ಮಿಸ್ಸಿಂಗ್ಬಾಯ್ಗೆ ಮೆಚ್ಚುಗೆ
Team Udayavani, Mar 17, 2019, 5:41 AM IST
ಕೆಲವು ಸಿನಿಮಾಗಳು ನಮ್ಮ ಚಿತ್ರರಂಗದ ಜೊತೆಗೆ ಪರಭಾಷಾ ಚಿತ್ರರಂಗದ ಗಮನವನ್ನು ಸೆಳೆಯುತ್ತದೆ. ಈಗ ಒಂದು ಚಿತ್ರ ಹೀಗೆ ಪರಭಾಷಾ ಗಮನ ಸೆಳೆದಿದೆ. ಅದು “ಮಿಸ್ಸಿಂಗ್ ಬಾಯ್’. ರಘುರಾಮ್ ನಿರ್ದೇಶನದ “ಮಿಸ್ಸಿಂಗ್ ಬಾಯ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇದೇ 22 ರಂದು ತೆರೆಕಾಣುತ್ತಿದೆ.
ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಕನ್ನಡದ ಹಲವು ನಟ-ನಟಿಯರು, ನಿರ್ದೇಶಕರು ಮೆಚ್ಚುಗೆ ಸೂಚಿಸಿದ್ದು, ಈಗ ಪರಭಾಷೆಯ ಮಂದಿ ಕೂಡಾ ಟ್ರೇಲರ್ ಮೆಚ್ಚಿದ್ದಾರೆ. ನಟಿ ಪ್ರಿಯಾ ಆನಂದ್, ನಾನಿ ಟ್ರೇಲರ್ ನೋಡಿ ಖುಷಿಪಟ್ಟು, ಚಿತ್ರಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ “ಮಿಸ್ಸಿಂಗ್ ಬಾಯ್’ ತಂಡ ಖುಷಿಯಾಗಿದೆ.
ಗುರುನಂದನ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಅರ್ಚನಾ ಜಯಕೃಷ್ಣ ನಾಯಕಿ. ಇದು ನೈಜ ಘಟನೆಯಾಧರಿಸಿದ ಚಿತ್ರವಾಗಿದ್ದು, ತಾಯಿಯನ್ನು ಹುಡುಕಿಕೊಂಡು ತಾಯ್ನಾಡಿಗೆ ಬರುವ ಮಗನ ಕಥೆಯನ್ನು ಹೊಂದಿದೆ. ಟ್ರೇಲರ್ಗೆ ಶಿವರಾಜಕುಮಾರ್ ಧ್ವನಿ ನೀಡಿದ್ದು, ಇತ್ತೀಚೆಗೆ ಸುದೀಪ್ ಬಿಡುಗಡೆ ಮಾಡಿದ್ದಾರೆ.