- Monday 16 Dec 2019
ಹೊಸ ಲುಕ್‍ನಲ್ಲಿ ಮಿತ್ರ
ಕಥೆ ಬರೆದವ ನಾನಲ್ಲ ಚಿತ್ರದಲ್ಲಿ ನಟನೆ
Team Udayavani, Nov 19, 2019, 6:02 AM IST
ನಟ ಮಿತ್ರ “ರಾಗ’ ನಂತರ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುವುದರ ಜೊತೆಯಲ್ಲಿ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡರು. ಅದರ ಜೊತೆ ಜೊತೆಯಲ್ಲೇ, ತಮಗೆ ಸರಿಹೊಂದುವ ಕಥೆಗಳನ್ನು ಒಪ್ಪುವ ಮೂಲಕ ಚಿತ್ರಗಳಲ್ಲೂ ಪ್ರಮುಖ ಪಾತ್ರ ನಿರ್ವಹಿಸಲು ಮುಂದಾದರು. ಕೈಯಲ್ಲಿ ಮೂರು ಚಿತ್ರಗಳು ಇರುವಾಗಲೇ ಅವರೀಗ ಮತ್ತೂಂದು ವಿಭಿನ್ನ ಕಥಾಹಂದರವಿರುವ ಚಿತ್ರ ಒಪ್ಪಿದ್ದಾರೆ. ಆ ಚಿತ್ರಕ್ಕೆ “ಕಥೆ ಬರೆದವ ನಾನಲ್ಲ’ ಎಂದು ಹೆಸರಿಡಲಾಗಿದೆ.
ಶೀರ್ಷಿಕೆಯಲ್ಲೇ ವಿಶೇಷ ಅರ್ಥವಿದೆ ಅಂದಮೇಲೆ, ಕಥೆ ಮತ್ತು ಪಾತ್ರದಲ್ಲೂ ಅಂಥದ್ದೇ ಗಟ್ಟಿ ಅಂಶಗಳು ಅಡಕವಾಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚಿತ್ರಕ್ಕೆ ನಮ್ ಋಷಿ ನಿರ್ದೇಶಕರು. ಕಥೆ,ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಡಿ.ಪಿ.ವೆಂಕಟೇಶ್ ಈ ಚಿತ್ರದ ನಿರ್ಮಾಪಕರು. ಈ ಹಿಂದೆ ಮಿತ್ರ ಅವರ “ರಾಗ’ ಮತ್ತು “ಪರಸಂಗ’ ಚಿತ್ರಗಳನ್ನು ನೋಡಿ ಇಷ್ಟಪಟ್ಟು, ಈಗ ಮಿತ್ರ ಅವರಿಗೊಂದು ಸಿನಿಮಾ ಮಾಡುವ ಸಲುವಾಗಿಯೇ “ಕಥೆ ಬರೆದವ ನಾನಲ್ಲ’ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಕಥೆ ಎಷ್ಟು ವಿಭಿನ್ನವಾಗಿದೆಯೋ, ಮಿತ್ರ ಅವರ ಪಾತ್ರವೂ ಅಷ್ಟೇ ವಿಶೇಷವಾಗಿರಲಿದೆ ಎಂಬುದು ನಿರ್ದೇಶಕರ ಮಾತು. ಸದ್ಯಕ್ಕೆ ಮಿತ್ರ ಸಿನಿಮಾದ ಹೈಲೈಟ್ ಆಗಿದ್ದು, ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯುತ್ತಿದೆ. ಕಥೆ ಕುರಿತು ಹೇಳುವ ನಿರ್ದೇಶಕರು, “ಸಾವಿನ ಮನೆಯಲ್ಲಿ ಹಾಡು ಹೇಳುವ, ತತ್ವ ಪದ ಹಾಡುವ, ಭಜನೆ ಮಾಡುವ ವ್ಯಕ್ತಿಯೊಬ್ಬನ ಕಥೆ ಹೇಳಲು ಹೊರಟಿದ್ದೇನೆ. ಜಗತ್ತಿನಲ್ಲಿ ಎಲ್ಲವನ್ನೂ ಅರಿತಂತಹ ಒಬ್ಬ ಸ್ವಾಭಿಮಾನಿ, ದ್ವೇಷದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು, ತನ್ನಷ್ಟಕ್ಕೆ ತಾನು ಮೌಲ್ಯಗಳನ್ನು ರೂಪಿಸಿಕೊಳ್ಳಲು ಹೊರಡುವ ವ್ಯಕ್ತಿ ಕುರಿತ ಚಿತ್ರಣ ಇಲ್ಲಿದೆ.
ದುಃಖವಿರಲಿ, ಸಂಭ್ರಮವೇ ಇರಲಿ ಅಲ್ಲಿ ಆಶುಕವಿಯ ಹಾಗೆ ಪದಗಳನ್ನು ಹಾಡುವ ಮೂಲಕ ಎಲ್ಲರ ಭಾವನೆಗಳಿಗೆ ಸ್ಪಂದಿಸುವಂತಹ ಪಾತ್ರ ಮಿತ್ರ ಅವರದ್ದು. ಅವರಿಲ್ಲಿ 50 ಪ್ಲಸ್ ವಯಸ್ಸಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೊಂದು ಅಪ್ಪ, ಮಗಳ ಭಾವುಕ ಪಯಣ ಹೊಂದಿದೆ. ಚಿತ್ರದಲ್ಲಿ ಆರು ಹಾಡುಗಳು ಇರಲಿದ್ದು, ಇದೊಂದು ಸಂಗೀತ ಪ್ರಧಾನ ಸಿನಿಮಾ ಆಗಲಿದೆ’ ಎಂಬ ವಿವರ ಕೊಡುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಶ್ರೀಗುರು ಸಂಗೀತವಿದ್ದು, ಶಂಕರ್ ಛಾಯಾಗ್ರಹಣವಿದೆ. ಕೆ.ಪಿ.ಕುಮಾರ್ ಸಂಕಲನ ಮಾಡಲಿದ್ದಾರೆ. ಸುಮಾರು 40 ದಿನಗಳ ಕಾಲ ಮಡಿಕೇರಿ ಮತ್ತು ಬೆಂಗಳೂರಲ್ಲಿ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡಕ್ಕಿದೆ.
ಈ ವಿಭಾಗದಿಂದ ಇನ್ನಷ್ಟು
-
ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಚೇಸ್. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್...
-
"ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್, ನೀವು ಸುಮ್ಮನೆ...
-
ದರ್ಶನ್ ಅಭಿನಯದ "ಒಡೆಯ' ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು "ಒಡೆಯ'ದಲ್ಲಿರುವುದರಿಂದ...
-
ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ...
-
ಸುಮಾರು ಹದಿನೆಂಟು ವರ್ಷಗಳ ಹಿಂದೆ "ಗಟ್ಟಿಮೇಳ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್. ಮಹೇಂದರ್, ಈಗ "ಶಬ್ಧ' ಚಿತ್ರದಲ್ಲಿ ಮತ್ತೂಮ್ಮೆ...
ಹೊಸ ಸೇರ್ಪಡೆ
-
ಗದಗ: ಜಿಲ್ಲಾಸ್ಪತ್ರೆ ಕಟ್ಟಡ ಹಿಂಭಾಗದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ತುರ್ತು ವೈದ್ಯಕೀಯ, ಪೊಲೀಸ್ ನೆರವು, ಚಿಕಿತ್ಸೆ, ಕಾನೂನು ನೆರವು ಹಾಗೂ ಸಮಾಲೋಚನೆ...
-
ಬೆಂಗಳೂರು: ಎಸ್ ಸಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮದಡಿ ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಶ್ರೀ...
-
ಬೀದರ: ಬರವಣೆಗೆ ಒಂದು ಮನೋವೈಜ್ಞಾನಿಕ ಕ್ರಮ. ನಮ್ಮೊಳಗಿನ ನೇತ್ಯಾತ್ಮಕ ವಿಚಾರಧಾರೆ ಮತ್ತು ಒತ್ತಡ ಕಡಿಮೆ ಮಾಡಬಲ್ಲ ಸಾಧನವೆಂದರೆ ಅದು ಬರವಣಿಗೆ. ತಂತ್ರಜ್ಞಾನ...
-
ಹುಬ್ಬಳ್ಳಿ: ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಹೂಡಿಕೆ ಆಕರ್ಷಣೆ ನಿಟ್ಟಿನಲ್ಲಿ ನಾನು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿ ಡಿಸೆಂಬರ್...
-
ಶರತ್ ಭದ್ರಾವತಿ ಶಿವಮೊಗ್ಗ: ಒಂದು ಕಡೆ ಹೊಸ ಬಡಾವಣೆ ಮಾಡಲು ರಿಯಲ್ ಎಸ್ಟೇಟ್ ಉದ್ದಿಮೆದಾರರು ಮುಂದಾಗುತ್ತಿಲ್ಲ. ಇನ್ನೊಂದು ಕಡೆ ಬಡವರು, ಮಧ್ಯಮ ವರ್ಗದ ಜನರಿಗೆ...