‘ಮಂಗಳವಾರ ರಜಾದಿನ’ ಚಿತ್ರದ ನೀನೆ ಗುರು, ನೀನೆ ಗುರಿ, ನೀನೆ ಗುರುತು ಹಾಡು ಬಿಡುಗಡೆ
Team Udayavani, Jan 28, 2021, 4:30 PM IST
ಬೆಂಗಳೂರು: ಕೋವಿಡ್ ಅಬ್ಬರದಿಂದ ತತ್ತರಿಸಿದ್ದ ಚಂದನವನ ಮತ್ತೆ ನಿಧಾನವಾಗಿ ತಲೆ ಎತ್ತುತ್ತಿದ್ದು, ಹಲವು ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸಿವೆ. ಈ ನಡುವೆ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ‘ಮಂಗಳವಾರ ರಜಾದಿನ’ ಸಿನಿಮಾದ ನೀನೆ ಗುರು, ನೀನೆ ಗುರಿ, ನೀನೆ ಗುರುತು ಎಂಬ ಹಾಡನ್ನು ನಟ ಅಭಿಷೇಕ್ ಅಂಬರೀಷ್ ಬಿಡುಗಡೆಗೊಳಿಸಿದ್ದು, ಇದೀಗ ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಗೌಸ್ ಫೀರ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡು ತಂದೆ- ಮಗನ ಕುರಿತಾಗಿ ಬಾಂಧವ್ಯದ ಎಳೆಯನ್ನು ಹೊಂದಿದೆ. ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಹಾಡಿಗೆ ದ್ವನಿ ನೀಡಿದ್ದು, ಈ ಸಿನಿಮಾದ ಹಾಡನ್ನು ಕೇಳಿದ ಬಳಿಕ ಪ್ರತಿಯೊಬ್ಬರಿಗೂ ತಂದೆಯ ತ್ಯಾಗ, ಪ್ರೀತಿಯು ನೆನಪಿಗೆ ಬರುತ್ತದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಶೂಟಿಂಗ್ ಮುಗಿಸಿದ ‘777 ಚಾರ್ಲಿ’
ಮಂಗಳವಾರ ರಜಾದಿನ ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ತಯಾರಾಗಿರುವ ಈ ಸಿನಿಮಾ ಹೇರ್ ಕಟ್ಟಿಂಗ್ ಮಾಡುವ ತಂದೆ ಹಾಗೂ ಆತನ ಮಗನ ಕುರಿತಾದ ಕಥೆಯಾಗಿದ್ದು, ತಂದೆ ಮಗನ ನಡುವಿನ ಸುಂದರ ಬಾಂಧವ್ಯವನ್ನು ಅನಾವರಣಗೊಳಿಸಲು ಚಿತ್ರತಂಡ ಮುಂದಾಗಿದೆ.
ಈ ಸಿನಿಮಾ ಮುಂಬರುವ ಫೆಬ್ರವರಿ 5 ರಂದು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಯುವಿನ್ ಆ್ಯಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ತ್ರಿವರ್ಗ ಫಿಲಂಸ್ ನಿರ್ಮಾಣ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ್ಪಿಯ ‘ಕಬ್ಜ’ ಕಣಕ್ಕೆ ಬಾಲಿವುಡ್ ನಟ ಎಂಟ್ರಿ…!
ನಟರು ತುಂಬಾ ಇದ್ದಾರೆ, ಆದರೆ, ದರ್ಶನ್ ರಿಯಲ್ ಹೀರೋ : ಟಾಲಿವುಡ್ ನಟ ಜಗಪತಿ ಬಾಬು
‘ಮುಂದುವರೆದ ಅಧ್ಯಾಯ’ ಡೈಲಾಗ್ ಟೀಸರ್ ರಿಲೀಸ್: ಕ್ರೈಂ ಕಥಾಹಂದರದ ಚಿತ್ರದಲ್ಲಿ ಆದಿತ್ಯ
‘ಪೊಗರು’ ವೀಕ್ಷಿಸಿದ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಹೇಳಿದ್ದೇನು ?
ಚಿತ್ರೀಕರಣದಲ್ಲಿ ಬಿಝಿಯಾಗಿದೆ ಪೃಥ್ವಿ, ಮಿಲನಾ ನಾಗರಾಜ್ ರ ‘ಫಾರ್ ರಿಜಿಸ್ಟ್ರೇಷನ್’