“ಮುಗಿಲ್‌ಪೇಟೆ’ ಮೋಷನ್‌ ಪೋಸ್ಟರ್‌ ರಿಲೀಸ್‌

Team Udayavani, Dec 12, 2019, 5:00 AM IST

ರವಿಚಂದ್ರನ್‌ ಪುತ್ರ ಮನುರಂಜನ್‌ ಬುಧವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸದ್ಯ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯುತ್ತಿರುವ “ಮುಗಿಲ್‌ ಪೇಟೆ’ ಚಿತ್ರದ ಚಿತ್ರೀಕರಣ ಸೆಟ್‌ನಲ್ಲಿ ಚಿತ್ರತಂಡ ಹಾಗು ಅಭಿಮಾನಿಗಳೊಂದಿಗೆ ಕೇಕ್‌ ಕತ್ತರಿಸುವ ಮೂಲಕ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ಮನುರಂಜನ್‌ ಅವರ ಗೆಳೆಯರು, ಹಿತೈಷಿಗಳು ಹಾಗು ಅಭಿಮಾನಿಗಳು ಚಿತ್ರೀಕರಣದ ಸ್ಥಳಕ್ಕೆ ಹೋಗಿ, ಶುಭಾಶಯ ಹೇಳಿದ್ದಾರೆ. ಅವರ ಜೊತೆ ಸೇರಿ ಅವರು ಪ್ರೀತಿಯಿಂದ ತಂದಿದ್ದ ಕೇಕ್‌ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇನ್ನು, ಚಿತ್ರತಂಡ ಕೂಡ ಮನುರಂಜನ್‌ ಅವರ ಬರ್ತ್‌ಡೇ ಅಂಗವಾಗಿ “ಮುಗಿಲ್‌ ಪೇಟೆ’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಮೋಷನ್‌ ಪೋಸ್ಟರ್‌ ನೋಡಿದವರಿಗೆ ಅದೊಂದು ಪಕ್ಕಾ ರಗಡ್‌ ಫೀಲ್‌ ಇರುವ ಚಿತ್ರ ಅನ್ನೋದು ಗೊತ್ತಾಗುತ್ತೆ. ವಿಭಿನ್ನ ಗೆಟಪ್‌ನಲ್ಲಿರುವ ಪೋಸ್ಟರ್‌ ಇಡೀ ಚಿತ್ರದ ಆ್ಯಕ್ಷನ್‌ ಫೀಲ್‌ ಕಟ್ಟಿಕೊಡುವಂತಿದೆ. ಮೋಷನ್‌ ಪೊಸ್ಟರ್‌ ನೋಡಿರುವ ಅನೇಕರು, ಸಾಕಷ್ಟು ಕಾಮೆಂಟ್ಸ್‌ ಮಾಡಿದ್ದಾರೆ.

ಈ ಹಿಂದೆ ಮಾಡಿದ ಎರಡು ಚಿತ್ರಗಳಲ್ಲೂ ಮನುರಂಜನ್‌ ಅವರು ಸಾಫ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, “ಮುಗಿಲ್‌ ಪೇಟೆ’ ಚಿತ್ರದ ಮೋಷನ್‌ ಪೋಸ್ಟರ್‌ ಪಕ್ಕಾ ಮಾಸ್‌ ಸಿನಿಮಾದ ಸೂಚನೆ ಕೊಡುತ್ತಿದೆ. ಅಂದಹಾಗೆ, ಈ ಚಿತ್ರವನ್ನು ಭರತ್‌ ನಾವುಂದ ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಾ, ಮೋತಿ ಮಹೇಶ್‌ ನಿರ್ಮಾಣವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ಕಿಚ್ಚ ಸುದೀಪ್‌ ಅಭಿನಯಕ್ಕೆ ಈಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ "ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌...

  • ಕನ್ನಡ ಚಿತ್ರರಂಗಕ್ಕೂ ಮುಂಬೈಗೂ ಒಂದು ನಂಟಿದೆ ಎಂದರೆ ತಪ್ಪಲ್ಲ. ಅದಕ್ಕೆ ಕಾರಣ ಮುಂಬೈನಿಂದ ಕನ್ನಡ ಚಿತ್ರಗಳಿಗೆ ನಾಯಕಿಯರಾಗಿ ಸಾಕಷ್ಟು ನಟಿಯರು ಬಂದಿದ್ದಾರೆ....

  • "ಟಾಮ್‌ ಆ್ಯಂಡ್‌ ಜೆರ್ರಿ' ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಟಿ.ವಿ ಯಲ್ಲಿ ಅತ್ಯಂತ ಜನಪ್ರಿಯವಾಗಿರುವ, ಅದರಲ್ಲೂ ಮಕ್ಕಳಿಗೆ ಅಚ್ಚುಮೆಚ್ಚಿನ ಶೋ ಎಂದೇ ಜನಪ್ರಿಯವಾಗಿರುವ...

  • ಕನ್ನಡದಲ್ಲಿ ಸುಮಾರು 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ನೆಗೆಟಿವ್‌ ಶೇಡ್‌ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ವರ್ಧನ್‌, "ಹಫ್ತಾ' ಮೂಲಕ ನಾಯಕರಾಗಿ ಎಂಟ್ರಿ ಯಾ ಗಿದ್ದರು....

  • ನಟ ದುನಿಯಾ ವಿಜಯ್‌ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. "ಸಲಗ' ಎಂದು ಬರೆದಿದ್ದ ಕೇಕ್‌ ಕತ್ತರಿಸುತ್ತಿದ್ದಂತೆ...

ಹೊಸ ಸೇರ್ಪಡೆ