ರೂಪತಾರಾದಲ್ಲಿ ಹಿರಿಯ ನಿರ್ದೇಶಕ ಭಗವಾನ್ ಹೊಸ ಅಂಕಣ
ಡಾ.ರಾಜ್ ಕುರಿತಾದ ಅಪರೂಪದ ಘಟನೆಗಳ ಮೆಲುಕು
Team Udayavani, Jan 1, 2020, 7:01 AM IST
ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ಡಾ.ರಾಜ್‌ಕುಮಾರ್ ಹಾಗೂ ಹಿರಿಯ ನಿರ್ದೇಶಕ ಭಗವಾನ್ ಮೊದಲ ಸಾಲಿನಲ್ಲಿ ಸಿಗುತ್ತಾರೆ. ಕನ್ನಡ ಸಿನಿಮಾ ಲೋಕವನ್ನು ಶ್ರೀಮಂತಗೊಳಿಸುವಲ್ಲಿ, ಅನೇಕರಿಗೆ ಸ್ಫೂರ್ತಿಯಾಗುವಲ್ಲಿ ಈ ಜೋಡಿಯ ಸಿನಿಮಾಗಳು ಪ್ರಮುಖ ಪಾತ್ರ ವಹಿಸಿವೆ. ಭಗವಾನ್ ಅವರ ಕನಸಿಗೆ ಜೀವ ತುಂಬಿದವರು ಡಾ.ರಾಜ್‌ಕುಮಾರ್.
“ಸಂಧ್ಯಾರಾಗ’ ಚಿತ್ರದಿಂದ ಆರಂಭವಾದ ರಾಜ್-ಭಗವಾನ್ ಜೋಡಿಯ ಪಯಣ “ಒಡಹುಟ್ಟಿದವರು’ ಚಿತ್ರದವರೆಗೆ ಯಶಸ್ವಿಯಾಗಿ ಸಾಗಿಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇಷ್ಟು ವರ್ಷಗಳ ಪಯಣದಲ್ಲಿ ನಿರ್ದೇಶಕ ಭಗವಾನ್, ಡಾ.ರಾಜ್ ಜೀವನದ ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ. ನೋವು-ನಲಿವು, ಸುಖ-ದುಃಖ … ಹೀಗೆ ಎಲ್ಲೂ ದಾಖಲಾಗದ ಅಪರೂಪದ ಕ್ಷಣಗಳು ಭಗವಾನ್ ಅವರ ನೆನಪಿನಂಗಳದಲ್ಲಿವೆ.
ಈ ಅಪರೂಪದ ಘಟನೆಗಳನ್ನು ಭಗವಾನ್ ರೂಪತಾರಾ ಓದುಗರಿಗಾಗಿ ಹಂಚಿಕೊಳ್ಳಲಿದ್ದಾರೆ. ಜನವರಿ ಸಂಚಿಕೆಯಿಂದ “ರೂಪತಾರಾ’ದಲ್ಲಿ “ರಾಜ್ ಭಗವಾನ್’ ಹೊಸ ಅಂಕಣ ಮೂಡಿಬರುತ್ತಿದೆ. ಈ ಯಶಸ್ವಿ ಜೋಡಿಯ ಹಲವು ಘಟನೆ ಅಪರೂಪದ ಘಟನೆಗಳನ್ನು ನೀವು ರೂಪತಾರಾದಲ್ಲಿ ಓದಬಹುದು ….
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?
‘ವೀಲ್ ಚೇರ್’ ನಲ್ಲಿ ರಾಮ್ ಚೇತನ್; ಚೊಚ್ಚಲ ಚಿತ್ರದ ಬಗ್ಗೆ ರೋಮಿಯೋ ನಿರೀಕ್ಷೆಯ ಮಾತು…
ಶೀಘ್ರದಲ್ಲಿ ‘ಕೆಜಿಎಫ್ 3’ ಚಿತ್ರೀಕರಣ ಪ್ರಾರಂಭಿಸುವುದಿಲ್ಲ: ಕಾರ್ಯಕಾರಿ ನಿರ್ಮಾಪಕ
ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಮೃತದೇಹ ಪತ್ತೆ!
ಸಾರಾ ಅಬೂಬಕ್ಕರ್ ಕಾದಂಬರಿ ಆಧಾರಿತ ‘ಸಾರಾ ವಜ್ರ’ ಮೇ 20 ರಂದು ತೆರೆಗೆ