ಹೊಸಬರ ಸಸ್ಪೆನ್ಸ್‌ ನ್ಯೂರಾನ್‌


Team Udayavani, Oct 14, 2018, 11:52 AM IST

nueran-4.jpg

ಐಟಿ, ಇಂಜಿನಿಯರಿಂಗ್‌ ಹಿನ್ನೆಲೆಯ ಹೊಸ ಪ್ರತಿಭೆಗಳು ಹೆಚ್ಚಾಗಿ ಬರುತ್ತಿರುವ ಹಿನ್ನೆಲೆಯಿಂದಲೋ ಏನೋ, ಇತ್ತೀಚೆಗೆ ಬರುತ್ತಿರುವ ಅನೇಕ ಸಿನಿಮಾಗಳ ಟೈಟಲ್‌ಗ‌ಳಲ್ಲೂ ಸೈನ್ಸ್‌ ಛಾಯೆ ಎದ್ದು ಕಾಣುತ್ತದೆ. ಈಗ ಅಂಥದ್ದೆ ಒಂದು ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಅದರ ಹೆಸರು “ನ್ಯೂರಾನ್‌’. ಸಾಮಾನ್ಯವಾಗಿ ವಿಜ್ಞಾನ ಬಗ್ಗೆ ತಿಳಿದುಕೊಂಡವರಿಗೆ ಈ ಹೆಸರು ಪರಿಚಯವಿರುತ್ತದೆ.

ಮನುಷ್ಯನ ದೇಹ ಬಿಲಿಯನ್ಸ್‌ ಆಫ್ ನ್ಯೂರಾನ್ಸ್‌ ನಿಂದ ರೂಪುಗೊಂಡಿದ್ದು, “ನ್ಯೂರಾನ್‌’ಗಳು ದೇಹದ ಸ್ಪರ್ಶ, ಸಂವೇದನೆ, ಗ್ರಹಿಕೆಯನ್ನು ಮೆದುಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈಗ ಇದೇ “ನ್ಯೂರಾನ್‌’ ಎಂಬ ಟೈಟಲ್‌ ಇಟ್ಟುಕೊಂಡು ನವ ನಿರ್ದೇಶಕ ವಿಕಾಸ್‌ ಪುಷ್ಪಗಿರಿ ಸಿನಿಮಾ ಮಾಡಲು ಹೊರಟಿದ್ದಾರೆ. ಮೂಲತಃ ಐಟಿ ಹಿನ್ನೆಲೆಯಿಂದ ಬಂದ ವಿಕಾಸ್‌, ಸುಮಾರು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ನಿರ್ದೇಶಕರಾದ ಸೀತಾರಾಮ ಕಾರಂತ್‌, ದೇವರಾಜ ಕುಮಾರ್‌ ಮೊದಲಾದವರ ಜತೆ ಅನೇಕ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಈಗ “ನ್ಯೂರಾನ್‌’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕ್ಕೆ ಅ. 28ರಂದು ಮುಹೂರ್ತ. ಚಿತ್ರದ ಬಗ್ಗೆ ಮಾತನಾಡುವ ವಿಕಾಸ್‌ ಪುಷ್ಪಗಿರಿ, “ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ. ನ್ಯೂರಾನ್ಸ್‌ಗಳು ನಮಗೆ ಗೊತ್ತಿಲ್ಲದಂತೆ, ನಮ್ಮೊಳಗೆ ಅನೇಕ ಕೆಲಸಗಳನ್ನು ಮಾಡುತ್ತಿರುತ್ತವೆ.

ಅವುಗಳ ಕೆಲಸ ಎಂಥವರಿಗೂ ಅಚ್ಚರಿ ಮೂಡಿಸುವಂಥದ್ದು. ಈ ಸಿನಿಮಾದಲ್ಲೂ ಕೂಡ ಆಡಿಯನ್ಸ್‌ಗೆ ಗೊತ್ತಾಗದಂತೆ ಥ್ರಿಲ್ಲಿಂಗ್‌ ಆಗಿ ಚಿತ್ರದ ಕಥೆ ತೆರೆದುಕೊಳ್ಳುತ್ತ ಹೋಗುತ್ತದೆ. ಒಂದಷ್ಟು ನೈಜ ಘಟನೆಗಳು ಕಥೆಗೆ ಸ್ಪೂರ್ತಿ. ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ. ಕಡಿಮೆ ಪಾತ್ರಗಳನ್ನು ಇಟ್ಟುಕೊಂಡು ಒಂದು ಸಸ್ಪೆನ್ಸ್‌  ಸಿನಿಮಾವನ್ನು ಮಾಡಲು ಹೊರಟಿದ್ದೇನೆ’ ಎನ್ನುತ್ತಾರೆ.  ಇನ್ನು, ಈ ಚಿತ್ರದಲ್ಲಿ ಯುವ ಎಂಬ ನವನಟ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ.

ಉಳಿದಂತೆ ನೇಹಾ ಪಾಟೀಲ್‌, ವೈಷ್ಣವಿ ಮೆನನ್‌, ವರ್ಷಾ, ಅರವಿಂದ್‌ ರಾವ್‌, ರಾಮಕೃಷ್ಣ, ಕಬೀರ್‌ ಸಿಂಗ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಗುರುಕಿರಣ್‌ ಸಂಗೀತ, ಶೋಯೆಬ್‌ ಅಹಮದ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಡಾ. ವಿ. ನಾಗೇಂದ್ರ ಪ್ರಸಾದ್‌ ಹಾಡುಗಳಿಗೆ ಸಾಹಿತ್ಯವಿದೆ. ಫ್ರೆಂಡ್ಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸಕಲೇಶಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುವ ಯೋಚನೆ ಚಿತ್ರತಂಡಕ್ಕಿದೆ. 

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Janarakshaka_Film Poster Release

‘ಜನ ರಕ್ಷಕ’ ಟೈಟಲ್‌ ಪೋಸ್ಟರ್‌ ರಿಲೀಸ್‌ : ನವ ನಿರ್ದೇಶಕಿಯ ಹೊಸ ಚಿತ್ರ

madagaja

‘ಮದಗಜ’ನಿಗೆ 50ರ ಸಂಭ್ರಮ

sreeleela

ರವಿತೇಜ ಜೊತೆ ಶ್ರೀಲೀಲಾ ಡ್ಯುಯೆಟ್‌!: ಧಮಾಕಾ ಸಿನಿಮಾಕ್ಕೆ ಕಿಸ್‌ ನಾಯಕಿ

totapuri kannada movie

ತೋತಾಪುರಿ ಆಡಿಯೋ ಟೀಸರ್‌ ಬಂತು: ‌ಕನ್ನಡವಿಲ್ಲ, ಉರ್ದು ಹಿಂದಿಯೇ ಎಲ್ಲಾ…

ಪಿ ಆರ್ ಕೆ ಬ್ಯಾನರ್‌ನ ‘ಒನ್ ಕಟ್ ಟೂ ಕಟ್’ ಬಿಡುಗಡೆ ದಿನಾಂಕ ಘೋಷಿಸಿದ ಪ್ರೈಮ್ ವಿಡಿಯೋ

ಪಿ ಆರ್ ಕೆ ಬ್ಯಾನರ್‌ನ ‘ಒನ್ ಕಟ್ ಟೂ ಕಟ್’ ಬಿಡುಗಡೆ ದಿನಾಂಕ ಘೋಷಿಸಿದ ಪ್ರೈಮ್ ವಿಡಿಯೋ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.