2.0 ನಿರ್ಮಾಪಕರ ಜೊತೆ ನಿಖಿಲ್‌ಕುಮಾರ್‌ ಸಿನಿಮಾ


Team Udayavani, Jan 23, 2019, 5:49 AM IST

seetarama.jpg

ನಿಖಿಲ್‌ಕುಮಾರ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರ ಈ ವಾರ ತೆರೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಸಿನಿಮಾ ಬಳಿಕ ನಿಖಿಲ್‌ಕುಮಾರ್‌ ಯಾವ ಚಿತ್ರ ಒಪ್ಪಿಕೊಂಡಿದ್ದಾರೆ, ಯಾರ ಜೊತೆ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಅದಕ್ಕೆ ಸ್ವತಃ ನಿಖಿಲ್‌ಕುಮಾರ್‌ ಅವರೇ ಉತ್ತರ ಕೊಟ್ಟಿದ್ದಾರೆ. ಹೌದು, ನಿಖಿಲ್‌ಕುಮಾರ್‌ “ಸೀತಾರಾಮ ಕಲ್ಯಾಣ’ ಚಿತ್ರದ ನಂತರ ಒಂದಲ್ಲ, ಎರಡು ಚಿತ್ರಗಳಲ್ಲಿ ನಟಿಸಲು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ.

ಹಾಗಂತ, ಎರಡನ್ನೂ ಒಂದೇ ಬಾರಿಗೆ ಮಾಡುವುದಿಲ್ಲ. ಒಂದಾದ ಮೇಲೊಂದು ಚಿತ್ರ ಮಾಡುವ ಯೋಚನೆ ಮಾಡಿದ್ದಾರೆ. ಹಾಗಾದರೆ, ನಿಖಿಲ್‌ಕುಮಾರ್‌ ಅಭಿನಯದ ಮುಂದಿನ ಚಿತ್ರ ಯಾರಿಗೆ? ಇದಕ್ಕೆ ಅವರಿಂದ ಬರುವ ಉತ್ತರ, ನಿರ್ಮಾಪಕ ಕಮ್‌ ವಿತರಕ ಜಯಣ್ಣ ಅವರಿಗೆ ಮತ್ತು ಇತ್ತೀಚೆಗಷ್ಟೇ ತಮಿಳು ನಟ ರಜನಿಕಾಂತ್‌ ಅಭಿನಯದ “2.0′ ಚಿತ್ರ ನಿರ್ಮಾಣ ಮಾಡಿದ ಲೈಕಾ ಪ್ರೊಡಕ್ಷನ್ಸ್‌ ಜೊತೆಗೊಂದು ಸಿನಿಮಾ ಮಾಡಲಿದ್ದಾರೆ.

ಈ ಕುರಿತು ಸ್ವತಃ ನಿಖಿಲ್‌ಕುಮಾರ್‌ ಅವರೇ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ಇಬ್ಬರು ನಿರ್ಮಾಪಕರಿಗೆ ಒಂದೊಂದು ಚಿತ್ರ ಮಾಡಲು ರೆಡಿಯಾಗಿರುವ ನಿಖಿಲ್‌ಕುಮಾರ್‌, ಆ ಚಿತ್ರದ ಕಥೆಯಾಗಲಿ, ನಿರ್ದೇಶಕರಾಗಲಿ ಯಾರೆಂಬುದನ್ನು ಹೇಳಿಕೊಂಡಿಲ್ಲ. ಕಾರಣ, ಚಿತ್ರ ಮಾಡುವ ಬಗ್ಗೆ ಮಾತ್ರ ಸ್ಪಷ್ಟಪಡಿಸಿದ್ದಾರೆ ಹೊರತು, ಇನ್ನು, ಕಥೆ ಹೇಗಿರುತ್ತೆ, ನಿರ್ದೇಶನ ಯಾರು ಮಾಡುತ್ತಾರೆ, ಆ ಚಿತ್ರದಲ್ಲಿ ಯಾರೆಲ್ಲಾ ತಂತ್ರಜ್ಞರು ಇರುತ್ತಾರೆ ಎಂಬಿತ್ಯಾದಿ ಬಗ್ಗೆ ಮಾಹಿತಿ ಸದ್ಯಕ್ಕಿಲ್ಲ.

ನಿರ್ಮಾಪಕ ಕಮ್‌ ವಿತರಕ ಜಯಣ್ಣ ಅವರೇ “ಸೀತಾರಾಮ ಕಲ್ಯಾಣ’ ಚಿತ್ರದ ವಿತರಣೆ ಹಕ್ಕು ಪಡೆದು, ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಅವರ ಜೊತೆಗೆ ಒಂದು ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಆದರೆ, ಅದು ಯಾವಾಗ ಶುರುವಾಗುತ್ತೆ, ಕಥೆ ಸ್ವಮೇಕ್‌ ಆಗಿರುತ್ತೋ, ರಿಮೇಕ್‌ ಚಿತ್ರದ್ದಾಗಿರುತ್ತೋ ಗೊತ್ತಿಲ್ಲ. ಇನ್ನು, ಲೈಕಾ ಪ್ರೊಡಕ್ಷನ್ಸ್‌ ಜೊತೆಗೂ ಸಿನಿಮಾ ಮಾಡುವ ಮಾತುಕತೆ ನಡೆದಿದೆಯಾದರೂ, ಅದು ಯಾವಾಗ ಎಂಬುದಕ್ಕೆ ಉತ್ತರವಿಲ್ಲ.

ಅದೇನೆ ಇರಲಿ, ನಿಖಿಲ್‌ಕುಮಾರ್‌ ಸದ್ಯಕ್ಕೆ “ಸೀತಾರಾಮ ಕಲ್ಯಾಣ’ ಬಗ್ಗೆ ಗಮನಹರಿಸಿದ್ದಾರೆ. ಆ ಚಿತ್ರ ಬಿಡುಗಡೆಯಾದ ನಂತರವಷ್ಟೇ, ಯಾರ ಜೊತೆಗೆ ಚಿತ್ರ ಮಾಡಬೇಕೆಂಬುದನ್ನು ನಿರ್ಧರಿಸಲಿದ್ದಾರೆ. ಅವರ ಎರಡನೇ ಚಿತ್ರ “ಸೀತಾರಾಮ ಕಲ್ಯಾಣ’ ಮೇಲೆ ಅವರಿಗೆ ಸಾಕಷ್ಟು ವಿಶ್ವಾಸವಿದೆ. ಅದಕ್ಕೆ ಕಾರಣ, ಚಿತ್ರ ಮೂಡಿಬಂದಿರುವ ರೀತಿ. ಹರ್ಷ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರದಲ್ಲಿ ರಚಿತಾರಾಮ್‌ ನಾಯಕಿ.

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

premam poojyam

ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌: ಮನಗೆದ್ದ ಪ್ಯೂರ್‌ ಲವ್‌ ಸ್ಟೋರಿ

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು

ek-love-ya

6 ಮಿಲಿಯನ್‌ ದಾಟಿದ ‘ಏಕ್‌ ಲವ್‌ ಯಾ’ ಚಿತ್ರದ ಎಣ್ಣೆ ಸಾಂಗ್‌

ತಿಂಗಳಾದ್ರೂ ಕರಗದ ಅಪ್ಪು ಅಭಿಮಾನಿಗಳ ಸಾಲು…

ತಿಂಗಳಾದ್ರೂ ಕರಗದ ಅಪ್ಪು ಅಭಿಮಾನಿಗಳ ಸಾಲು…

raymo

ಇಶಾನ್- ಅಶಿಕಾ ಅಭಿನಯದ ಪ್ಯೂರ್ ಲವ್ ಸ್ಟೋರಿ “ರೆಮೋ” ಟೀಸರ್ ರಿಲೀಸ್

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.