ವಿಭಿನ್ನ ಕಥಾಹಂದರದ “ಮೀನಾ ಬಜಾರ್” ಸಿನಿಮಾದ ಟೀಸರ್ ಬಿಡುಗಡೆ
Team Udayavani, Sep 30, 2019, 6:01 PM IST
ಬೆಂಗಳೂರು: ರಾಣಾ ಸುನೀಲ್ ಕುಮಾರ್ ಸಿಂಗ್ ನಿರ್ದೇಶನದ, ವಿಭಿನ್ನ ಕಥಾ ಹಂದರವನ್ನೊಳಗೊಂಡ “ಮೀನಾ ಬಜಾರ್” ಸಿನಿಮಾದ ಟೀಸರ್ ಸೋಮವಾರ ಬಿಡುಗಡೆಯಾಗಿದೆ.
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ರಾಣಾ ಸುನೀಲ್ ಕುಮಾರ್ ಸಿಂಗ್ ಅವರದ್ದು, ಚಿತ್ರದಲ್ಲಿ ವೈಭವಿ ಜೋಶಿ, ರಾಜೇಶ್ ನಟರಂಗ, ರಾಣಾ ಸುನೀಲ್ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಚಿತ್ರವನ್ನು ಕೊಡಚಾದ್ರಿ, ಮೈಸೂರು, ಆಗುಂಬೆ, ಹೈದರಾಬಾದ್ ಸೇರಿದಂತೆ ಅನೇಕ ಪ್ರಕೃತಿ ಸೌಂದರ್ಯ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದು, ಮೀನಾ ಬಜಾರ್ ಬಿಡುಗಡೆಗೆ ಸಿದ್ದವಾಗಿದೆ.
ಒಂದು ನಿಮಿಷ 48ಸೆಕೆಂಡುಗಳ ಟೀಸರ್ ನಲ್ಲಿ ಅದ್ಭುತ ಕೆಮರಾ ಕೈಚಳಕ ಪ್ರೇಕ್ಷಕರ ಗಮನಸೆಳೆಯುವಂತಿದೆ. ಈ ಚಿತ್ರ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ.