ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್‌ ಸೇದ್ತಾನೆ, ಕಿಸ್‌ ಮಾಡ್ತಾನೆ..

ಹಾಡು ನೋಡಿ ಕ್ರೇಜಿಸ್ಟಾರ್‌ ಕಾಮೆಂಟ್‌

Team Udayavani, Mar 9, 2020, 7:03 AM IST

praranbha

“ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್‌ ಸೇದ್ತಾನೆ, ಕಿಸ್‌ ಮಾಡ್ತಾನೆ ಅನ್ನಿಸ್ತು …’ ಕ್ರೇಜಿಸ್ಟಾರ್‌ ರವಿಚಂದ್ರನ್‌ ಹೀಗೆ ಹೇಳಿ ಪಕ್ಕದಲ್ಲಿದ್ದ ಮಗ ಮನೋರಂಜನ್‌ ಮುಖ ನೋಡಿದರು. ಅವರು ಹೀಗೆ ಹೇಳಲು ಕಾರಣ “ಪ್ರಾರಂಭ’ ಚಿತ್ರ. ಮನೋರಂಜನ್‌ ನಾಯಕರಾಗಿರುವ “ಪ್ರಾರಂಭ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ತೆರೆಮೇಲೆ ಹಾಡು ಹಾಗೂ ದೃಶ್ಯಗಳನ್ನು ನೋಡಿದ ರವಿಚಂದ್ರನ್‌ ಈ ರೀತಿ ಹೇಳಿಕೊಂಡರು.

” ಚಿತ್ರದ ಹಾಡು ನೋಡಿದಾಗ ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್‌ ಸೇದುತ್ತಾನೆ. ನನಗಿಂತಲೂ ಚೆನ್ನಾಗಿ ಕಿಸ್‌ ಮಾಡ್ತಾನೆ ಅನ್ನಿಸ್ತು. ನನಗಿಂತ ಅವನು ಏನೂ ಕಡಿಮೆ ಇಲ್ಲ ಅನ್ನೋದು ಸ್ಕ್ರೀನ್‌ನಲ್ಲಿ ಕಾಣಿಸುತ್ತಿದೆ. ನಾನೂ ಸಹ ಆರಂಭದ ದಿನಗಳಲ್ಲಿ ಅಷ್ಟೂ ಧೈರ್ಯವಾಗಿ ಕಿಸ್‌ ಮಾಡಿರಲಿಲ್ಲ. ಏಕೆಂದರೆ ನಾನು ಮನೆಗೋದ್ರೆ ಸೀನ್‌ ಆಗುತ್ತೆ, ಕ್ಲಾಸ್‌ ಇರುತ್ತೆ ಎಂದು’ ಎಂದು ನಕ್ಕರು. ಇನ್ನು, ಒಬ್ಬ ಕಲಾವಿದನಾಗಿ ತೆರೆಮೇಲೇ ಸಿಗರೇಟ್‌ ಸೇದೋದು, ಮಧ್ಯಪಾನ ಮಾಡೋದು ತಪ್ಪಲ್ಲ ಅನ್ನೋದು ರವಿಚಂದ್ರನ್‌ ಮಾತು.

“ಸಿನಿಮಾ ಕೇಳಿದಾಗ ಅದನ್ನೆಲ್ಲಾ ಒಬ್ಬ ಕಲಾವಿದನಾಗಿ ಮಾಡಬೇಕು. ಆರಾಮವಾಗಿ ಮಾಡಲಿ, ನಾನು ಅದು ಮಾಡಲ್ಲ, ಇದು ಮಾಡಲ್ಲ ಎಂದು ತಮಗೆ ತಾವೇ ಒಂದು ಬೌಂಡರಿ ಹಾಕಿಕೊಂಡು ಕೂರಲು ಹೋಗಬಾರದು’ ಎನ್ನುವ ರವಿಚಂದ್ರನ್‌, “ಮಗ ಬಂದ ಅಂತ ನಾನು ಕಿಸ್‌ ಮಾಡದೇ ಇರಲ್ಲ. ಹೀರೋಯಿನ್‌ ಬಂದರೆ, ಸ್ಕ್ರೀನ್‌ನಲ್ಲಿ ಕಿಸ್‌ ಮಾಡ್ತೀನಿ. ಅವನೂ ಮಾಡ್ಕೊಂಡು ಹೋಗಲಿ..’ ಎನ್ನುತ್ತಾ ಮಗನಿಗೆ ಶುಭಕೋರಿದರು.

ಕಿತ್ತಾಡದೇ ಫಿಲಂ ಸಿಟಿ ಮಾಡಲಿ: ಸರ್ಕಾರ ಫಿಲಂ ಸಿಟಿಗೆ 500 ಕೋಟಿ ರೂಪಾಯಿ ಮೀಸಲಿಟ್ಟ ಬಗ್ಗೆ ಮಾತನಾಡುವ ರವಿಚಂದ್ರನ್‌, “ಸರ್ಕಾರ ಅವತ್ತಿನಿಂದಲೂ ಫಿಲಂ ಸಿಟಿಗೆ ಬೆಂಬಲವಾಗಿದೆ. ಈಗ 500 ಕೋಟಿ ಮೀಸಲಿಟ್ಟಿದೆ. ಆದರೆ ನಮ್ಮ ನಮ್ಮಲ್ಲೇ ಕಿತ್ತಾಡದೇ ಯಾರಾದರೂ ಒಬ್ಬರು ಮುಂದಾಳತ್ವ ತಗೊಂಡು ಮಾಡಬೇಕು. ಬರೀ ಕಿತ್ತಾಟ ಮಾಡಿಕೊಂಡಿದ್ದರೆ ಸ್ಟುಡಿಯೋ ಆಗಲ್ಲ. ಯಾರನ್ನಾದರೂ ಒಬ್ಬರನ್ನು ನಂಬಿ ಅವರ ಕೈಗೆ ಒಪ್ಪಿಸಬೇಕು. ಸ್ಟುಡಿಯೋ ಮಾಡೋದು ಸುಲಭದ ಕೆಲಸವಲ್ಲ. ಇವತ್ತು ಹೆಜ್ಜೆ ಇಟ್ಟರೆ ಕಡಿಮೆ ಎಂದರೂ 5 ವರ್ಷ ಬೇಕು’ ಅನ್ನೋದು ರವಿಚಂದ್ರನ್‌ ಮಾತು.

ಟಾಪ್ ನ್ಯೂಸ್

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ವಿಧಾನಸಭೆಗೆ ಕೆಎಎಸ್‌ ಪ್ರಕರಣ

ವಿಧಾನಸಭೆಗೆ ಕೆಎಎಸ್‌ ಪ್ರಕರಣ

ಕಾಂಗ್ರೆಸ್‌ ಸಂಸದರಿಂದಲೇ ಬಹಿಷ್ಕಾರ

ಕಾಂಗ್ರೆಸ್‌ ಸಂಸದರಿಂದಲೇ ಬಹಿಷ್ಕಾರ

ಕೋವಿಡ್ ಲಸಿಕೆ:  ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ

ಕೋವಿಡ್ ಲಸಿಕೆ: ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vikrant rona

ಅಡ್ವೆಂಚರ್ ಹೀರೋಗಾಗಿ ಮತ್ತಷ್ಟು ಕಾಯಬೇಕು.. ‘ವಿಕ್ರಾಂತ್ ರೋಣ’ನ ದರ್ಶನ ಸದ್ಯಕ್ಕಿಲ್ಲ

ರಿಲೀಸ್‌ ಗೆ ರೆಡಿಯಾದಳು ‘ರೌಡಿ ಬೇಬಿ’

ರಿಲೀಸ್‌ ಗೆ ರೆಡಿಯಾದಳು ‘ರೌಡಿ ಬೇಬಿ’

ಶೂಟಿಂಗ್‌ನಲ್ಲಿ ಬಿಝಿಯಾದ ‘ಬಹದ್ದೂರ್‌ ಗಂಡು’

ಶೂಟಿಂಗ್‌ ನಲ್ಲಿ ಬಿಝಿಯಾದ ‘ಬಹದ್ದೂರ್‌ ಗಂಡು’

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.