ನಿರೂಪ್ ಹೊಸ ಚಿತ್ರ ಶುರುವಾಯ್ತು
Team Udayavani, Dec 3, 2017, 10:43 AM IST
ನಿರೂಪ್ ಭಂಡಾರಿ ಹಾಗೂ ರಾಧಿಕಾ ಪಂಡಿತ್ ಕಾಂಬಿನೇಶನ್ನಲ್ಲಿ ಒಂದು ಸಿನಿಮಾ ಶುರುವಾಗಲಿದೆ ಎಂಬ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರಕ್ಕೆ ಶುಕ್ರವಾರ ಮುಹೂರ್ತ ನಡೆದಿದೆ. ಸಜ್ಜನ್ರಾವ್ ಸರ್ಕಲ್ನಲ್ಲಿರುವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರ ಸೆಟ್ಟೇರಿದೆ. ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ವಿ.ಪ್ರಿಯಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಅಂದಹಾಗೆ, ಮದುವೆಯಾದ ಬಳಿಕ ರಾಧಿಕಾ ಪಂಡಿತ್ ಒಪ್ಪಿಕೊಂಡ ಮೊದಲ ಸಿನಿಮಾವಿದು. “ರಂಗಿತರಂಗ’ ಮೂಲಕ ಚಿತ್ರರಂಗಕ್ಕೆ ಬಂದ ನಿರೂಪ್ ಭಂಡಾರಿ ನಟನೆಯ ಎರಡನೇ ಚಿತ್ರ “ರಾಜರಥ’ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗ ಹೊಸ ಚಿತ್ರ ಆರಂಭವಾಗಿದ್ದು, ಇದು ಅವರ ಮೂರನೇ ಚಿತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Kannada Cinema: ತೆರೆಗೆ ಬಂತು ಯುವ, ತಾರಿಣಿ