ನವನವೀನ “ನವರಂಗ್‌’

ಹೊಸ ಸ್ಪರ್ಶದೊಂದಿಗೆ ಚಿತ್ರಮಂದಿರ ರೆಡಿ

Team Udayavani, Sep 2, 2019, 3:01 AM IST

Navarang

ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿದ್ದ ಅನೇಕ ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿಹೋಗಿದ್ದು ಗೊತ್ತೇ ಇದೆ. ಇನ್ನು ಕೆಲವು ಚಿತ್ರಮಂದಿರಗಳು ನವೀಕರಣದೊಂದಿಗೆ ಪುನಃ ಸಿನಿರಸಿಕರ ಪಾಲಿಗೆ ಸಂತಸ ತಂದಿದ್ದೂ ಇದೆ. ಈಗ ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಸಾವಿರಾರು ಚಿತ್ರಗಳ ಪ್ರದರ್ಶನ ನೀಡಿದ್ದ ನವರಂಗ್‌ ಚಿತ್ರಮಂದಿರ ಕೂಡ ನವೀಕರಣಗೊಳ್ಳುವ ಮೂಲಕ ನೋಡುಗರಿಗೆ ಹೊಸ ಫೀಲ್‌ ಕೊಡುವ ತಯಾರಿಯಲ್ಲಿದೆ.

ಹೌದು, ಈಗಾಗಲೇ ಮೆಜೆಸ್ಟಿಕ್‌, ಸಾಗರ್‌, ಕಲ್ಪನಾ, ಕೈಲಾಶ್‌, ತ್ರಿಭುವನ್‌, “ಕಪಾಲಿ’ ಹೀಗೆ ಪ್ರಮುಖ ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿವೆ. ಆದರೆ, ಕಳೆದ ಮೂರು ತಿಂಗಳಿನಿಂದ ತಾತ್ಕಾಲಿಕ ಪ್ರದರ್ಶನ ನಿಲ್ಲಿಸಿದ್ದ ರಾಜಾಜಿನಗರದ ಡಾ.ರಾಜಕುಮಾರ್‌ ರಸ್ತೆಯಲ್ಲಿರುವ ನವರಂಗ್‌ ಚಿತ್ರಮಂದಿರ, ಈಗ ನವೀಕರಣದೊಂದಿಗೆ ಸಿನಿರಸಿಕರನ್ನು ಆಕರ್ಷಿಸಲು ಸಜ್ಜಾಗುತ್ತಿದೆ.

ನವರಂಗ್‌ ಚಿತ್ರಮಂದಿರದ ಮಾಲೀಕ ಕೆಸಿಎನ್‌ ಮೋಹನ್‌ ಅವರು, ಚಿತ್ರಮಂದಿರಕ್ಕೆ ಇನ್ನಷ್ಟು ಉನ್ನತಮಟ್ಟ ಕಲ್ಪಿಸಿ, ಒಳ್ಳೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ನವೀಕರಣಗೊಳಿಸುತ್ತಿದ್ದಾರೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಕೆಸಿಎನ್‌ ಮೋಹನ್‌, “ಕಳೆದ 53 ವರ್ಷಗಳಿಂದಲೂ ಇರುವ ನವರಂಗ್‌ ಚಿತ್ರಮಂದಿರ ಇನ್ನು ಮುಂದೆ ಸುಸಜ್ಜಿತಗೊಂಡು, ಸಿನಿಮಾ ನೋಡುವ ಪ್ರೇಕ್ಷಕರಿಗೆ ಹೊಸ ಫೀಲ್‌ ತಂದುಕೊಡಲಿದೆ.

ಮೊದಲು ಕೆಳಗಡೆ 800 ಆಸನಗಳಿದ್ದವು. ಈಗ 450 ಕ್ಕೆ ಇಳಿಸಲಾಗಿದೆ. ಬಾಲ್ಕನಿಯಲ್ಲಿದ್ದ 350 ಆಸನಗಳನ್ನು ಈಗ 250 ಕ್ಕೆ ಇಳಿಸಲಾಗಿದೆ. ಹೊಸ ಬಗೆಯ ಆಸನ ವ್ಯವಸ್ಥೆ ಕಲ್ಪಿಸುವ ಮೂಲಕ ನವರಂಗ್‌ ಚಿತ್ರಮಂದಿರದ ಒಳಗೆ ಬರುವ ಪ್ರತಿಯೊಬ್ಬರಿಗೂ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿದ ಅನುಭವ ಆಗುವಂತಹ ವಾತಾವರಣ ಕಲ್ಪಿಸಲಾಗುತ್ತಿದೆ. ಸೆಪ್ಟೆಂಬರ್‌ 12 ರಂದು “ಪೈಲ್ವಾನ’ ಚಿತ್ರ ಬಿಡುಗಡೆಯಾಗುತ್ತಿದ್ದು, ಆ ಚಿತ್ರದ ಮೂಲಕ ನವೀಕರಣಗೊಂಡಿರುವ ನವರಂಗ್‌ ಚಿತ್ರಮಂದಿರಕ್ಕೆ ಚಾಲನೆ ಕೊಡುವ ಪ್ರಯತ್ನ ಮಾಡಲಾಗುವುದು’ ಎನ್ನುತ್ತಾರೆ ಮೋಹನ್‌.

ಅದೇನೆ ಇರಲಿ, ಡಾ.ರಾಜಕುಮಾರ್‌ ಅಭಿನಯದ “ವೀರಕೇಸರಿ’ ಈ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ. ಬಹುತೇಕ ಚಿತ್ರಗಳನ್ನು ಪ್ರದರ್ಶಿಸಿದ ಖ್ಯಾತಿ ನವರಂಗ್‌ ಚಿತ್ರಮಂದಿರಕ್ಕಿದೆ. ಕನ್ನಡದ ಎಲ್ಲಾ ಸ್ಟಾರ್‌ ಚಿತ್ರಗಳು ಇಲ್ಲಿನ ಪರದೆ ಮೇಲೆ ಬಿತ್ತರಗೊಂಡಿವೆ. ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಮುಚ್ಚೇ ಹೋಗುತ್ತಿರುವ ಸಂದರ್ಭದಲ್ಲಿ ಇರುವ ಚಿತ್ರಮಂದಿರವನ್ನು ನವೀಕರಿಸಿ, ಪುನಃ ಹೊಸ ವಾತಾವರಣ ಕಲ್ಪಿಸುವ ಧೈರ್ಯ ಮಾಡುತ್ತಿರುವುದನ್ನು ಮೆಚ್ಚಲೇಬೇಕು.

ಟಾಪ್ ನ್ಯೂಸ್

ದಾವಣಗೆರೆ: ಬಾಲ್ಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ದಾವಣಗೆರೆ: ಅಪ್ರಾಪ್ತೆಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ಪಕ್ಷ, ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

1-dddsd

ಮರೆಯಾದ ಯಕ್ಷಗಾನ ರಂಗದ ಪರಿಪೂರ್ಣ ಪೋಷಕ ಪಾತ್ರಧಾರಿ ಜಂಬೂರು ರಾಮಚಂದ್ರ ಶಾನುಭೋಗ್

cOW HUG

ವ್ಯಾಲೆಂಟೈನ್ಸ್‌ ಡೇ ಬದಲು ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಿ: ಪತ್ರ ವೈರಲ್‌

ವೈ.ಬಿ. ಅಣ್ಣಿಗೇರಿ ಮಹಾವಿದ್ಯಾಲಯ ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆ

ವೈ.ಬಿ. ಅಣ್ಣಿಗೇರಿ ಮಹಾವಿದ್ಯಾಲಯ ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಠಾಣೆ”ಯಲ್ಲಿ ಶೂಟಿಂಗ್‌ ಕಂಪ್ಲೀಟ್‌!

“ಠಾಣೆ”ಯಲ್ಲಿ ಶೂಟಿಂಗ್‌ ಕಂಪ್ಲೀಟ್‌!

tdy-11

ಬೆಂಗಳೂರು 69 ಫೆ.10ಕ್ಕೆ ರಿಲೀಸ್‌

ಕಡಲ ತೀರದಲ್ಲಿ ಹಾಡು ಹಬ್ಬ

ಕಡಲ ತೀರದಲ್ಲಿ ಹಾಡು ಹಬ್ಬ

ಅಖಾಡಕ್ಕೆ ಸೌತ್‌ ಇಂಡಿಯನ್‌ ಹೀರೋ

ಅಖಾಡಕ್ಕೆ ಸೌತ್‌ ಇಂಡಿಯನ್‌ ಹೀರೋ

ಫೆ. 17ಕ್ಕೆ ಅಕ್ಷಿತ್‌-ಅದಿತಿ ಜೋಡಿಯ ‘ಖೆಯೊಸ್‌’ ಚಿತ್ರ ಬಿಡುಗಡೆ

ಫೆ. 17ಕ್ಕೆ ಅಕ್ಷಿತ್‌-ಅದಿತಿ ಜೋಡಿಯ ‘ಖೆಯೊಸ್‌’ ಚಿತ್ರ ಬಿಡುಗಡೆ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ದಾವಣಗೆರೆ: ಬಾಲ್ಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ದಾವಣಗೆರೆ: ಅಪ್ರಾಪ್ತೆಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ಪಕ್ಷ, ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

1-dddsd

ಮರೆಯಾದ ಯಕ್ಷಗಾನ ರಂಗದ ಪರಿಪೂರ್ಣ ಪೋಷಕ ಪಾತ್ರಧಾರಿ ಜಂಬೂರು ರಾಮಚಂದ್ರ ಶಾನುಭೋಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.