ನಿಶ್ವಿಕಾ ಪಾರ್ಟಿ ಸ್ಟೆಪ್ಸ್ ವೈರಲ್
Team Udayavani, Dec 29, 2020, 4:15 PM IST
ಈ ವರ್ಷದ ಆರಂಭದಲ್ಲಿ “ಜಂಟಲ್ ಮ್ಯಾನ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ನಿಶ್ವಿಕಾ ನಾಯ್ಡು, ವರ್ಷದ ಕೊನೆಗೆ ಆಲ್ಬಂ ಸಾಂಗ್‌ನಲ್ಲಿ ಮತ್ತೂಮ್ಮೆ ಬೋಲ್ಡ್ ಆಗಿ ದರ್ಶನ ಕೊಟ್ಟಿದ್ದಾರೆ.
ಹೌದು, ಇತ್ತೀಚೆಗಷ್ಟೇ ನ್ಯೂ ಇಯರ್‌ಗಾಗಿ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ಅಭಿನಯಿಸಿದ್ದ “ಪಾರ್ಟಿ ಫ್ರೀಕ್’ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಇನ್ನು ಈ ಹಾಡಿನಲ್ಲಿ ನಟಿ ನಿಶ್ವಿಕಾ ನಾಯ್ಡು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದುಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ನಿಶ್ವಿಕಾ ನಾಯ್ಡ ಅಭಿನಯಿಸುರುವ ಈ ಹಾಡು ಯೂ-ಟ್ಯೂಬ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ನಿಶ್ವಿಕಾ ಬೋಲ್ಡ್ ಆ್ಯಂಡ್ ಗ್ಲಾಮರಸ್ ಲುಕ್ ನೋಡುಗರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : ಚಿತ್ರರೂಪದಲ್ಲಿ ಆಚಾರ್ಯ ಶ್ರೀಶಂಕರ
ವಿಷ್ಣುವರ್ಧನ್ ಕ್ಯಾಲೆಂಡರ್:
ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಸಂಘ “ಡಾ. ವಿಷ್ಣು ಸೇನಾ ಸಮಿತಿ’ಯಿಂದ ವಿಷ್ಣುವರ್ಧನ್ ಸಿನಿಮಾಗಳ ಹೆಸರಿರುವ “ಕೋಟಿಗೊಬ್ಬ’ 2021 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ. ಇನ್ನೊಂದು ವಿಶೇಷವೆಂದರೆ, ಈ ಕ್ಯಾಲೆಂಡರ್‌ನಲ್ಲಿ ಕನ್ನಡ ವರ್ಣಮಾಲೆಯಲ್ಲಿ ಬರುವ ಅಕ್ಷರಗಳನ್ನು, ವಿಷ್ಣುವರ್ಧನ್ ಅಭಿನಯಿಸಿದ್ದ ಸಿನಿಮಾಗಳ ಹೆಸರಗಳ ಸೇರಿಸಿ, ವಿನ್ಯಾಸ ಮಾಡಲಾಗಿದೆ.
“ಅ’ – “ಅಣ್ಣ-ಅತ್ತಿಗೆ’, “ಆ’ -“ಆಪ್ತಮಿತ್ರ’, “ಇ’ – “ಇಂದಿನ ರಾಮಾಯಣ’, ಹೀಗೆ ವಿಷ್ಣುವರ್ಧನ್ ಅಭಿನಯಿಸಿರುವ ಚಿತ್ರಗಳ ಹೆಸರುಗಳನ್ನು ಅಕ್ಷರ ಮಾಲೆ ಗುರುತಿಸುವಂತೆ ಬಳಸಲಾಗಿದೆ.