“ರಾಬರ್ಟ್‌’ಗೆ ಮೆಹ್ರೀನ್‌ ಜೋಡಿ?


Team Udayavani, Aug 28, 2019, 3:04 AM IST

robert

ಇತ್ತೀಚೆಗಷ್ಟೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ ತೆರೆಕಂಡು, ಸದ್ಯ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದುಯೋಧನನ ಗೆಟಪ್‌ನಲ್ಲಿ ತೆರೆಮೇಲೆ ಅಬ್ಬರಿಸಿರುವ ದರ್ಶನ್‌ ಅವರನ್ನು ಕಂಡ ಅಭಿಮಾನಿಗಳು ಕೂಡ ಫ‌ುಲ್‌ ಖುಷಿಯಾಗಿದ್ದಾರೆ. ಮತ್ತೂಂದೆಡೆ, ಗಳಿಕೆಯಲ್ಲೂ ದಾಖಲೆ ಬರೆಯಲು ಹೊರಟಿರುವ “ಕುರುಕ್ಷೇತ್ರ’ ಗಲ್ಲಾ ಪೆಟ್ಟಿಗೆಯಲ್ಲೂ ಮುನ್ನುಗ್ಗುತ್ತಿದೆ. ಇವೆಲ್ಲದರ ನಡುವೆಯೇ ಚಾಲೆಂಜಿಂಗ್‌ ಸ್ಟಾರ್‌ ಅಭಿನಯದ ಮುಂಬರುವ “ರಾಬರ್ಟ್‌’ ಚಿತ್ರದ ಕಾರ್ಯಗಳೂ ಕೂಡ ಭರದಿಂದ ನಡೆಯುತ್ತಿದೆ.

ಈಗಾಗಲೆ ಸದ್ದಿಲ್ಲದೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ “ರಾಬರ್ಟ್‌’ ಚಿತ್ರತಂಡ ಈಗ ಎರಡನೆ ಹಂತದ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ ಸೆಪ್ಟಂಬರ್‌ ಎರಡನೇ ವಾರದಿಂದ “ರಾಬರ್ಟ್‌’ ಚಿತ್ರದ ಎರಡನೆ ಹಂತದ ಚಿತ್ರೀಕರಣ ಶುರುವಾಗಲಿದ್ದು, ಇದರ ನಡುವೆಯೇ ಚಿತ್ರದ ನಾಯಕಿಯ ಹೆಸರು ಅಂತಿಮವಾಗಿದೆ ಎನ್ನಲಾಗುತ್ತಿದೆ.  ಹೌದು, ದರ್ಶನ್‌ ಅವರ ಚಿತ್ರಗಳೆಂದರೆ ಸಾಕಷ್ಟು ಕಲರ್‌ಫ‌ುಲ್‌ ಆಗಿರುವುದರಿಂದ, ಅಲ್ಲಿ ನಾಯಕಿಯರನ್ನು ಸಾಕಷ್ಟು ಅಳೆದು -ತೂಗಿ ಆಯ್ಕೆ ಮಾಡಲಾಗುತ್ತದೆ.

ಹಾಗಾಗಿ ಪ್ರತಿ ಬಾರಿ ಅಭಿಮಾನಿಗಳಲ್ಲಿ, ಚಿತ್ರರಂಗದಲ್ಲಿ ದರ್ಶನ್‌ ಹೊಸಚಿತ್ರಕ್ಕೆ ಹೀರೋಯಿನ್‌ ಯಾರಾಗಬಹುದು ಎಂಬ ನಿರೀಕ್ಷೆ, ಲೆಕ್ಕಾಚಾರ ಓಡುತ್ತಲೇ ಇರುತ್ತದೆ. ಅದರಂತೆ, ಈಗ ದರ್ಶನ್‌ ಹೊಸಚಿತ್ರ “ರಾಬರ್ಟ್‌’ಗೆ ಮೆಹ್ರೀನ್‌ ಫಿರ್ಜಾದಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬುದು ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಪಂಜಾಬಿ ಮೂಲದ ಮಾಡೆಲ್‌ ಮೇಹ್ರೀನ್‌ ಫಿರ್ಜಾದಾ ತೆಲುಗಿನ “ಕೃಷ್ಣಗಾದಿ ವೀರ ಪ್ರೇಮಗಾಧಾ’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಚೆಲುವೆ.

ನಂತರ ತೆಲುಗಿನ “ಮಹಾನುಭಾವುಡು’, “ಕೇರಾಫ್ ಸೂರ್ಯ’, “ಜವಾನ್‌’, “ರಾಜ ದಿ ಗ್ರೇಟ್‌’, ಹಿಂದಿಯಲ್ಲಿ ಅನುಷ್ಕಾ ಶರ್ಮಾ ಅಭಿನಯದ “ಫಿಲೌರಿ’, ತಮಿಳಿನ “ನೋಟ’, “ಪಟ್ಟಾಸ್‌’ ಚಿತ್ರಗಳಲ್ಲಿ ಅಭಿನಯಿಸಿರುವ ಮೆಹ್ರೀನ್‌, ಸದ್ಯ ತೆಲುಗು, ತಮಿಳು, ಹಿಂದಿ, ಪಂಜಾಬಿ ಚಿತ್ರರಂಗದಲ್ಲಿ ಚಿರಪರಿಚಿತ ನಟಿ. ಸದ್ಯ ದಕ್ಷಿಣ ಭಾರತದ ಬೇಡಿಕೆಯ ನಾಯಕಿಯರ ಪಟ್ಟಿಯಲ್ಲಿರುವ ಮೆಹ್ರೀನ್‌ ಈಗ “ರಾಬರ್ಟ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಕೂಡ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ, ರಾಕುಲ್‌ ಪ್ರೀತ್‌ ಸಿಂಗ್‌, ಸಾಯಿ ಪಲ್ಲವಿ, ಕೀರ್ತಿ ಸುರೇಶ್‌ ಮೊದಲಾದ ನಾಯಕಿಯರ ಹೆಸರು “ರಾಬರ್ಟ್‌’ ಚಿತ್ರದಲ್ಲಿ ಕೇಳಿ ಬಂದಿತ್ತಾದರೂ, ಚಿತ್ರತಂಡ ಮಾತ್ರ ಇದ್ಯಾವುದರ ಬಗ್ಗೆಯೂ ತುಟಿಬಿಚ್ಚಿರಲಿಲ್ಲ. ಈಗ ಮೆಹ್ರೀನ್‌ ಬಗ್ಗೆಯೂ ಇಂಥದ್ದೊಂದು ಸುದ್ದಿ ಹರಿದಾಡುತ್ತಿದ್ದು, ಚಿತ್ರತಂಡ ಮಾತ್ರ ಈ ಕುರಿತು ಏನನ್ನೂ ಖಚಿತಪಡಿಸಿಲ್ಲ.

“ರಾಬರ್ಟ್‌’ ಚಿತ್ರದ ಎರಡನೆ ಹಂತದ ಚಿತ್ರೀಕರಣ ಸೆಪ್ಟೆಂಬರ್‌ ಎರಡನೆ ವಾರದಿಂದ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಾರಂಭವಾಗಲಿದ್ದು, ಸುಮಾರು 15 ದಿನಗಳ ಕಾಲ ಎರಡನೇ ಹಂತದ ಚಿತ್ರೀಕರಣ ಮಾಡಲು ಎನ್ನಲಾಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎರಡನೆ ಹಂತದ ಚಿತ್ರೀಕರಣ ಮಾಡಲಾಗುತ್ತೆ. ಈಗಾಗಲೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ಗುಸುಗುಸು ನಿಜವಾದರೆ, ಮೆಹ್ರೀನ್‌ “ರಾಬರ್ಟ್‌’ ಚಿತ್ರದ ಎರಡನೆ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಟಾಪ್ ನ್ಯೂಸ್

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

1-sdsa-d

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಎಚ್ ಡಿ ಕೋಟೆಯಲ್ಲಿ 77ನೇ ದಿನ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನೇರಿ ಸಿನಿಮಾ

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

akshith shashikumar’s seethayana release on May 27th

ಶಶಿಕುಮಾರ್‌ ಪುತ್ರ ಅಕ್ಷಿತ್ ಚೊಚ್ಚಲ ಚಿತ್ರ ‘ಸೀತಾಯಣ’ ಮೇ 27ಕ್ಕೆ ರಿಲೀಸ್‌

gadang-rakkamma

ವಿಕ್ರಾಂತ್‌ ರೋಣ ಹವಾ ಶುರು; ಇಂದು ಗಡಂಗ್‌ ರಕ್ಕಮ್ಮ… ಹಾಡು ರಿಲೀಸ್‌

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

result

‌ಫಲಿತಾಂಶದಿಂದ ಕಾಂಗ್ರೆಸ್‌ಗೆ ಮರ್ಮಾಘಾತ ­

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.