‘ನನಗೂ ಲವ್ವಾಗಿದೆ’ ರೆಕಾರ್ಡಿಂಗ್ ಆರಂಭ
Team Udayavani, Jul 31, 2021, 11:38 AM IST
ವಿಜಯ್ ರಾಜಶೇಖರ್ ಚಿತ್ರಕತೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವ “ನನಗೂ ಲವ್ವಾಗಿದೆ’ ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯ “ಜೇಮ್ಸ್ ಮೀಡಿಯಾ ಸ್ಟುಡಿಯೋ’ದಲ್ಲಿ ಆರಂಭವಾಗಿದೆ.
ಹೇಮಂತ್ ಕುಮಾರ್ ಬಿ.ಆರ್.ಸಂಗೀತ ಸಂಯೋಜಿಸುತ್ತಿರುವ “ನನಗೂ ಲವ್ವಾಗಿದೆ’ ಚಿತ್ರದ “ವಿಜಯ ನೀಡು ನೀ ನನಗೆ ಸೋಮ ವಿಜಯನಿಗೆ…’ ಹಾಡಿಗೆ ಪೊಲೀಸ್ ಸುಬ್ರಮಣ್ಯ ಮತ್ತು “ನನಗೂ ಲವ್ವಾಯ್ತು, ನೆನೆದು ನೋವಾಯ್ತು…’ ಹಾಡಿಗೆ ಕಂಬದ ರಂಗಯ್ಯ ಧ್ವನಿಯಾಗಿದ್ದಾರೆ.
ಇದನ್ನೂ ಓದಿ:ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದ ಸ್ಟೋಕ್ಸ್!
“ಶ್ರೀಕಾಳಿ ಅಮ್ಮನ್ ಪಿಕ್ಚರ್’ ಬ್ಯಾನರ್ನಲ್ಲಿ ಕೆ. ನೀಲಕಂಠನ್ ಕಥೆ ಬರೆದು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸೋಮ ವಿಜಯ್ ನಾಯಕನಾಗಿ, ತೇಜಸ್ವಿನಿ ರೆಡ್ಡಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶ್ವೇತಾ, ಬಾಬು, ದೊರೆ, ಕಾರ್ತಿಕ್, ನವೀನ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ ಹಾಡುಗಳ ರೆಕಾರ್ಡಿಂಗ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ವರಮಹಾಲಕ್ಷೀ ಹಬ್ಬದಂದು ಚಿತ್ರದ ಮುಹೂರ್ತ ನಡೆಸಿ ಚಿತ್ರೀಕರಣಕ್ಕೆ ಹೊರಡುವ ಯೋಚನೆಯಲ್ಲಿದೆ. ಬೆಂಗಳೂರು, ಬೆಳಗಾಂ, ಚಿಕ್ಕಮಗಳೂರು, ಸಕಲೇಶಪುರ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ.