ಹೊಸಬರ ಹಾರರ್ ಚಿತ್ರ “ಒಂಟಿ ಮನೆ ಮೆಟ್ಟಿಲು’
Team Udayavani, Dec 5, 2018, 11:15 AM IST
ಕನ್ನಡದಲ್ಲಿ ಒಂದು ಕಾಲಕ್ಕೆ ಬೆರಳೆಣಿಕೆಯಷ್ಟು ಮಾತ್ರ ಹಾರರ್ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಈಗ ಅವುಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಅದರಲ್ಲೂ ಬಹುತೇಕ ಹೊಸಬರೇ ಹಾರರ್ ಚಿತ್ರಗಳ ಹಿಂದೆ ಬರುತ್ತಿದ್ದಾರೆ. ಆ ಸಾಲಿಗೆ ಈಗ ಹೊಸಬರೇ ಸೇರಿ ಮಾಡುತ್ತಿರುವ “ಒಂಟಿ ಮನೆ ಮೆಟ್ಟಿಲು’ ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನೆರವೇರಿದೆ.
ನಿರ್ಮಾಪಕ ಮಹಾಂತೇಶ್ ಅವರು ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರವನ್ನು ಗಿರೀಶ್ ಹೆಬ್ಬೂರು ನಿರ್ದೇಶಿಸುತ್ತಿದ್ದಾರೆ. ವೆಂಕಟ್ಗೌಡ ನಿರ್ಮಾಣ ಮಾಡುತ್ತಿದ್ದಾರೆ. ನಟ ಪ್ರಥಮ್ ಆಗಮಿಸಿ, ಚಿತ್ರತಂಡಕ್ಕೆ ಶುಭಾಶಯ ಹೇಳಿದ್ದಾರೆ. ಕಾರ್ತಿ ಜೆ ಕಿರಣ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮಂಜು ಕವಿ ಸಂಗೀತವಿದೆ. ಸೂರ್ಯ ಮತ್ತು ಮಂಜುಕವಿ ಅವರ ಸಾಹಿತ್ಯವಿದೆ.
ಚಂದ್ರು ನೃತ್ಯ ನಿರ್ದೇಶನ ಮಾಡಿದರೆ, ಜಾಗ್ವಾರ್ ಸಣ್ಣಪ್ಪ ಅವರ ಸಾಹಸವಿದೆ. ಚಿತ್ರದಲ್ಲಿ ಅಥರ್ವ ಶೆಟ್ಟಿ, ಪ್ರಿಯಾಗೌಡ, ಮನೋರಂಜನ್, ಲಕ್ಷ್ಮೀ, ಪ್ರಕಾಶ್, ಅನೂಪ್, ಬಲ್ಲಾ, ಆಷಿಕ್, ಆನಂದ್ ಮಂಡ್ಯ, ರಾಘವ್ ಬಾಲ್ ಮುಂತಾದವರಿದ್ದಾರೆ. ಇದೊಂದು ಸಸ್ಪೆನ್ಸ್, ಹಾರರ್ ಮತ್ತು ಥ್ರಿಲ್ಲರ್ ಜೊತೆಗೆ ಲವ್ ಸೆಂಟಿಮೆಂಟ್ ಕೂಡ ಹೊಂದಿದೆ ಎಂಬುದು ಚಿತ್ರತಂಡದ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ