ಮೌನಂ’ ಚಿತ್ರದ ಮೋಸ್ಟ್ ಎಕ್ಸ್ಪೆಕ್ಟೆಡ್ ವಿಡಿಯೋ ಸಾಂಗ್ ರಿಲೀಸ್..!!

Team Udayavani, Feb 13, 2020, 6:48 PM IST

ಮಯೂರಿ, ಬಾಲಾಜಿ ಶರ್ಮಾ ಅಭಿನಯದ ‘ಮೌನಂ’ ಚಿತ್ರ ಇದೇ ತಿಂಗಳ 21ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಒಂದೊಂದೇ ಹಾಡುಗಳ ಹಂಗಾಮ ಶುರುವಿಟ್ಟುಕೊಂಡಿರೋ ಈ ಚಿತ್ರತಂಡ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಸಾಂಗ್ವೊಂದನ್ನು ಗಾನಪ್ರಿಯರಿಗೆ ಉಣಬಡಿಸಿದೆ.

ಅಪ್ಪ-ಮಗನ ಮಧುರ ಬಾಂದವ್ಯ ಇರೋ ‘ಕಂದ ನಿನ್ನ ಕನಸಿಗೆ’ ವಿಡಿಯೋ ಸಾಂಗ್ ಸೋಶಿಯಲ್  ಮೀಡಿಯಾಗಳಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಪಡೆದುಕೊಂಡಿದೆ. ಆಕಾಶ್ ಎಸ್ ಬರೆದಿರೋ ಅರ್ಥಗರ್ಭಿತ ಸಾಹಿತ್ಯಕ್ಕೆ ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ಜೀವ ತುಂಬಿದ್ದು, ಆರವ್ ರಿಶಿಕ್ ಮಧುರ ಸಂಗೀತ ಮುದ ನೀಡುತ್ತಿದೆ.

ಈ ಹಾಡು ಟ್ರೆಂಡ್ ಸೃಷ್ಟಿಸಿದ್ದು ವರ್ಷದ ಹಿಟ್ ಸಾಂಗ್ಆ ಗೋದ್ರಲ್ಲಿ ಡೌಟೇ ಇಲ್ಲ. ‘ಮೌನಂ’ ಚಿತ್ರ ಫೆಬ್ರವರಿ 21ಕ್ಕೆ ಥ್ರಿಯೇಟರ್ ಅಂಗಳಕ್ಕೆ ಬರಲು ರೆಡಿಯಾಗಿದೆ. ನಟಿ ಮಯೂರಿ ಈ ಚಿತ್ರದಲ್ಲಿ ಎರಡು ಶೇಡ್ನಲ್ಲಿ ಬಣ್ಣಹಚ್ಚಿದ್ದು, ರಗಡ್ ಹಾಗೂ ಹೋಂಮ್ಲಿ ಪಾತ್ರದಲ್ಲಿ ಮಿಂಚಿದ್ದಾರೆ. ಹಿರಿಯ ನಟ ಅವಿನಾಶ್ ಆರು ಶೇಡ್ ನಲ್ಲಿ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಇವರಿಬ್ಬರ ಪಾತ್ರಗಳು ಸಖತ್ ಕ್ಯೂರಿಯಾಟಿಸಿ ಬಿಲ್ಡ್ ಮಾಡಿವೆ. ಕಥೆ, ಚಿತ್ರಕತೆ, ಸಂಭಾಷಣೆ ಜವಾಬ್ದಾರಿಯನ್ನು ನವ ನಿರ್ದೇಶಕ ರಾಜ್ ಪಂಡಿತ್ ಹೊತ್ತುಕೊಂಡಿದ್ದಾರೆ. ಶ್ರೀಹರಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಿತೇಶ್, ನಯನ, ಕೆಂಪೇಗೌಡ, ಹನುಮಂತೇಗೌಡ, ಚಿತ್ರದ ತಾರಾಬಳಗದಲ್ಲಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಇರೋ ‘ಮೌನಂ’ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಚಿತ್ರ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ ಸಿನಿರಸಿಕರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ