Udayavni Special

ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

Team Udayavani, Jul 29, 2021, 11:19 AM IST

ninna sanihake

ತನ್ನ ಟೈಟಲ್‌, ಫ‌ಸ್ಟ್‌ಲುಕ್‌, ಮೇಕಿಂಗ್‌ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ನಿನ್ನ ಸನಿಹಕೆ’ ಚಿತ್ರ ಇದೇ ಆಗಸ್ಟ್‌ ನಲ್ಲಿ ತೆರೆಗೆ ಬರೋದಕ್ಕೆ ತಯಾರಾಗುತ್ತಿದೆ. ಇನ್ನು “ನಿನ್ನ ಸನಿಹಕೆ…’ ಚಿತ್ರದಲ್ಲಿ ಸೂರಜ್‌ ಗೌಡ ನಾಯಕನಾಗಿ ಅಭಿನಯಿಸಿದ್ದು, ತೆರೆಹಿಂದೆ ನಿರ್ದೇಶನದ ಜವಾಬ್ದಾರಿಯನ್ನೂ ಸೂರಜ್‌ ಅವರೇ ವಹಿಸಿಕೊಂಡಿದ್ದಾರೆ.

“ನಿನ್ನ ಸನಿಹಕೆ…’ ಚಿತ್ರದ ಮೂಲಕ ವರನಟ ಡಾ. ರಾಜಕುಮಾರ್‌ ಮೊಮ್ಮಗಳು, ನಟ ರಾಮಕುಮಾರ್‌ ಪುತ್ರಿ ಧನ್ಯಾ ರಾಮಕುಮಾರ್‌ ನಾಯಕ ನಟಿಯಾಗಿ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ‌ಇಷ್ಟೊತ್ತಿಗಾಗಲೇ “ನಿನ್ನ ಸನಿಹಕೆ’ ಚಿತ್ರ ಥಿಯೇಟರ್‌ಗೆ ಬಂದಿರಬೇಕಿತ್ತು. ಈ ವರ್ಷದ ಆರಂಭದಿಂದಲೇ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದ ಚಿತ್ರತಂಡ, ಇದೇ ಏಪ್ರಿಲ್‌ನಲ್ಲಿ “ನಿನ್ನ ಸನಿಹಕೆ’ ಚಿತ್ರವನ್ನು ಪ್ರೇಕ್ಷಕರ ಸನಿಹಕೆ ತರುವ ಯೋಜನೆ ಹಾಕಿಕೊಂಡಿತ್ತು. ಆದರೆ ಕೋವಿಡ್‌ ಎರಡನೇ ಅಲೆಯ ಆತಂಕ ಮತ್ತು ಲಾಕ್‌ಡೌನ್‌ನಿಂದಾಗಿ ಚಿತ್ರದ ಬಿಡುಗಡೆಯನ್ನು ಕೆಲಕಾಲ ಮುಂದೂಡಿದ್ದ, ಚಿತ್ರತಂಡ ಇದೀಗ ಮತ್ತೆ “ನಿನ್ನ ಸನಿಹಕೆ’ ಚಿತ್ರವನ್ನು ಥಿಯೇಟರ್‌ಗೆ ತರುವ ಕಸರತ್ತು ಆರಂಭಿಸಿದೆ.

ಇದನ್ನೂ ಓದಿ:ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಇದೇ ಆಗಸ್ಟ್‌ 1ರಂದು”ನಿನ್ನ ಸನಿಹಕೆ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಆಗ ಸ್ಟ್‌20ಕ್ಕೆ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.

ಇನ್ನು ಈಗಾಗಲೇ ಬಿಡುಗಡೆ ‌ ಯಾಗಿರುವ “ನಿನ್ನ ಸನಿಹಕೆ ‌ ‘ ಚಿತ್ರದ ಹಾಡುಗಳು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, “ಮಳೆ ಮಳೆ ಮಳೆಯೇ…’ ಹಾಗೂ “ನೀ ಪರಿಚಯ…’ ಹಾಡುಗಳು ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿವೆ.

ಇದೀಗ ಚಿತ್ರದ ಪ್ರಚಾರ ಭಾಗವಾಗಿ “ನೀ ಪರಿಚಯ…’ ಹಾಡಿಗೆ ಚಿತ್ರದ ನಾಯಕ ಸೂರಜ್‌ ಗೌಡ ಮತ್ತು ನಾಯಕಿ ಧನ್ಯಾ ಇಬ್ಬರೂ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸೂರಜ್‌ ಮತ್ತು ಧನ್ಯಾ ಹಾಡಿರೋ ಈ ಕವರ್‌ ಸಾಂಗ್‌ ರಿಲೀಸ್‌ ಮಾಡಿದ್ದು, ಇಬ್ಬರು ಹಾಡಿರೋ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಟ್ಟಾರೆ ಲಾಕ್‌ಡೌನ್‌ ಬಳಿಕ ಒಂದಷ್ಟು ಸೌಂಡ್‌ ಮಾಡುತ್ತಿರುವ “ನಿನ್ನ ಸ‌ನಿಹಕೆ’ ಎಷ್ಟರ ಮಟ್ಟಿಗೆ ಪ್ರೇಕ್ಷಕರ  ಮನಸ್ಸಿಗೆ ಹತ್ತಿರವಾಗಲಿದೆ ಅನ್ನೋ ಕುತೂಹಲಕ್ಕೆ ಇದೇ ಆಗಸ್ಟ್‌ನಲ್ಲಿ ಉತ್ತರ ಸಿಗಲಿದೆ.

ಟಾಪ್ ನ್ಯೂಸ್

ಘಟಪ್ರಭಾ : ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ

ಘಟಪ್ರಭಾ : ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ

‘ಅಕ್ಷಿ’ ಯಿಂದ ಬಂತು ಹಾಡು: ನೇತ್ರದಾನದ ಮಹತ್ವ ಸಾರುವ ಚಿತ್ರ

‘ಅಕ್ಷಿ’ ಯಿಂದ ಬಂತು ಹಾಡು: ನೇತ್ರದಾನದ ಮಹತ್ವ ಸಾರುವ ಚಿತ್ರ

ದಾರಿ ಯಾವುದಯ್ಯ ಶಾಲೆಗೆ ? ಶಾಲೆಗೆ ಹೋಗುವ ವಿದ್ಯಾರ್ಥಿಗಳ ನಿತ್ಯ ನರಕಯಾತನೆ

ದಾರಿ ಯಾವುದಯ್ಯ ಶಾಲೆಗೆ ? ಕೆಸರು ತುಂಬಿದ ರಸ್ತೆಯಲ್ಲಿ ವಿದ್ಯಾರ್ಥಿಗಳ ನಿತ್ಯ ನರಕಯಾತನೆ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

cgdfg

ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ

ಪುತ್ತೂರು ನಗರ ಪೊಲೀಸ್ ಠಾಣೆ

ಪುತ್ತೂರು:ಹೋಟೆಲ್ ನಲ್ಲಿ ಭಿನ್ನಕೋಮಿನ ಯವಕ-ಯುವತಿಗೆ ಹಲ್ಲೆ ಆರೋಪ:ಹಿಂದೂಸಂಘಟನೆಯ ಇಬ್ಬರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆಂಟಿಮೆಂಟ್‌ ಆರಾಧ್ಯ: ಕಿರುಚಿತ್ರದಲ್ಲಿ ಅಪ್ಪ, ಮಗಳ ಬಾಂಧವ್ಯ

ಸೆಂಟಿಮೆಂಟ್‌ ಆರಾಧ್ಯ: ಕಿರುಚಿತ್ರದಲ್ಲಿ ಅಪ್ಪ, ಮಗಳ ಬಾಂಧವ್ಯ

‘ಅಕ್ಷಿ’ ಯಿಂದ ಬಂತು ಹಾಡು: ನೇತ್ರದಾನದ ಮಹತ್ವ ಸಾರುವ ಚಿತ್ರ

‘ಅಕ್ಷಿ’ ಯಿಂದ ಬಂತು ಹಾಡು: ನೇತ್ರದಾನದ ಮಹತ್ವ ಸಾರುವ ಚಿತ್ರ

ಹೊಸಬರ ಮೂರು ಮತ್ತೂಂದು!

ಹೊಸಬರ ಮೂರು ಮತ್ತೊಂದು!

ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ನಾಯಕಿ

ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ಗೌಡ ನಾಯಕಿ

ದುಬೈನಿಂದ ಮರಳಿದ ಬಳಿಕ ರೋಣ ಕೆಲಸ: ಫ್ಯಾನ್ಸ್‌ ಗೆ ಕಿಚ್ಚನ ಅಪ್‌ ಡೇಟ್‌

ದುಬೈನಿಂದ ಮರಳಿದ ಬಳಿಕ ರೋಣ ಕೆಲಸ: ಫ್ಯಾನ್ಸ್‌ ಗೆ ಕಿಚ್ಚನ ಅಪ್‌ ಡೇಟ್‌

MUST WATCH

udayavani youtube

ಸೈಕಲ್‌ ಜಾಥಾ ಬಳಿಕ ಬೆಂಜ್ ಕಾರ್ ಹತ್ತುವ ‘ಕೈ’ನಾಯಕರು: ಬೊಮ್ಮಾಯಿ

udayavani youtube

ನೂತನ ಬಾರ್ ಓಪನ್ ಹಿನ್ನೆಲೆ ಗ್ರಾಮಸ್ಥರಿಂದ ಆಕ್ರೋಶ

udayavani youtube

‘ತಾಸೆದ ಪೆಟ್ಟ್ ಗ್’ ತುಳು ಹಾಡು ಹಾಡಿದ ಮಂಗಳೂರು ಪೊಲೀಸ್ ಆಯುಕ್ತ

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಹೊಸ ಸೇರ್ಪಡೆ

ಘಟಪ್ರಭಾ : ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ

ಘಟಪ್ರಭಾ : ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ

500 ಕೆಜಿ ತೂಕ ಹೊತ್ತು ಅಭಿಮನ್ಯು ತಾಲೀಮು

500 ಕೆಜಿ ತೂಕ ಹೊತ್ತು ಅಭಿಮನ್ಯು ತಾಲೀಮು

4 ಲಕ್ಷ ರೈತರಿಗೆ 300 ಕೋಟಿ ರೂ. ಸಾಲ

4 ಲಕ್ಷ ರೈತರಿಗೆ 300 ಕೋಟಿ ರೂ. ಸಾಲ

netravti

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

ಸೆಂಟಿಮೆಂಟ್‌ ಆರಾಧ್ಯ: ಕಿರುಚಿತ್ರದಲ್ಲಿ ಅಪ್ಪ, ಮಗಳ ಬಾಂಧವ್ಯ

ಸೆಂಟಿಮೆಂಟ್‌ ಆರಾಧ್ಯ: ಕಿರುಚಿತ್ರದಲ್ಲಿ ಅಪ್ಪ, ಮಗಳ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.