ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್
Team Udayavani, Aug 5, 2021, 1:53 PM IST
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳ ನಿರ್ಮಾಪಕ ಎನ್ನುವ ಹೆಗ್ಗಳಿಕೆಗೆ ಪಡೆದುಕೊಂಡಿರುವ ವಿಜಯ್ ಕಿರಂಗದೂರು ಅವರು ಇದೀಗ ಮತ್ತೊಂದು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.
ವಿಜಯ್ ಕಿರಂಗದೂರ ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಇದೀಗ 11 ನೇ ಸಿನಿಮಾ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಈ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ನಾಳೆ ( ಆ.6.) ಮುಂಜಾನೆ 11.46 ಕ್ಕೆ ಘೋಷಣೆಯಾಗಲಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಸಡನ್ ಆಗಿ ಸುದ್ದಿ ನೀಡಿರುವ ಹೊಂಬಾಳೆ, ಅದರಲ್ಲಿ ಬರೆದಿರುವ ‘ನಿನ್ನೊಳಗಿನ ಕಿಚ್ಚು ನಿಮ್ಮನ್ನು ಸುಡದಿರಲಿ’ ಎಂಬ ಒಂದು ಸಾಲು ಇದೀಗ ಕನ್ನಡ ಸಿನಿ ರಸಿಕರ ಕುತೂಹಲ ಹೆಚ್ಚಿಸಿದೆ.
“??? ??? ???? ?????? ??? ??? ???? ???”.
Unveiling Title and First Look of #Hombale11 at 11:43 AM tomorrow.@VKiragandur @HombaleFilms @HombaleGroup pic.twitter.com/lqjYQv8rKg
— Hombale Films (@hombalefilms) August 5, 2021
ಕಿಚ್ಚನ ಜೊತೆ ಕಿರಂಗದೂರು ಸಿನಿಮಾ ?
ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿರುವ ‘ನಿನ್ನೊಳಗಿನ ಕಿಚ್ಚು ನಿಮ್ಮನ್ನು ಸುಡದಿರಲಿ’ ಎನ್ನುವ ಸಾಲು ಕುತೂಹಲಕ್ಕೆ ಕಾರಣವಾಗಿದ್ದು, ‘ಕಿಚ್ಚು’ ಎಂಬ ಪದ ಈ ಪೋಸ್ಟರ್ನಲ್ಲಿ ಹೈಲೈಟ್ ಆಗಿರುವುದರಿಂದ ಕಿಚ್ಚ ಸುದೀಪ್ ಜೊತೆ ‘ಹೊಂಬಾಳೆ ಫಿಲ್ಮ್ಸ್’ ಕೈ ಜೋಡಿಸಲಿದೆಯಾ ಎಂಬ ಅನುಮಾನ ಬಲವಾಗಿದೆ. ಈ ಬಗ್ಗೆ ಶುಕ್ರವಾರ ಬೆಳಗ್ಗೆ 11.43ಕ್ಕೆ ಉತ್ತರ ಸಿಗಲಿದೆ.
ಇನ್ನು ಸದ್ಯಕ್ಕೆ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’, ಪ್ರಭಾಸ್ ನಟನೆಯ ‘ಸಲಾರ್’ , ಪುನೀತ್ ರಾಜಕುಮಾರ್ ಅವರ ದ್ವಿತ್ವ ಹಾಗೂ ರಕ್ಷಿತ್ ಶೆಟ್ಟಿ ಅವರ ರಿಚರ್ಡ್ ಆಂಟಿನಿ ಸಿನಿಮಾಗಳು ಹೊಂಬಾಳೆ ಬ್ಯಾನರ್ ನಲ್ಲಿ ಸಿದ್ದವಾಗುತ್ತಿವೆ. ಇದೀಗ 11 ನೇ ಸಿನಿಮಾ ಕುರಿತು ಮಾಹಿತಿ ನಾಳೆ ರಿವೀಲ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ