ನಿಗೂಢತೆಯ “ನಾಕುಮುಖ’

ಥ್ರಿಲ್ಲರ್‌ ಟ್ರೇಲರ್‌

Team Udayavani, Aug 15, 2019, 3:02 AM IST

ಕನ್ನಡದಲ್ಲಿ ಹಾರರ್‌, ಥ್ರಿಲ್ಲರ್‌ ಚಿತ್ರಗಳ ಸರಣಿ ಇನ್ನೂ ಮುಂದುವರೆಯುತ್ತಲೇ ಇದೆ. ಈಗ ಈ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ ಅದೇ “ನಾಕುಮುಖ’. ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ನಾಕುಮುಖ’ ಚಿತ್ರ ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಮೊದಲ ಪ್ರತಿಯೊಂದಿಗೆ ಹೊರಬಂದಿದ್ದು, ಸೆನ್ಸಾರ್‌ ಮುಂದಿದೆ. ಇದೇ ವೇಳೆ ನಿಧಾನವಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ನಾಕುಮುಖ’ ಚಿತ್ರದ ವಿಡಿಯೋ ಸಾಂಗ್‌ ಮತ್ತು ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದೆ.

ನಿಗೂಢ ಜಾಗದಲ್ಲಿ ನಡೆಯುವ ನಿಗೂಢ ಕೊಲೆಯೊಂದರ ರಹಸ್ಯವನ್ನು ಒಬ್ಬ ಪತ್ರಕರ್ತ ಮತ್ತು ಒಬ್ಬ ಪೊಲೀಸ್‌ ಅಧಿಕಾರಿ ಹೇಗೆಲ್ಲ ಭೇದಿಸುತ್ತಾರೆ ಎನ್ನುವುದು “ನಾಕುಮುಖ’ ಚಿತ್ರದ ಕಥೆಯ ಒಂದು ಎಳೆ. ಅಂತಿಮವಾಗಿ ಈ ನಿಗೂಢತೆಯ ಹಿಂದಿರುವ ಕಾರಣವೇನು ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್‌ ಅದನ್ನು ಚಿತ್ರದಲ್ಲೇ ನೋಡಬೇಕು ಎನ್ನುವುದು ಚಿತ್ರತಂಡದ ಮಾತು. “ನಾಕುಮುಖ’ ಚಿತ್ರದಲ್ಲಿ ನವನಟ ದರ್ಶನ್‌ ರಾಘವಯ್ಯ, ಅಮೃತಾ ಅಯ್ಯಂಗಾರ್‌, ಬಲರಾಜವಾಡಿ, ಪದ್ಮಾ ಶಿವಮೊಗ್ಗ, ಆವಿಶ್‌, ಶಂಕರ್‌ ಭಟ್‌, ಪ್ರೀತಿ ಮೊದಲಾದವರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ನವ ನಿರ್ದೇಶಕ ಕುಶಾಲ್‌ ಗೌಡ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು “ನಾಕುಮುಖ’ ಚಿತ್ರದ ಟೈಟಲ್‌ ಬಗ್ಗೆ ಮಾತನಾಡುವ ಚಿತ್ರದ ನಿರ್ದೇಶಕ ಕುಶಾಲ್‌ ಗೌಡ, “ಚಿತ್ರದಲ್ಲಿ ಪ್ರಸ್‌, ಪೊಲೀಸ್‌, ಪೊಲಿಟಿಕ್ಸ್‌ ಮತ್ತು ಫ್ಯಾಮಿಲಿ ಈ ನಾಲ್ಕು ಅಂಶಗಳಿರುವುದರಿಂದ, ಚಿತ್ರಕ್ಕೆ “ನಾಕುಮುಖ’ ಎಂದು ಹೆಸರಿಡಲಾಗಿದೆ. ಮಧ್ಯರಾತ್ರಿ ಹೊಳೆದ ಕಥೆಯೊಂದು ಈಗ ಚಿತ್ರವಾಗಿ ತೆರೆಮೇಲೆ ಬರುತ್ತಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ಹಾರರ್‌ ಜಾನರ್‌ನಲ್ಲಿ ಚಿತ್ರದ ಕಥೆ ಸಾಗುತ್ತದೆ. ಮರ್ಡರ್‌ ಮಿಸ್ಟ್ರಿ ಜೊತೆಗೆ ಅನೇಕ ತಿರುವುಗಳು ಪ್ರೇಕ್ಷಕರನ್ನು ರಂಜಿಸಲಿವೆ’ ಎನ್ನುವ ವಿವರಣೆ ಕೊಡುತ್ತಾರೆ.

“ಧ್ವನಿ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ದರ್ಶನ್‌ ರಾಘವಯ್ಯ “ನಾಕುಮುಖ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಆರ್‌. ಹರಿಬಾಬು ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರಂಗಸ್ವಾಮಿ ಎಸ್‌ ಛಾಯಾಗ್ರಹಣ, ಪಿ. ಮರಿಸ್ವಾಮಿ ಸಂಕಲನ ಕಾರ್ಯವಿದೆ. ಹಲಗೂರು ವೆಂಕಟೇಶ್‌ ಸಂಭಾಷಣೆ ಬರೆದರೆ, ಜಾಗ್ವರ್‌ ಸಣ್ಣಪ್ಪ ಚಿತ್ರದ ಸಾಹಸ ದೃಶ್ಶಗಳನ್ನು ಸಂಯೋಜಿಸಿದ್ದಾರೆ. ಬೆಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸೆನ್ಸಾರ್‌ ಅನುಮತಿಗಾಗಿ ಎದುರು ನೋಡುತ್ತಿರುವ “ನಾಕುಮುಖ’ ಇದೇ ಅಕ್ಟೋಬರ್‌ ವೇಳೆಗೆ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ