು, ಮೇನಲ್ಲಿ ವಿಜಯ ಪ್ರಕಾಶ್‌ ಅಮೆರಿಕಾದ ಕಾನ್ಕಾರ್ಡ್‌ ಸಿಟಿಗೆ ತೆರಳಿ ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ತಮ್ಮ ಅದ್ಭುತ ಕಂಠದ ಮೂಲಕ ಅಲ್ಲಿನ ಮಂದಿಯನ್ನು ರಂಜಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಜಯ ಪ್ರಕಾಶ್‌ ಅವರ ಹಾಡು ಕೇಳಿ ಮನಸೋತ ಕಾನ್ಕಾರ್ಡ್‌ ಸಿಟಿಯ ಮೇಯರ್‌ ವಿಲಿಯಂ, ಮೇ 12 ನ್ನು ವಿಜಯ ಪ್ರಕಾಶ್‌ ಡೇ ಎಂದು ಘೋಷಿಸಿಯೇ ಬಿಟ್ಟರು. ಈ ಮೂಲಕ ಕನ್ನಡದ ಗಾಯಕನಿಗೆ ಅಮೆರಿಕಾದಲ್ಲಿ ದೊಡ್ಡ ಗೌರವ ಸಿಕ್ಕಂತಾಗಿದೆ.

ಅಮೆರಿಕಾದ ಮೇಯರ್‌ ನೀಡಿದ ಈ ಗೌರವದಿಂದ ಖುಷಿಯಾಗಿರುವ ವಿಜಯ ಪ್ರಕಾಶ್‌, ಮುಂದಿನ ದಿನಗಳಲ್ಲಿ ಸಂಗೀತ ಕುರಿತು ಇನ್ನಷ್ಟು ಕೆಲಸ ಮಾಡುವ, ಅನೇಕ ಮಕ್ಕಳಿಗೆ ಪಾಠ ಮಾಡುವ ಉದ್ದೇಶವಿಟ್ಟುಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • "ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್‌, ನೀವು ಸುಮ್ಮನೆ...

  • ದರ್ಶನ್‌ ಅಭಿನಯದ "ಒಡೆಯ' ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು "ಒಡೆಯ'ದಲ್ಲಿರುವುದರಿಂದ...

  • ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ...

  • ಸುಮಾರು ಹದಿನೆಂಟು ವರ್ಷಗಳ ಹಿಂದೆ "ಗಟ್ಟಿಮೇಳ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್‌. ಮಹೇಂದರ್‌, ಈಗ "ಶಬ್ಧ' ಚಿತ್ರದಲ್ಲಿ ಮತ್ತೂಮ್ಮೆ...

  • ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ "ತ್ರಿವಿಕ್ರಮ' ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ...

ಹೊಸ ಸೇರ್ಪಡೆ