ಮಿಲನ ಈಗ ಲವ್‌ಯು ಚಿನ್ನು…!

ಇದು ಲವ್‌ಮಾಕ್ಟೇಲ್‌ ಎಫೆಕ್ಟ್

Team Udayavani, Jan 28, 2020, 7:04 AM IST

ಇದೇ ಮೊದಲ ಬಾರಿಗೆ ನಟನೆ ಜೊತೆ ನಿರ್ದೇಶನಕ್ಕಿಳಿದಿರುವ ಹೀರೋ “ಮದರಂಗಿ’ ಕೃಷ್ಣ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ “ಲವ್‌ ಮಾಕ್ಟೇಲ್‌’ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್‌ ಹಾಗು ಹಾಡುಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಅದರಲ್ಲೂ “ಲವ್‌ ಯು ಚಿನ್ನ’ ಹಾಡಂತೂ ವೈರಲ್‌ ಆಗಿರುವುದರಿಂದ ನಿರ್ದೇಶಕ ಕಮ್‌ ಹೀರೋ “ಮದರಂಗಿ’ ಕೃಷ್ಣ ಖುಷಿಯಲ್ಲಿದ್ದಾರೆ. ಅವರಷ್ಟೇ ಅಲ್ಲ, ಕೃಷ್ಣ ಜೊತೆಗೆ ನಿರ್ಮಾಣಕ್ಕಿಳಿದು ನಾಯಕಿಯಾಗಿ ನಟಿಸಿರುವ ಮಿಲನಾ ನಾಗರಾಜ್‌ ಕೂಡ ಸಂತಸದಲ್ಲಿದ್ದಾರೆ.

ಅದೇ ಖುಷಿಯಲ್ಲೇ ಅವರು ಸೋಮವಾರ ಸಂಜೆ ಮತ್ತೂಂದು ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ರಘು ದೀಕ್ಷಿತ್‌ ಸಂಗೀತವಿರುವ, ರಾಘವೇಂದ್ರ ಕಾಮತ್‌ ಬರೆದಿರುವ “ನೀನೆ ಎಂದಿಗೂ…’ ಹಾಡಿಗೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದುವರೆಗೆ ಚಿತ್ರದ ನಾಯಕಿ ಮಿಲನಾ ನಾಗರಾಜ್‌ ಅವರನ್ನು ಎಲ್ಲೇ ಹೋದರೂ, ಜನರು ಅವರನ್ನು “ಬೃಂದಾವನ’ ಮಿಲನ ಎಂದು ಕರೆಯುತ್ತಿದ್ದರಂತೆ. ಈಗ ಮಾಲ್‌ ಮತ್ತಿತರೆ ಸ್ಥಳಗಳಲ್ಲಿ ಹೋದಾಗ, ನೋಡಿದವರೆಲ್ಲರೂ “ಲವ್‌ ಯು ಚಿನ್ನ…’ ಅಂತ ಹಾಡುವ ಮೂಲಕ ಗುರುತಿಸುತ್ತಿದ್ದಾರಂತೆ.

ಹೀಗಾಗಿ, “ಲವ್‌ ಮಾಕ್ಟೇಲ್‌’ ಬಗ್ಗೆ ಹೆಚ್ಚು ನಿರೀಕ್ಷೆ ಎಂಬುದು ನಾಯಕಿ ಮಿಲನಾ ಅವರ ಮಾತು. 2020 ರಲ್ಲಿ “ಲವ್‌ ಮಾಕ್ಟೇಲ್‌’ ಯೂಥ್‌ಗೊಂದು ಫೇವರೇಟ್‌ ಲವ್‌ಸ್ಟೋರಿ ಸಿನಿಮಾ ಆಗಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಿಲನಾ ಮತ್ತು ಕೃಷ್ಣ, ಇಲ್ಲಿ ಸಿನಿಮಾ ನೋಡಿದವರೆಲ್ಲರೂ ಸಹ, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಜೊತೆಗೆ ನಾವೂ ಹೀಗೆ ಇರಬೇಕಿತ್ತಲ್ವಾ, ಈಗಾದರೂ ಹಾಗೆ ಇರೋಕೆ ಪ್ರಯತ್ನ ಪಡೋಣ ಎಂಬ ಯೋಚನೆ ಬಂದೇ ಬರುತ್ತೆ. ಅಷ್ಟರಮಟ್ಟಿಗೆ “ಲವ್‌ ಮಾಕ್ಟೇಲ್‌’ ಹೊಸ ಫೀಲ್‌ ಕಟ್ಟಿಕೊಡುತ್ತದೆ’ ಎನ್ನುತ್ತಾರೆ ಅವರು.

ಅಂದಹಾಗೆ, ನೂರು ಪ್ಲಸ್‌ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಇಡೀ ಚಿತ್ರದ ಹೈಲೈಟ್‌ ಅಂದರೆ, ಅದು ಕಥೆ ಮತ್ತು ಸಂಗೀತ ಎನ್ನುವ ಮಿಲನಾ, ರಘುದೀಕ್ಷಿತ್‌ ಅವರ ಸಂಗೀತ ಇಲ್ಲಿ ಮ್ಯಾಜಿಕ್‌ ಮಾಡಿದೆ. ನಮಗಂತೂ ಸಿನಿಮಾ ಮೇಲೆ ಸಾಕಷ್ಟು ನಂಬಿಕೆ ಇದೆ. ಜನರಿಗೆ ಖಂಡಿತ ನಿರೀಕ್ಷೆ ಸುಳ್ಳಾಗಲ್ಲ. ಅದರಲ್ಲೂ ಯೂಥ್‌ಗೆ ಇದು ಆಕರ್ಷಣೆ ಮಾಡುವ ಸಿನಿಮಾ ಆಗಿ ಮೂಡಿಬಂದಿದೆ. ಈ ವರ್ಷದ ಬೆಸ್ಟ್‌ ಲವ್‌ಸ್ಟೋರಿ ಸಿನಿಮಾ ಎಂಬುದನ್ನು ಗ್ಯಾರಂಟಿ ಕೊಡುತ್ತೇವೆ ಎನ್ನುವ ಅವರಿಗೆ ಸುದೀಪ್‌ ಸರ್‌ ಸಿನಿಮಾದ ಟ್ರೇಲರ್‌ಗೆ ವಾಯ್ಸ್ ಕೊಟ್ಟಿರುವುದು ಪ್ಲಸ್‌ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಬಂದಿದೆ.

“ಇದೊಂದು ಎಮೋಷನಲ್‌ ಲವ್‌ಸ್ಟೋರಿಯಾಗಿದ್ದು, ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ ಕೂಡ ಇದೆ. ಚಿತ್ರದಲ್ಲಿ ಹಲವು ವಿಶೇಷತೆಗಳಿದ್ದು, ಅವೆಲ್ಲವನ್ನೂ ಚಿತ್ರಮಂದಿರದಲ್ಲೇ ನೋಡಬೇಕು’ ಎಂದಷ್ಟೇ ಹೇಳುತ್ತಾರೆ ಅವರು. ಜಾಕ್‌ಮಂಜು ಚಿತ್ರ ವಿತರಣೆ ಮಾಡುತ್ತಿದ್ದು, ಜನವರಿ 31ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಮೃತ ಅಯ್ಯಂಗಾರ್‌, ರಚನಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಶ್ರೀ ಕ್ರೇಜಿಮೈಂಡ್ಸ್‌ ಸಂಕಲನದ ಜೊತೆಯಲ್ಲಿ ಛಾಯಾಗ್ರಹಣವನ್ನೂ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ