ಮೀಸೆ ತಿರುಗಿಸಲಿರುವ ಹೊಸಬರು

Team Udayavani, Jul 10, 2019, 3:00 AM IST

ಬಹುತೇಕ ಹೊಸಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ತಿರುಗಿಸೋ ಮೀಸೆ’ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿತು. ಶ್ರೀನಿವಾಸ್‌. ಜಿ ಹಾಗೂ ರಿಜ್ವಾನ್‌ ನಿರ್ಮಿಸುತ್ತಿರುವ “ತಿರುಗಿಸೋ ಮೀಸೆ’ ಚಿತ್ರದಲ್ಲಿ ನವಪ್ರತಿಭೆಗಳಾದ ಶ್ರೀವಿಷ್ಣು, ನಿಕ್ಕಿ ತಂಬೊಲಿ, ರೋಹಿಣಿ, ಶ್ರೀಕಾಂತ್‌ ಅಯ್ಯಂಗಾರ್‌, ಕೆಂಪೇಗೌಡ, ರಾಮರಾವ್‌, ರವಿವರ್ಮ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

“ತಿರುಗಿಸೋ ಮೀಸೆ’ ಚಿತ್ರಕ್ಕೆ ಕೃಷ್ಣ ವಿಜಯ್‌ ಎಲ್‌. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ನಡೆಸುತ್ತಿರುವ “ತಿರುಗಿಸೋ ಮೀಸೆ’ ಚಿತ್ರತಂಡ, ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ. ಹದಿಹರೆಯದ ಹುಡುಗರ ಕನಸು ಮತ್ತು ಜೀವನದ ಕುರಿತಾದ ಕಥಾಹಂದರವಿರುವ ಈ ಚಿತ್ರಕ್ಕೆ ಸುರೇಶ್‌ ಬಾಬ್ಲಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಎಸ್‌ಐಡಿ ಛಾಯಾಗ್ರಹಣ ಮತ್ತು ಧರ್ಮೇಂದ್ರ ಸಂಕಲನವಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ