ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ


Team Udayavani, Jul 7, 2022, 4:03 PM IST

Namma-hudugrau

ನಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್‌ ನಾಯಕರಾಗಿ ನಟಿಸಿರುವ “ನಮ್ಮ ಹುಡುಗರು’ ಚಿತ್ರ ಈ ವಾರ ತೆರೆಕಾಣುತ್ತಿದ. ಈ ಚಿತ್ರವನ್ನು ಹೆಚ್‌.ಬಿ.ಸಿದ್ದು ನಿರ್ದೇಶಿಸಿದ್ದಾರೆ.

ಬಿಡುಗಡೆ ತಯಾರಿ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಿದ್ದು, “ಇದೇ ಶುಕ್ರವಾರ ನಮ್ಮ ಚಿತ್ರ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೇಲರ್‌ ಬಿಡುಗಡೆ ಹಾಗೂ ಪ್ರೀ ರಿಲೀಸ್‌ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಂದು ಕಿಚ್ಚ ಸುದೀಪ್‌, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಂಡ್ಯದ ಹಿನ್ನೆಲೆಯಲ್ಲಿ ನಡೆಯುವ ಕಥೆಯಿದು. ಸ್ನೇಹಿತರ ಬಳಗ, ಆ ಸ್ನೇಹಿತರ ಹುಡುಗಾಟ, ಅವರ ನಡುವೆ ಹುಟ್ಟಿಕೊಳ್ಳುವ ಮಿಥ್ಯ. ಸುಳ್ಳಿನಿಂದ ಆರಂಭವಾಗಿ ಸುಳ್ಳಿನಿಂದಲೇ ಮುಗಿಯುವ ಕಥೆಯನ್ನು ಈ ಚಿತ್ರದಲ್ಲಿ ನಿರೂಪಿಸಿದ್ದೇವೆ. ಮಂಡ್ಯದಲ್ಲಿ ಪ್ರಾರಂಭವಾಗಿ ಮಂಗಳೂರಿನಲ್ಲಿ ಕೊನೆಯಾಗುವ ಕಥೆಯಿದು. ಒಂದು ಪದ ಇಟ್ಟುಕೊಂಡು ಇಡೀ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಇದರಲ್ಲಿ ಹೇಳಿದ್ದೇವೆ. ಸ್ನೇಹಿತರ ನಡುವೆ ಮೋಸ, ವಂಚನೆ ಸುಳಿಯಬಾರದು, ಅಲ್ಲಿ ಸುಳ್ಳೊಂದು ಹುಟ್ಟಿದಾಗ ಅದು ಏನೆಲ್ಲ ತೊಂದರೆಗೆ ಕಾರಣವಾಯಿತೆಂದು ಈ ಚಿತ್ರ ನಿರೂಪಿಸುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು, ಕಾರವಾರ, ಸಕಲೇಶಪುರ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ನಡೆಸಿದ್ದೇವೆ’ ಎಂದರು

ನಾಯಕ ನಿರಂಜನ್‌ ಅವರಿಗೆ ಹೀರೋ ಆಗಿ ಇದು ಮೊದಲ ಸಿನಿಮಾ. ಸಹಜವಾಗಿಯೇ ಎಕ್ಸೆ„ಟ್‌ ಆಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರಂಜನ್‌, “ನಾರ್ಮಲ್‌ ಸಿನಿಮಾ ಇದಲ್ಲ. ಒಂದೊಳ್ಳೆಯ ಕಂಟೆಂಟ್‌ ಇದೆ. ರಿಯಲ್‌ ಲೈಫ್ನಲ್ಲಿ ಎಲ್ಲರಿಗೂ ಭಾವನಾತ್ಮಕವಾಗಿ ಚಿತ್ರ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಹಾಡುಗಳು ಹೈಲೈಟ್ಸ್. ಚಿತ್ರದ ದೃಶ್ಯವೊಂದನ್ನು ಬೆಟ್ಟದ ಮೇಲೆ ಶೂಟ್‌ ಮಾಡಿದ್ದೇವೆ. ಸಖತ್‌ ಎತ್ತರದಲ್ಲಿ ಮಾಡಿದ ಸೀನ್‌ ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲೋಕ್‌, ಪ್ರವೀಣ್‌ ಹಾಗೂ ಮಾರುತಿ ನನ್ನ ಸ್ನೇಹಿತರಾಗಿ ಉತ್ತಮ ಅಭಿನಯ ನೀಡಿದ್ದಾರೆ. ಸೆಂಟಿಮೆಂಟ್‌, ಕಾಮಿಡಿಯಿಂದ ಆರಂಭವಾಗುವ ಕಥೆ ನಂತರ ಸೀರಿಯಸ್‌ ಆಗುತ್ತದೆ’ ಎಂದರು.

ರಾಧ್ಯಾ ಈ ಚಿತ್ರದ ನಾಯಕಿ. “ನಾನಿಲ್ಲಿ ಗೌರಿ ಎಂಬ ಮಂಡ್ಯ ಹುಡುಗಿಯಾಗಿ ನಟಿಸಿದ್ದು, ಎಲ್ಲರ ಮನಕ್ಕೂ ಹತ್ತಿರವಾಗುವಂಥ ಪಾತ್ರ’ ಎಂದರು.

“ಗೋಲ್ಡನ್‌ ಹಾರ್ಟ್ಸ್’ ಮೂಲಕ ಕೆ.ಕೆ. ಅಶ್ರಫ್ ಅವರ ನಿರ್ಮಾಣ ಮಾಡಿದ್ದು, ಈ ಚಿತ್ರವನ್ನು “ಜಯಣ್ಣ ಫಿಲಂಸ್‌’ ಬಿಡುಗಡೆ ಮಾಡುತ್ತಿದೆ.

ಟಾಪ್ ನ್ಯೂಸ್

web exclusive thumb gtstjs

ಕಿರಾಣಿ ಅಂಗಡಿಯಾತ ನೀಡಿದ ಐಡಿಯಾಗೆ ಈಗ ಕೋಟಿ ಬೆಲೆ…: ಇದು ಮೀಶೋ ಕಥೆ

10 ಕೋಟಿ ಜಾಹೀರಾತು ಆಫರ್‌ ತಿರಸ್ಕರಿಸಿದ ಅಲ್ಲು ಅರ್ಜುನ್‌: ಫ್ಯಾನ್ಸ್‌ ಫುಲ್‌ ಖುಷ್

10 ಕೋಟಿ ರೂ. ಜಾಹೀರಾತು ಆಫರ್‌ ತಿರಸ್ಕರಿಸಿದ ಅಲ್ಲು ಅರ್ಜುನ್‌: ಫ್ಯಾನ್ಸ್‌ ಫುಲ್‌ ಖುಷ್

ಉತ್ತರಪ್ರದೇಶ: ಯಮುನಾ ನದಿಯಲ್ಲಿ ದೋಣಿ ಮುಳುಗಿ 20ಕ್ಕೂ ಅಧಿಕ ಮಂದಿ ಸಾವು?

ಉತ್ತರಪ್ರದೇಶ: ಯಮುನಾ ನದಿಯಲ್ಲಿ ದೋಣಿ ಮುಳುಗಿ 20ಕ್ಕೂ ಅಧಿಕ ಮಂದಿ ಸಾವು?

1-saASs

ಬೊಮ್ಮಾಯಿ ನೇತೃತ್ವದಲ್ಲೇ ಅವಧಿ ಪೂರ್ಣ: ಕೇಂದ್ರ ಸಚಿವ‌ ನಾರಾಯಣಸ್ವಾಮಿ

ಕಾಂಗ್ರೆಸ್‌ ಈಗ ಡಬಲ್‌ ಡೋರ್‌ ಬಸ್‌: ಸಚಿವ ಸುಧಾಕರ್‌ ವ್ಯಂಗ್ಯ

ಕಾಂಗ್ರೆಸ್‌ ಈಗ ಡಬಲ್‌ ಡೋರ್‌ ಬಸ್‌: ಸಚಿವ ಸುಧಾಕರ್‌ ವ್ಯಂಗ್ಯ

1—ASsASas

ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳನ್ನು ನಿರಾಕರಿಸಿದರೆ ಕಠಿಣ ಕ್ರಮ: ಡಾ.ಕೆ.ಸುಧಾಕರ್‌

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 515 ಅಂಕ ಜಿಗಿತ; 59,000 ಗಡಿ ದಾಟಿದ ಸೂಚ್ಯಂಕ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 515 ಅಂಕ ಜಿಗಿತ; 59,000 ಗಡಿ ದಾಟಿದ ಸೂಚ್ಯಂಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

‘ಲೈನ್‌ ಮ್ಯಾನ್‌’ ಚಿತ್ರಕ್ಕೆ ಮುಹೂರ್ತ

‘ಲೈನ್‌ ಮ್ಯಾನ್‌’ ಚಿತ್ರಕ್ಕೆ ಮುಹೂರ್ತ

1-sdssad

ಧ್ರುವ ಸರ್ಜಾ ಭರ್ಜರಿ ಈಗ ಪುಷ್ಪರಾಜ್‌-ದಿ ಸೋಲ್ಜರ್‌

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

bond ravi

ಡಬ್ಬಿಂಗ್‌ ಮುಗಿಸಿದ ‘ಬಾಂಡ್‌ ರವಿ’

MUST WATCH

udayavani youtube

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

ಹೊಸ ಸೇರ್ಪಡೆ

web exclusive thumb gtstjs

ಕಿರಾಣಿ ಅಂಗಡಿಯಾತ ನೀಡಿದ ಐಡಿಯಾಗೆ ಈಗ ಕೋಟಿ ಬೆಲೆ…: ಇದು ಮೀಶೋ ಕಥೆ

ಜಂತು ಹುಳು ಬಾಧೆ ನಿಯಂತ್ರಣ ಅಗತ್ಯ

ಜಂತು ಹುಳು ಬಾಧೆ ನಿಯಂತ್ರಣ ಅಗತ್ಯ

1-asdada

ಎಮ್ಮೆ ಅಪಘಾತ ವಿಮೆ ನಿರಾಕರಿಸಿದ ವಿಮಾ ಕಂಪನಿಗೆ 95 ಸಾವಿರ ರೂ.ದಂಡ

1-dsa-as-das

ಚೀಲಗಾನಹಳ್ಳಿ: ನೆರೆಸಂತ್ರಸ್ತರಿಗೆ ರಾಮಕೃಷ್ಣ ಸೇವಾಶ್ರಮದಿಂದ ಪರಿಹಾರ ಸಾಮಗ್ರಿ ವಿತರಣೆ

10 ಕೋಟಿ ಜಾಹೀರಾತು ಆಫರ್‌ ತಿರಸ್ಕರಿಸಿದ ಅಲ್ಲು ಅರ್ಜುನ್‌: ಫ್ಯಾನ್ಸ್‌ ಫುಲ್‌ ಖುಷ್

10 ಕೋಟಿ ರೂ. ಜಾಹೀರಾತು ಆಫರ್‌ ತಿರಸ್ಕರಿಸಿದ ಅಲ್ಲು ಅರ್ಜುನ್‌: ಫ್ಯಾನ್ಸ್‌ ಫುಲ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.