ಹಾಡಲ್ಲೇ ಸಿಗಲಿದೆ ಮೈಸೂರು ದರ್ಶನ!

ಮೈಸೂರು ಡೈರೀಸ್‌ ಲಿರಿಕಲ್‌ ವಿಡಿಯೋ ಬಿಡುಗಡೆ

Team Udayavani, Dec 24, 2019, 7:01 AM IST

Mysore-Diares

“ಕಿರಿಕ್‌ ಪಾರ್ಟಿ’ ಚಿತ್ರದ “ಬೆಳಗೆದ್ದು ಯಾರ ಮುಖವ ನಾನು ನೋಡಿದೆ…’ ಹಾಡು ಬರೆದಿದ್ದ ಧನಂಜಯ್‌ ರಂಜನ್‌ “ಮೈಸೂರು ಡೈರೀಸ್‌’ ಚಿತ್ರದ ಮೂಲಕ ನಿರ್ದೇಶಕರಾಗಿರುವುದು ಎಲ್ಲರಿಗೂ ಗೊತ್ತು. ಈಗಾಗಲೇ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ, ಚಿತ್ರದ ಮೊದಲ ಲಿರಿಕಲ್‌ ವಿಡಿಯೋ ಸಾಂಗ್‌ ಸೋಮವಾರ ಸಂಜೆ ಬಿಡುಗಡೆಯಾಗಿದೆ.

ನಿರ್ದೇಶಕ ಧನಂಜಯ್‌ ರಂಜನ್‌ ಅವರೇ ಬರೆದ “ದೂರದಿಂದ ಸುರಸುಂದರಾಂಗ ಬಂದ ಜಾಣಮರೀನ್‌ ವೆಲ್‌ ಕಮ್‌ ಮಾಡೋಣ..’ ಎಂಬ ಹಾಡು ಹೊರಬಂದಿದ್ದು, ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಾಡಿಗೆ ಸುಚಿತ್‌ ಹಾಗು ಧನ್ಯಶ್‌ ಧ್ವನಿಯಾಗಿದ್ದಾರೆ. ಇದು ಚಿತ್ರದ ಇಂಟ್ರಡಕ್ಷನ್‌ ಹಾಡಾಗಿದ್ದು, “ಮೈಸೂರು ಡೈರೀಸ್‌’ ಶೀರ್ಷಿಕೆಗೆ ತಕ್ಕಂತೆ ಮೊದಲ ಹಾಡಲ್ಲಿ ಇಡೀ ಮೈಸೂರನ್ನು ವಿಶಿಷ್ಟವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದು ಚಿತ್ರತಂಡದ ಮಾತು.

ವಿದೇಶದಲ್ಲಿರುವ ಬಾಲ್ಯದ ಗೆಳೆಯನೊಬ್ಬ ಮೈಸೂರಿಗೆ ಬಂದಾಗ, ಉಳಿದ ಮೂವರು ಗೆಳೆಯರು ಆ ಬಾಲ್ಯದ ಸವಿ ನೆನಪನ್ನು ಮೆಲುಕು ಹಾಕುವಂತಹ ಸನ್ನಿವೇಶ ಈ ಇಂಟ್ರಡಕ್ಷನ್‌ ಹಾಡಲ್ಲಿದೆ. ಚಿತ್ರದ ಈ ಹಾಡಲ್ಲಿ ಮೈಸೂರಿನ ಸುಂದರ ತಾಣಗಳನ್ನು ಚಿತ್ರೀಕರಿಸಲಾಗಿದ್ದು, ಪ್ರಮುಖ ಸ್ಥಳಗಳು ಚಿತ್ರದ ಹೈಲೈಟ್‌ ಆಗಿವೆಯಂತೆ. ಚಿತ್ರದಲ್ಲಿ ಪ್ರಭು ಮುಂಡ್ಕೂರ್‌ ಹಾಗು ಪಾವನಾ ಗೌಡ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದ ಬಗ್ಗೆ ಹೇಳುವ ನಿರ್ದೇಶಕರು, “ಇದು ಮೈಸೂರಿನ ಭಾಗದಲ್ಲಿ ನಡೆಯೋ ಕಥೆ. ಮೈಸೂರು ಇಲ್ಲೊಂದು ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ನೆನಪಿನ ಡೈರಿ ಇರುತ್ತೆ. ಹಳೆಯ ಮಧುರ ನೆನಪುಗಳ ಗುಚ್ಚದೊಂದಿಗೆ ಈ ಚಿತ್ರ ಮಾಡಿದ್ದು, ಗೆಳೆತನದ ಜೊತೆಗೆ ಭಾವನೆಗಳ ಮಿಶ್ರಣದ ಚಿತ್ರಣ ಇಲ್ಲಿದೆ’ ಎನ್ನುತ್ತಾರೆ.

ಚಿತ್ರಕ್ಕೆ ಚರಣ್‌ರಾಜ್‌ ಹಾಗು ಅನೂಪ್‌ ಸೀಳಿನ್‌ ಅವರ ಸಂಗೀತವಿದೆ. ಅನೂಪ್‌ ಸೀಳಿನ್‌ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಕ್ತಿ ಶೇಖರ್‌ ಛಾಯಾಗ್ರಹಣ ಮಾಡಿದ್ದಾರೆ. ಸಿ.ಕೆ.ಸಿನಿ ಕ್ರಿಯೇಷನ್ಸ್‌ ಮತ್ತು ಸಮರ್ಥ್ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ಸುನಂದಾ ಕೃಷ್ಣಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಮಂಗಳೂರು: “ಸಂದೇಶ ಪ್ರಶಸ್ತಿ’ ಪ್ರದಾನ

ಮಂಗಳೂರು: “ಸಂದೇಶ ಪ್ರಶಸ್ತಿ’ ಪ್ರದಾನ

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫೆ. 17ಕ್ಕೆ ಅಕ್ಷಿತ್‌-ಅದಿತಿ ಜೋಡಿಯ ‘ಖೆಯೊಸ್‌’ ಚಿತ್ರ ಬಿಡುಗಡೆ

ಫೆ. 17ಕ್ಕೆ ಅಕ್ಷಿತ್‌-ಅದಿತಿ ಜೋಡಿಯ ‘ಖೆಯೊಸ್‌’ ಚಿತ್ರ ಬಿಡುಗಡೆ

‘ರಾಯಲ್‌ʼ ಆಗಿ ಎಂಟ್ರಿ ಕೊಡೋಕೆ ರೆಡಿಯಾದ ʼಕಿಸ್‌ʼ ಹುಡುಗ ವಿರಾಟ್

‘ರಾಯಲ್‌ʼ ಆಗಿ ಎಂಟ್ರಿ ಕೊಡೋಕೆ ರೆಡಿಯಾದ ʼಕಿಸ್‌ʼ ಹುಡುಗ ವಿರಾಟ್

ಶರಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; ಅರವಿಂದ್ ಕುಪ್ಲಿಕರ್ ನಿರ್ದೇಶನ

ಶರಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; ಅರವಿಂದ್ ಕುಪ್ಲಿಕರ್ ನಿರ್ದೇಶನ

KGF actor Yash with his son Yatharv

ಮಗನ ಜೊತೆ ಯಶ್‌ ತುಂಟಾಟ ವಿಡಿಯೋ ವೈರಲ್‌

ನೀವು ಈಗ ನೋಡಿರುವುದು ʼಕಾಂತಾರ-2” ಮುಂದೆ ಬರುವುದು ʼಕಾಂತಾರ -1” : ರಿಷಬ್‌ ಶೆಟ್ಟಿ

ನೀವು ಈಗ ನೋಡಿರುವುದು ʼಕಾಂತಾರ-2” ಮುಂದೆ ಬರುವುದು ʼಕಾಂತಾರ -1” : ರಿಷಬ್‌ ಶೆಟ್ಟಿ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಳವು ಸಾಬೀತು: ಆರೋಪಿಗೆ ಶಿಕ್ಷೆ

ಕಳವು ಸಾಬೀತು: ಆರೋಪಿಗೆ ಶಿಕ್ಷೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.