“ನನ್ನ ಪ್ರಕಾರ’ಕ್ಕೆ ದರ್ಶನ್‌ ಸಾಥ್‌

Team Udayavani, Aug 15, 2019, 3:00 AM IST

ಕಿಶೋರ್‌ ಹಾಗು ಪ್ರಿಯಾಮಣಿ ಅಭಿನಯದ “ನನ್ನ ಪ್ರಕಾರ’ ಚಿತ್ರ ಆ.23 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಹಾಡುಗಳಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರತಂಡಕ್ಕೆ ಖುಷಿಯಾಗಿದೆ. ಈಗ ಅದೇ ಖುಷಿಯಲ್ಲಿ ಚಿತ್ರತಂಡ ಆ.15 (ಇಂದು) ಟ್ರೇಲರ್‌ ಬಿಡುಗಡೆ ಮಾಡುತ್ತಿದೆ.

ನಟ ದರ್ಶನ್‌ ಅವರು “ನನ್ನ ಪ್ರಕಾರ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಇನ್ನಷ್ಟು ಖುಷಿಯನ್ನು ಹೆಚ್ಚಿಸಿದೆ. ವಿನಯ್‌ ಬಾಲಾಜಿ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದು, ಕಥೆ, ಚಿತ್ರಕಥೆ ಅವರೇ ಬರೆದಿದ್ದಾರೆ.

ಚಿತ್ರದಲ್ಲಿ ಮಯೂರಿ, ಅರ್ಜುನ್‌ ಯೋಗಿ, ನಿರಂಜನ್‌ ದೇಶಪಾಂಡೆ, ಗಿರಿಜಾ ಲೋಕೇಶ್‌, ವೈಷ್ಣವಿ ಮುಂತಾದ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಗುರುರಾಜ್‌ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅರ್ಜುನ್‌ ರಾಮು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಮನೋಹರ್‌ ಜೋಶಿ ಛಾಯಾಗ್ರಹಣವಿದೆ. ಸತೀಶ್‌ ಸಂಕಲನ ಮಾಡಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ