ಅಮ್ಮನ ಜೊತೆಗೆ ಚಿತ್ರತಾರೆಯರ ಸಾಥ್
Team Udayavani, May 29, 2018, 4:49 PM IST
ದ್ವಾರಕೀಶ್ ನಿರ್ಮಾಣದ 51ನೇ ಚಿತ್ರವಾದ “ಅಮ್ಮ ಐ ಲವ್ ಯೂ’ ಚಿತ್ರ ಜೂನ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಸೋಮವಾರ ರಾತ್ರಿ ಚಿತ್ರದ ಹಾಡುಗಳು ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಬಿಡುಗಡೆಯಾಯಿತು.
ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಧ್ರುವ ಸರ್ಜಾ, ಪ್ರಿಯಾಂಕಾ ಉಪೇಂದ್ರ, ವಸಿಷ್ಠ ಸಿಂಹ, ಸಾಧು ಕೋಕಿಲ, ವಿ. ಮನೋಹರ್, ತರುಣ್ ಸುಧೀರ್, ಮೇಘನಾ ರಾಜ್ ಸೇರಿದಂತೆ ಹಲವರು ಆಗಮಿಸಿದ್ದರು.
ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದು, ದ್ವಾರಕೀಶ್ ಮತ್ತು ಗುರುಕಿರಣ್ ಹೊಸದಾಗಿ ಪ್ರಾರಂಭಿಸಿರುವ ಡಿಜಿಕೆ ಎಂಬ ಹೊಸ ಆಡಿಯೋ ಸಂಸ್ಥೆ ಹುಟ್ಟುಹಾಕಿ, ಅದರಡಿ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕನಾಗಿ ಚಿರಂಜೀವಿ ಸರ್ಜಾ ನಟಿಸಿದರೆ ಅವರ ತಾಯಿಯಾಗಿ ಸಿತಾರಾ ಅಭಿನಯಿಸಿದ್ದಾರೆ.