“ಬೀದಿದೀಪ’ದಡಿ ಮಿತ್ರನ ಬದುಕು-ಬವಣೆ!

ರಸ್ತೆ ಬದಿ ನಿಲ್ಲುವ ಜನರ ಕಥೆ-ವ್ಯಥೆ

Team Udayavani, Mar 1, 2020, 7:03 AM IST

BEEDI-DEEPA

ಕನ್ನಡದಲ್ಲಿ ಈಗ ಹೊಸ ಬಗೆಯ ಕಥೆಗಳೊಂದಿಗೆ ಚಿತ್ರಗಳು ಸೆಟ್ಟೇರುತ್ತಿವೆ. ಅದರಲ್ಲೂ ಕಂಟೆಂಟ್‌ ಸಿನಿಮಾಗಳದ್ದೇ ಕಾರುಬಾರು. ಆ ಸಾಲಿಗೆ ಈಗ “ಬೀದಿ ದೀಪ’ ಎಂಬ ಸಿನಿಮಾ ಕೂಡ ಸೇರಿದೆ. ಹೌದು, “ಬೀದಿ ದೀಪ’ ಚಿತ್ರ ಈಗಾಗಲೇ ಸದ್ದಿಲ್ಲದೆಯೇ ಶೇ.80 ರಷ್ಟು ಚಿತ್ರೀಕರಣಗೊಂಡಿದೆ. ಈ ಚಿತ್ರದ ಪ್ರಮು ಪಾತ್ರದಲ್ಲಿ ಹಾಸ್ಯ ನಟ ಮಿತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ “ದೂದ್‌ ಸಾಗರ್‌’ ಚಿತ್ರ ನಿರ್ದೇಶಿಸಿದ್ದ ಸ್ಯಾಮ್ಯುಯಲ್‌ ಟೋನಿ.

“ನೀವು ಕರೆ ಮಾಡಿದ ಚಂದದಾರರು’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆ ಗ್ಯಾಪ್‌ನಲ್ಲೇ “ಬೀದಿ ದೀಪ‌’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ “ಬೀದಿ ದೀಪ’ ಕುರಿತು ಹೇಳುವ ಸ್ಯಾಮ್ಯುಯಲ್‌ ಟೋನಿ, “ಇದೊಂದು ಬೀದಿ ದೀಪದ ಕೆಳಗೆ ನಡೆಯುವ ಕಥೆ. ಬೀದಿ ದೀಪ ಪಬ್ಲಿಕ್‌ ಪ್ರಾಪರ್ಟಿ. ರಾತ್ರಿ ಬೆಳಕಲ್ಲಿ ಅದೆಷ್ಟೋ ಮಹಾನ್‌ ವ್ಯಕ್ತಿಗಳು ಓದಿ, ಪ್ರಸಿದ್ಧರಾಗಿರುವ ಉದಾಹರಣೆಗಳಿವೆ.

ಬೀದಿ ದೀಪಕ್ಕೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲ. ಆ ದೀಪದಡಿ ಎಲ್ಲಾ ವರ್ಗದ ಜನರೂ ನಿಲ್ಲುತ್ತಾರೆ, ಆಶ್ರಯ ಪಡೆಯುತ್ತಾರೆ. ಹಾಗೆಯೇ, ನಮ್ಮ “ಬೀದಿ ದೀಪ’ದ ಕೆಳಗೆ ನಿಲ್ಲುವ ಒಂದಷ್ಟು ಜನರ ಕಥೆ ಮತ್ತು ವ್ಯಥೆ ಚಿತ್ರದ ಹೈಲೈಟ್‌’ ಎಂದು ವಿವರಿಸುತ್ತಾರೆ ಸ್ಯಾಮ್ಯುಯಲ್‌ ಟೋನಿ.  “ಬೀದಿ ದೀಪ’ದ ಕೆಳಗೆ ಒಂದು ಸಣ್ಣ ಘಟನೆ ನಡೆಯುತ್ತೆ. ಅಲ್ಲಿಂದ ಸಸ್ಪೆನ್ಸ್‌ ಥ್ರಿಲ್ಲರ್‌ನಲ್ಲೇ ಕಥೆ ಸಾಗುತ್ತೆ. ಮುಂದೆ ಏನಾಗುತ್ತೆ ಎಂಬುದು ಕಥೆ.

ಒಟ್ಟಾರೆ, ಬೀದಿ ದೀಪದ ಕೆಳಗಿರುವವರ ಬದುಕು ಅನಾವರಣಗೊಳಿಸುವ ಕಥೆ ಹೊಂದಿದೆ ಎಂದು ಹೇಳುವ ನಿರ್ದೇಶಕರು, ಚಿತ್ರದಲ್ಲಿ ಮಿತ್ರ ಅವರು ಹೈಲೆಟ್‌. ಇಡೀ ಕಥೆ ಅವರ ಸುತ್ತ ಸಾಗುತ್ತೆ. ಅವರಿಲ್ಲಿ ಲೋಕಲ್‌ ಲಾಡ್ಜ್ವೊಂದರ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಮಾಡದ ಪಾತ್ರವದು, ಅವರ ಪಾತ್ರದ ಗೆಟಪ್‌, ಭಾಷೆ ಎಲ್ಲವೂ ವಿಭಿನ್ನವಾಗಿರಲಿದೆ. ಅವರ ಲಾಡ್ಜ್ನಲ್ಲೊಂದು ಸಣ್ಣ ಘಟನೆ ನಡೆಯುತ್ತೆ. ಅದೇ ಚಿತ್ರದ ತಿರುವಿಗೆ ಕಾರಣವಾಗುತ್ತೆ. ಸದ್ಯಕ್ಕೆ ಶೇ.80 ರಷ್ಟು ಚಿತ್ರೀಕರಣ ನಡೆದಿದೆ.

ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಿದ್ದು, ಬಹುತೇಕ ರಾತ್ರಿಯಲ್ಲೇ ಚಿತ್ರಿಸಲಾಗಿದೆ. ಚಿತ್ರದಲ್ಲಿ ರಾಮ್‌ಚೇತನ್‌ ಎಂಬ ಹೊಸ ಪ್ರತಿಭೆ, ಪೂಜಾ ಇತರರು ಇದ್ದಾರೆ. ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ನಟಿಯೊಬ್ಬರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಅವರು ಯಾರೆಂಬುದು ಸಸ್ಪೆನ್ಸ್‌. ಆ ಪಾತ್ರ ಕೂಡ ಚಿತ್ರದ ಇನ್ನೊಂದು ಹೈಲೈಟ್‌’ ಎಂಬುದು ಸ್ಯಾಮ್ಯುಯಲ್‌ ಮಾತು. ಅಂದಹಾಗೆ, ವಾನರ ಸಿನಿ ವರ್ಲ್ಡ್ ಬ್ಯಾನರ್‌ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ. ನಾಗೇಶ್‌ ಆಚಾರ್ಯ ಛಾಯಾಗ್ರಹಣವಿದೆ. ಗೌತಮ್‌ ಶ್ರೀವತ್ಸ ಅವರ ಸಂಗೀತವಿದೆ.

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.