ಹೊಸಬರ “ವಿಕ್ರಮ ಚಿತ್ರ’

Team Udayavani, Sep 10, 2019, 3:02 AM IST

“ವಿಕ್ರಮ ಚಿತ್ರ’ ಎಂಬ ಚಿತ್ರವೊಂದು ಸದ್ದಿಲ್ಲದೇ ಸೆಟ್ಟೇರಿದೆ. ಶ್ರೀಯುತ್‌ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಕತೆಯಲ್ಲಿ ಮನುಷ್ಯನಾದವನಿಗೆ ನಾನಾ ರೀತಿಯ ಪರಿಸ್ಥಿತಿಗಳು ಆವರಿಸಿಕೊಳ್ಳುತ್ತದೆ. ಇದನ್ನೆಲ್ಲಾ ಭೇದಿಸಿಕೊಂಡು ಸಫ‌ಲನಾಗುವನೇ ವಿಕ್ರಮನಾಗುತ್ತಾನೆ. ಕಾಲೇಜಿನಲ್ಲಿ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ.

ಇದನ್ನು ತನಿಖೆ ಮಾಡಲು ಹೋಗುವಾಗ ಒಂದಷ್ಟು ಸತ್ಯಾಂಶಗಳು ಹೊರಬರುತ್ತದೆ. ಈ ಎಲ್ಲಾ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ ಎನ್ನುವುದು ಚಿತ್ರತಂಡ ಮಾತು. ಶಿಲ್ಪಾ ಮತ್ತು ಸ್ನೇಹಾ ನಾಯಕಿಯರು. “ಚೌಕಟ್ಟು” ಚಿತ್ರ ನಿರ್ಮಿಸಿರುವ ಮಂಜುನಾಥ್‌ ನಿರ್ಮಾಣದ ಎರಡನೇ ಚಿತ್ರವಿದು. ನಿರ್ಮಾಣದ ಜೊತೆಗೆ ಮಂಜುನಾಥ್‌ ಈ ಚಿತ್ರದಲ್ಲಿ ಬರುವ ನಾಲ್ಕು ಹುಡುಗರ ಪೈಕಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ.

ರಂಗಭೂಮಿ, ಕಿರುತೆರೆ ಕಲಾವಿದರುಗಳು ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆ. ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜನೆ ಮಾಡುವುದರೊಂದಿಗೆ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ.

ಮೊಂಟಿ ಭರತ್‌ ಸಂಭಾಷಣೆ, ಛಾಯಾಗ್ರಹಣ ಕಿಟ್ಟಿ ಕೌಶಿಕ್‌, ಸಂಕಲನ ಮೋಹನ್‌ ರಾಜ್‌, ಸಾಹಸ ಜೋನಿ ರಾಮದೇವ್‌ ಅವರದಾಗಿದೆ. ಮಾತೃ ಛಾಯಾ ಕ್ರಿಯೇಶನ್ಸ್‌ ಹಾಗೂ ಜಾಹಸ್‌ ಕ್ರಿಯೇಟಿವ್‌ ಇನ್‌ ಮೂಲಕ ಸಿದ್ಧಗೊಳ್ಳುತ್ತಿರುವ ಈ ಚಿತ್ರದ ಚಿತ್ರದ ಮಹೂರ್ತ ಸಮಾರಂಭಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್‌.ಎಂ.ಸುರೇಶ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿತಂಡಕ್ಕೆ ಶುಭ ಹಾರೈಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ