Udayavni Special

ಹೊಸ ವರ್ಷಕ್ಕೆ ಅಪ್ಪು ಪಾರ್ಟಿ ಸಾಂಗ್‌

Team Udayavani, Dec 24, 2018, 4:09 PM IST

appu.jpg

ಹೊಸ ವರ್ಷದ ಆಗಮನಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ. ಎಲ್ಲರೂ ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಅದಕ್ಕೆ ಸರಿಯಾಗಿ, ಪಾರ್ಟಿ ಹಾಡೊಂದನ್ನು ಬಿಡುಗಡೆ ಮಾಡೋಕೆ “ನಟಸಾರ್ವಭೌಮ’ ಚಿತ್ರತಂಡ ಇದೀಗ ಅಣಿಯಾಗಿದೆ. ಹೌದು, ಡಿ.30 ರಂದು ಪಾರ್ಟಿ ಸಾಂಗ್‌ ಇರುವ ಲಿರಿಕಲ್‌ ವಿಡೀಯೋ ಬಿಡುಗಡೆಯಾಗುತ್ತಿದೆ.

ಯೋಗರಾಜ್‌ಭಟ್‌ ಅವರು ಬರೆದಿರುವ “ಓಪನ್‌ ದಿ ಬಾಟಲ್‌..’ ಎಂಬ ಪಾರ್ಟಿ ಹಾಡು ಪಕ್ಕಾ ಹೊಸ ವರ್ಷಕ್ಕೆ ಸರಿಹೊಂದುವ ಹಾಡಾಗಿದ್ದು, ಅದನ್ನು ವಿಜಯ ಪ್ರಕಾಶ್‌ ಹಾಡಿದ್ದಾರೆ. ಆ ಹಾಡು ಪಾರ್ಟಿ ಮಾಡೋರಿಗೆ ಸಖತ್‌ ಜೋಶ್‌ ಕೊಡುವುದಂತೂ ಗ್ಯಾರಂಟಿ ಎಂಬುದು ನಿರ್ದೇಶಕ ಪವನ್‌ ಒಡೆಯರ್‌ ಅವರ ಮಾತು. 

ಮೊನ್ನೆಯಷ್ಟೇ ಬಿಡುಗಡೆಯಾಗಿದ್ದ “ನಟಸಾರ್ವಭೌಮ’ ಚಿತ್ರದ ಟೀಸರ್‌ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಈಗ ಚಿತ್ರತಂಡ, ಹೊಸ ವರ್ಷದ ಆರಂಭಕ್ಕೂ ಮುನ್ನ ಪಾರ್ಟಿ ಸಾಂಗ್‌ ಬಿಡುಗಡೆ ಮಾಡುತ್ತಿದೆ. ಆ ಹಾಡಿಗೆ ಪುನೀತ್‌ರಾಜಕುಮಾರ್‌ ಅವರು ಬಾಟಲ್‌ ಹಿಡಿದು, ಸಖತ್‌ ಸ್ಟೆಪ್‌ ಹಾಕುವ ಮೂಲಕ ಕಿಕ್‌ ಕೊಡುವಂತಹ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಪಾರ್ಟಿ ಸಾಂಗ್‌ ಕೇಳಿದವರಿಗೊಂದು ಹೊಸ ಜೋಶ್‌ ಜೊತೆಗೆ ನಾಲ್ಕು ಹೆಜ್ಜೆ ಹಾಕುವಂತಹ ಹುಮ್ಮಸ್ಸು ಬರುವುದಂತೂ ನಿಜ ಎನ್ನುವ ನಿರ್ದೇಶಕರು, ಆ ಹಾಡಿಗೆ ಮೋಹನ್‌ ಬಿ.ಕೆರೆ. ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್‌ ಹಾಕಿ ಚಿತ್ರೀಕರಿಸಲಾಗಿದೆ. ಜಾನಿ ಮಾಸ್ಟರ್‌ ಆ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಪಾರ್ಟಿ ಮಾಡೋರು, ಯಾವೆಲ್ಲಾ ಹಾಡುಗಳಿಗೆ ಹೆಜ್ಜೆ ಹಾಕಬೇಕು ಅಂತ ಲಿಸ್ಟ್‌ ರೆಡಿಮಾಡಿಕೊಳ್ಳುತ್ತಿದ್ದಾರೋ, ಆ ಲಿಸ್ಟ್‌ನಲ್ಲಿ “ನಟಸಾರ್ವಭೌಮ’ ಚಿತ್ರದ ಪಾರ್ಟಿ ಸಾಂಗ್‌ ಕೂಡ ಸೇರಿಸಿಕೊಳ್ಳಲು ಆನುಮಾನ ಬೇಡ ಎಂಬುದು ನಿರ್ದೇಶಕರ ಮಾತು.

ಈ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ ಅವರು ಜರ್ನಲಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಸಲ ಅವರು ಅಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಿಂದಿನ ಚಿತ್ರಗಳಿಗಿಂತಲೂ ಇಲ್ಲಿ ಭರ್ಜರಿ ಆ್ಯಕ್ಷನ್‌ ಮತ್ತು ಹಾಡುಗಳಿಗೆ ಸಖತ್‌ ಸ್ಟೆಪ್‌ ಹಾಕಿದ್ದಾರೆ. ಚಿತ್ರದಲ್ಲಿ ರಚಿತಾರಾಮ್‌ ಹಾಗು ಅನುಪಮಾ ನಾಯಕಿಯರಾಗಿ ನಟಿಸಿದ್ದಾರೆ. ಇಮಾನ್‌ ಅವರ ಸಂಗೀತ, ವೈದಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಅಂದಹಾಗೆ, “ನಟಸಾರ್ವಭೌಮ’ ಚಿತ್ರ ಈಗ ಸೆನ್ಸಾರ್‌ ಮಂಡಳಿಗೆ ಹೋಗಿದ್ದು, ಈ ವಾರದಲ್ಲಿ ಸೆನ್ಸಾರ್‌ ಮಂಡಳಿ ಚಿತ್ರ ನೋಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಗಣರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ.

ಟಾಪ್ ನ್ಯೂಸ್

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

cm-bommai

ಸಂಗೂರ ಸಕ್ಕರೆ ಕಾರ್ಖಾನೆ ಮುಚ್ಚುವುದರಲ್ಲಿ ಕಾಂಗ್ರೆಸ್ ಕೊಡುಗೆ ಬಹಳವಿದೆ: ಸಿಎಂ ಬೊಮ್ಮಾಯಿ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

8ನೇ ಬಾರಿ ಸಾಫ್ ಕಪ್ ಗೆದ್ದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ

ek-love-ya

‘ಏಕ್‌ ಲವ್‌ ಯಾ’ ಜ.21ಕ್ಕೆ ರಿಲೀಸ್‌

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

daily-horoscope

ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡುವುದು ತುಂಬಾ ಮುಖ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ek-love-ya

‘ಏಕ್‌ ಲವ್‌ ಯಾ’ ಜ.21ಕ್ಕೆ ರಿಲೀಸ್‌

hftytyt

ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್

xdfgdgr

ಸಿನಿ ರಸಿಕರ ಗಮನ ಸೆಳೆದ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್

gdfgdr

ಸಾವಿನಲ್ಲೂ ಸಾರ್ಥಕತೆ : ನೇತ್ರದಾನ ಮಾಡಿದ ದಿ.ನಟ ಗೋವಿಂದರಾವ್

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಸತತ ಮಳೆಗೆ ಮನೆ ಕುಸಿಯುವ ಭೀತಿ

ಸತತ ಮಳೆಗೆ ಮನೆ ಕುಸಿಯುವ ಭೀತಿ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

4

ಚೈತನ್ಯ ಇನ್ಫಿನಿಟಿ ಲರ್ನ್ ರೋಹಿತ್‌ ಶರ್ಮ ರಾಯಭಾರಿ

3

ಕೊರೊನಾ ನಂತರ ಮಾನಸಿಕ ಸಮಸ್ಯೆ ಹೆಚ್ಚಳ

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.