“ಟರ್ನಿಂಗ್‌ ಪಾಯಿಂಟ್’ನಲ್ಲಿ ಹೊಸಬರ ನಿರೀಕ್ಷೆ 


Team Udayavani, Feb 19, 2019, 5:30 AM IST

prathibha.jpg

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಚಿತ್ರಗಳು ಸದ್ದಿಲ್ಲದೆಯೇ ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ಚಿತ್ರವೊಂದು ಸದ್ದಿಲ್ಲದೆಯೇ ಸೆಟ್ಟೇರಿದೆ. ಈ ಹಿಂದೆ ಚಂದನ್‌, ಶ್ವೇತಾ ಪಂಡಿತ್‌ ಅಭಿನಯದ “ಎರಡೊಂದ್ಲ ಮೂರು’ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್‌ ದತ್‌, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ಈ ಚಿತ್ರಕ್ಕೆ ಪಂಚಾಕ್ಷರಿ ನಾಯಕರಾಗಿ ನಟಿಸುತ್ತಿದ್ದಾರೆ.

ಈ ಹಿಂದೆ “ರಂಗ್‌ಬಿರಂಗಿ’ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಪಂಚಾಕ್ಷರಿ ಅವರಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ಪ್ರತಿಭಾ ನಟಿಸುತ್ತಿದ್ದಾರೆ. ಇದು ಇವರಿಗೆ ಮೊದಲ ಚಿತ್ರ. ಸದ್ಯಕ್ಕೆ “ಟರ್ನಿಂಗ್‌ ಪಾಯಿಂಟ್‌’ ಶೀರ್ಷಿಕೆ ಇಡಬೇಕೆಂಬುದು ನಿರ್ದೇಶಕರ ಯೋಚನೆ. ಆ ಶೀರ್ಷಿಕೆ ಸದ್ಯಕ್ಕೆ ಫಿಲ್ಮ್ ಚೇಂಬರ್‌ನಲ್ಲಿದ್ದು, ಅಲ್ಲಿ ಅನುಮತಿ ಸಿಕ್ಕ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದೊಂದು ರಾತ್ರಿ ಪಯಣದ ಕಥೆ.

ತುಮಕೂರು, ಮಂಗಳೂರು ರಸ್ತೆಗಳಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ ಎನ್ನುವ ನಿರ್ದೇಶಕರು, ಬೆಂಗಳೂರಿನಲ್ಲೂ ಸಾಕಷ್ಟು ಭಾಗ ಚಿತ್ರೀಕರಿಸಲಾಗುತ್ತದೆ. ಈ ಚಿತ್ರದ ವಿಶೇಷವೆಂದರೆ, ರಾತ್ರಿ ವೇಳೆಯಲ್ಲೇ ಚಿತ್ರೀಕರಣ ನಡೆಸುವುದು. ಹಾಗಾಗಿ ಇದೊಂದು ರಾತ್ರಿ ಕಥೆ ಎಂಬುದು ಅವರ ಮಾತು. ಇಲ್ಲಿ ಕೇವಲ ಲವ್‌ಸ್ಟೋರಿ ಮಾತ್ರವಲ್ಲ, ಬೇರೆಯದ್ದೇ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ.

ಲವ್‌ ಟ್ರಾಕ್‌ ಜೊತೆಗೆ ಸೆಂಟಿಮೆಂಟ್‌ ಮತ್ತು ಮನರಂಜನೆ ಕೂಡ ಚಿತ್ರದ ಹೈಲೈಟ್‌. ಚಿತ್ರದ ಮತ್ತೂಂದು ವಿಶೇಷವೆಂದರೆ, ಇದು ಕನ್ನಡ ಜೊತೆಗೆ ಮರಾಠಿ ಭಾಷೆಯಲ್ಲೂ ತಯಾರಾಗಲಿದೆ. ಅಂದಹಾಗೆ, ಈ ಚಿತ್ರವನ್ನು ಅಭಿಲಾಶ್‌ ಚಕ್ಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳೇ ಚಿತ್ರದಲ್ಲೂ ಕಾಣಿಸಿಕೊಳ್ಳಲಿವೆ. ಶ್ರೀಧರ್‌, ಸೂರಜ್‌ ಸೇರಿದಂತೆ ಅನೇಕ ಹೊಸಬರು ನಟಿಸುತ್ತಿದ್ದಾರೆ.

“ಒಂದ್‌ ಕಥೆ ಹೇಳ್ಲಾ’ ಚಿತ್ರಕ್ಕೆ ಸಂಗೀತ ನೀಡಿರುವ ಬಕ್ಕೇಶ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಎರಡು ಹಾಡುಗಳು ಚಿತ್ರದಲ್ಲಿರಲಿವೆ. ಇನ್ನು, “ಎರಡೊಂದ್ಲ ಮೂರು’ ಚಿತ್ರದಲ್ಲಿ ಕೆಲಸ ಮಾಡಿದ್ದ ವಿನಯ್‌ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. 25 ದಿನಗಳ ಕಾಲ ನಡೆಯುವ ಚಿತ್ರೀಕರಣಕ್ಕೆ ಸೋಮವಾರ ರಾತ್ರಿ ಚಾಲನೆ ದೊರೆತಿದೆ.

ಟಾಪ್ ನ್ಯೂಸ್

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

love mocktail 2

ಲವ್‌ ಮಾಕ್ಟೇಲ್‌-2ಗೆ “ಯು’ ಪ್ರಮಾಣ ಪತ್ರ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.