ರಗಡ್‌ ಲುಕ್‌ನಲ್ಲಿ ನವೀನ್‌

ಪಾಪ್‌ಕಾರ್ನ್ ಮಂಕಿ ಟೈಗರ್‌ನಲ್ಲಿ ನಟನೆ

Team Udayavani, Nov 13, 2019, 6:02 AM IST

“ಟಗರು’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಚಿತ್ರೀಕರಣ ಮುಗಿದು, ಬಿಡುಗಡೆ ಪೂರ್ವ ಕೆಲಸದಲ್ಲಿ ಬಿಝಿಯಾಗಿದೆ. ಈ ನಡುವೆಯೇ ಚಿತ್ರತಂಡದಿಂದ ಒಂದೊಂದೇ ವಿಚಾರಗಳು ಹೊರಬರುತ್ತಿವೆ.

ಈಗ ಚಿತ್ರದಲ್ಲಿ ನವೀನ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಯಾವ ನವೀನ್‌ ಎಂದರೆ “ಜಾಕಿ’ ಭಾವನಾ ಬಗ್ಗೆ ಹೇಳಬೇಕು. ನಟಿ ಭಾವನಾ ಪತಿ ನವೀನ್‌ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರದಲ್ಲಿ ನಟಿಸಿದ್ದು, ಈಗ ಅವರ ಲುಕ್‌ ಬಿಡುಗಡೆಯಾಗಿದೆ. “ಟಗರು’ ಚಿತ್ರದಲ್ಲಿ ಕಾಕ್ರೋಚ್‌ ಪಾತ್ರ ಮಾಡಿದ್ದ ಸುಧಿ ಜೊತೆ ಕೂದಲು ಬಿಟ್ಟುಕೊಂಡು ಬನಿಯನ್‌ನಲ್ಲಿ ಕುಳಿತಿರುವ ಫೋಟೋ ಹೊರಬಂದಿದೆ.

ಈ ಮೂಲಕ ನವೀನ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರೋದು ಪಕ್ಕಾ ಆಗಿದೆ. “ಟಗರು’ ಚಿತ್ರದಲ್ಲಿ “ಡಾಲಿ’ ಪಾತ್ರದ ಮೂಲಕ ಸುದ್ದಿಯಾದ ಧನಂಜಯ್‌, ಪುನಃ ಸೂರಿ ಅವರ ನಿರ್ದೇಶನದ ಚಿತ್ರದಲ್ಲಿ ಹೀರೋ ಆಗಿರುವುದರಿಂದ ಸಹಜವಾಗಿಯೇ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯೂ ಇದೆ.

ಇನ್ನು, ಈ ಚಿತ್ರವನ್ನು ಸುಧೀರ್‌ ನಿರ್ಮಿಸಿದ್ದಾರೆ. ಹಲವು ವರ್ಷಗಳಿಂದಲೂ ಅವರು ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿರುವ ಸುಧೀರ್‌ ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರಕ್ಕೆ ಸೂರಿಯವರ ಸಂಭಾಷಣೆ ಇದೆ. ಚಿತ್ರದಲ್ಲಿ ಚಿತ್ರದಲ್ಲಿ ನಿವೇದಿತಾ, ಅಮೃತಾ, ಸಪ್ತಮಿ ಅವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ