Udayavni Special

ನಟ ಸಾರ್ವಭೌಮ ಹಾಡಿಗೆ ಭರ್ಜರಿ ಸೆಟ್‌


Team Udayavani, Nov 13, 2018, 11:20 AM IST

punith-rajkumar-1.jpg

ಪುನೀತ್‌ರಾಜಕುಮಾರ್‌ ಅಭಿನಯದ “ನಟ ಸಾರ್ವಭೌಮ’ ಚಿತ್ರ ಮತ್ತೂಂದು ಹೊಸ ಸುದ್ದಿಗೆ ಕಾರಣವಾಗಿದೆ. ಪವನ್‌ ಒಡೆಯರ್‌ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಹಾಡೊಂದನ್ನು ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಉತ್ಸಾಹದಲ್ಲಿದೆ ಚಿತ್ರತಂಡ. ಆ ಕೊನೆಯ ಹಾಡೇ ಈಗ ಸುದ್ದಿಯ ಕೇಂದ್ರಬಿಂದು. ಹೌದು, ಚಿತ್ರದಲ್ಲಿ ಪುನೀತ್‌ರಾಜಕುಮಾರ್‌ ಅವರನ್ನು ಪರಿಚಯಿಸುವ ಹಾಡಿಗೆ ಅದ್ಧೂರಿ ವೆಚ್ಚದ ಸೆಟ್‌ ನಿರ್ಮಿಸುವ ಮೂಲಕ ಚಿತ್ರತಂಡ ಹೊಸ ದಾಖಲೆ ಬರೆದಿದೆ.

ಸೋಮವಾರದಿಂದ ಆ ಹಾಡಿನ ಚಿತ್ರೀಕರಣ ಶುರುವಾಗಿದ್ದು, ಆರು ದಿನಗಳ ಕಾಲ ನಡೆಯುತ್ತಿರುವುದು ವಿಶೇಷ. ನಿರ್ದೇಶಕ ಪವನ್‌ ಒಡೆಯರ್‌ ಅವರೇ ಬರೆದಿರುವ “ನಟ ಸಾರ್ವಭೌಮ ಈ ಇಸ್‌ ಕಿಂಗ್‌ ಆಫ್ ದಿ ಸಿನಿಮಾ…’ ಎಂದು ಶುರುವಾಗುವ ಹಾಡಿಗೆ ಪುನೀತ್‌ ಅವರು ಭರ್ಜರಿ ಸ್ಟೆಪ್‌ ಹಾಕುತ್ತಿದ್ದಾರೆ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಬರುವ ಈ ಹಾಡಿಗಾಗಿ ನಾಲ್ಕು ಕಡೆ ಭರ್ಜರಿ ಸೆಟ್‌ ಹಾಕಿರುವುದು ವಿಶೇಷ. ಕಲಾನಿರ್ದೇಶಕರಾದ ಗುಣ (ಭೂಪತಿ) ಅವರು ಸೆಟ್‌ ಹಾಕಿದ್ದಾರೆ.

ರಾಕ್‌ಲೈನ್‌ ಸ್ಟುಡಿಯೋದಲ್ಲೊಂದು ಅದ್ಧೂರಿ ಸೆಟ್‌, ಮಾಗಡಿ ರಸ್ತೆ ಸಮೀಪದಲ್ಲೊಂದು ಸೆಟ್‌, ಬಾಗಲೂರು ಹಾಗು ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ವೆಚ್ಚ ಮಾಡಿ ಸೆಟ್‌ ನಿರ್ಮಿಸಿ, ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಅಂದಹಾಗೆ, ನೃತ್ಯ ನಿರ್ದೇಶಕ ಭೂಷಣ್‌ ಅವರು, ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್‌ರಾಜಕುಮಾರ್‌ ಹಾಡಿಗಾಗಿಯೇ ಹಲವು ದಿನಗಳ ಕಾಲ ಅಭ್ಯಾಸ ಕೂಡ ನಡೆಸಿದ್ದು, ಈ ಹಾಡಿಗೆ ಹಿಂದೆಂದೂ ಹಾಕದ ಸಖತ್‌ ಸ್ಟೆಪ್‌ ಈ ಹಾಡಲ್ಲಿ ಹಾಕಲಿದ್ದಾರೆ ಎಂಬುದು ನಿರ್ದೇಶಕ ಪವನ್‌ ಒಡೆಯರ್‌ ಅವರ ಖುಷಿಯ ಮಾತು.

ಚಿತ್ರದಲ್ಲಿ ಪುನೀತ್‌ ಅವರು ಪತ್ರಕರ್ತರಾಗಿ ಕಾಣಿಸಿಕೊಂಡಿದ್ದು, ಆ ಪಾತ್ರಕ್ಕೂ ಮತ್ತು ಸಿನಿಮಾದ ಕಥೆಗೂ ಪೂರಕವಾಗಿರುವಂತೆ ಹಾಡು ಬರೆಯಲಾಗಿದೆ. ಆ ಹಾಡಿಗೆ ಸ್ಟೆಪ್‌ ಹಾಕಲು ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡಿರುವ ಪುನೀತ್‌, ಇಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವಂತಹ ಸ್ಟೆಪ್‌ ಹಾಕಲಿದ್ದಾರೆ ಎಂದು ಉತ್ಸಾಹದಿಂದ ಹೇಳುತ್ತಾರೆ ಪವನ್‌ ಒಡೆಯರ್‌. ಚಿತ್ರಕ್ಕೆ ವೈದಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಡಿ.ಇಮಾನ್‌ ಅವರು ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಚಿತ್ರೀಕರಿಸುತ್ತಿರುವ ಹಾಡು ಪೂರ್ಣಗೊಂಡರೆ, ಚಿತ್ರ ಪೂರ್ಣಗೊಳ್ಳಲಿದೆ.

ಈಗಾಗಲೇ ಚಿತ್ರ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡ, ಮೊದಲರ್ಧ ಸಿನಿಮಾವನ್ನು ರೆಡಿ ಮಾಡಿದೆ. ಇನ್ನುಳಿದ ಸಿನಿಮಾ ಕೆಲಸಗಳು ಜೋರಾಗಿ ನಡೆಯುತ್ತಿವೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, “ನಟ ಸಾರ್ವಭೌಮ’ ಚಿತ್ರದ ಬಳಿಕ ಮುಂದಿನ ದಿನಗಳಲ್ಲಿ ಪುನೀತ್‌ ಅವರನ್ನು ಅವರ ಅಭಿಮಾನಿಗಳು “ನಟ ಸಾರ್ವಭೌಮ’ ಎಂದು ಕರೆದರೆ ಅಚ್ಚರಿಯೇನಿಲ್ಲ. ರಾಕ್‌ಲೈನ್‌ ವೆಂಕಟೇಶ ನಿರ್ಮಾಣದ ಈ ಚಿತ್ರದಲ್ಲಿ ಪುನೀತ್‌ರಾಜಕುಮಾರ್‌ ಅವರ ಹೇರ್‌ಸ್ಟೈಲ್‌ ಸಂಪೂರ್ಣ ಬದಲಾಗಿರುವುದು ವಿಶೇಷ. ಅವರಿಲ್ಲಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಟಾಪ್ ನ್ಯೂಸ್

ಸೀ ವೀಡ್‌ ಕೃಷಿ ಯೋಜನೆಗೆ ಉತ್ತೇಜನ

ಸೀ ವೀಡ್‌ ಕೃಷಿ ಯೋಜನೆಗೆ ಉತ್ತೇಜನ

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ek-love-ya

‘ಏಕ್‌ ಲವ್‌ ಯಾ’ ಜ.21ಕ್ಕೆ ರಿಲೀಸ್‌

hftytyt

ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಕೋವಿಡ್‌ ಬಳಿಕ ಚಿನ್ನಾಭರಣ ವ್ಯವಹಾರ, ಉದ್ಯಮ ಚೇತರಿಕೆ

ಕೋವಿಡ್‌ ಬಳಿಕ ಚಿನ್ನಾಭರಣ ವ್ಯವಹಾರ, ಉದ್ಯಮ ಚೇತರಿಕೆ

ಉತ್ತಮ ದಾಖಲಾತಿಯ ಶಾಲೆಗೆ ಬೇಕು ಇನ್ನಷ್ಟು ಸೌಕರ್ಯ

ಉತ್ತಮ ದಾಖಲಾತಿಯ ಶಾಲೆಗೆ ಬೇಕು ಇನ್ನಷ್ಟು ಸೌಕರ್ಯ

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಾಲಯ, ತರಬೇತಿ

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಾಲಯ, ತರಬೇತಿ

ಎಚ್‌.ಡಿ. ಕುಮಾರಸ್ವಾಮಿ ಹಿಟ್‌ ಆ್ಯಂಡ್‌ ರನ್‌ ಗಿರಾಕಿ: ಸಿದ್ದರಾಮಯ್ಯ

ಎಚ್‌.ಡಿ. ಕುಮಾರಸ್ವಾಮಿ ಹಿಟ್‌ ಆ್ಯಂಡ್‌ ರನ್‌ ಗಿರಾಕಿ: ಸಿದ್ದರಾಮಯ್ಯ

ಅನಿರೀಕ್ಷಿತ ಮಳೆ; ನಗರದ ಹಲವೆಡೆ ಕೃತಕ ನೆರೆ, ಮನೆಗಳಿಗೆ ಹಾನಿ

ಅನಿರೀಕ್ಷಿತ ಮಳೆ; ನಗರದ ಹಲವೆಡೆ ಕೃತಕ ನೆರೆ, ಮನೆಗಳಿಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.