Udayavni Special

ಅನೀಶ್‌ ಈಗ ಗಾಯಕ, ಇವನೊಬ್ಬ ಪೊರ್ಕಿ… ವಾಸು ಬಂದ ದಾರಿಬಿಡಿ


Team Udayavani, Jul 17, 2018, 4:11 PM IST

anish.jpg

ಅನೀಶ್‌ ತೇಜಶ್ವರ್‌ ನಾಯಕ, ನಿರ್ಮಾಪಕರಾಗುವುದರ ಜೊತೆಗೆ ಗಾಯಕರೂ ಆಗಿದ್ದಾರೆ. ಹೌದು, ಹೀರೋ ಆಗಿದ್ದ ಅನೀಶ್‌ “ವಾಸು – ನಾನ್‌ ಪಕ್ಕಾ ಕಮರ್ಷಿಯಲ್‌’ ಚಿತ್ರದ ಮೂಲಕ ನಿರ್ಮಾಪಕರಾದರು. ಈಗ ಅದೇ ಚಿತ್ರದಲ್ಲಿ ಹಾಡುವ ಮೂಲಕ ಗಾಯಕರೂ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅನೀಶ್‌ ತೇಜಶ್ವರ್‌ ಹಾಡಿದ್ದಾರೆ. 

“ಅಲೆಮಾರಿ’ ಸಂತು ಬರೆದ “ಇವನೊಬ್ಬ ಪೊರ್ಕಿ, ಇವನೊಬ್ಬ ಕಂತ್ರಿ… ವಾಸು ಬಂದ ದಾರಿ ಬಿಡಿ…’ ಎಂಬ ಹಾಡಿಗೆ ಅನೀಶ್‌ ಧ್ವನಿಯಾಗಿದ್ದಾರೆ. ಅಜನೀಶ್‌ ಸಂಗೀತದಲ್ಲಿ ಮೂಡಿ ಬಂದ ಈ ಹಾಡನ್ನು ಇತ್ತೀಚೆಗೆ ಅಜನೀಶ್‌ ಅವರ ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡಲಾಗಿದೆ. 

ಅಷ್ಟಕ್ಕೂ ಈ ಹಾಡನ್ನು ಹಾಡಬೇಕೆಂಬ ಯೋಚನೆ ಅನೀಶ್‌ ಅವರಿಗಿರಲಿಲ್ಲವಂತೆ. ಇದೊಂದು ಹಾಡು ಮಾತ್ರ ಬಾಕಿ ಇದ್ದುದರಿಂದ, ಯಾರಿಂದ ಹಾಡಿಸಬೇಕು, ಯಾವಾಗ ಹಾಡಿಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗ, “ಬೇಗನೇ ಯಾರಿಂದನಾದರೂ ಹಾಡಿಸಿ, ಇಲ್ಲಾ ಅಂದ್ರೆ, ನಾನೇ ಹಾಡಲಾ?’ ಎಂದು ಅನೀಶ್‌ ಹೇಳಿದ್ದಾರೆ. ಹಾಗೆ ಹೇಳಿದ್ದೇ ತಡ, ಅಜನೀಶ್‌ ಲೋಕನಾಥ್‌ ತಡಮಾಡದೆ, ಸ್ಟುಡಿಯೋಗೆ ಕರೆಸಿ, ಹಾಡಿ ಅಂದಿದ್ದಾರೆ. ಸಾಂಗ್‌ ಚೆನ್ನಾಗಿ ಮೂಡಿಬಂದರೆ ಮಾತ್ರ ಇಟ್ಟುಕೊಳ್ಳೋಣ, ಇಲ್ಲವಾದರೆ ಬೇಡ ಎಂಬ ತೀರ್ಮಾನಕ್ಕೆ ಬಂದು, ಅನೀಶ್‌ ತೇಜಶ್ವರ್‌ ಹಾಡಿದ್ದಾರೆ. 

ಕೇವಲ ಎರಡು ಗಂಟೆಯಲ್ಲೇ ಆ ಹಾಡು ಮುಗಿಸಿಬಿಟ್ಟಿದ್ದಾರೆ. ಅದೊಂದು ಪೆಪ್ಪಿ ನಂಬರ್‌ ಆಗಿದ್ದರಿಂದ ಜೋಶ್‌ನಲ್ಲೇ ಹಾಡಿದ್ದಾರೆ. ಅದು ಅಜನೀಶ್‌ಗೂ ಇಷ್ಟವಾಗಿದೆ. ಹೀರೋ ಇಂಟ್ರಡಕ್ಷನ್‌ ಸಾಂಗ್‌ಗೆ ಅವರೇ ಧ್ವನಿಯಾಗಿರುವುದರಿಂದ ಸಹಜವಾಗಿಯೇ ಅವರಿಗೆ ಖುಷಿ ಇದೆ. ಈ ಹಾಡನ್ನು ಮುಂದಿನವಾರ ಬಿಡುಗಡೆ ಮಾಡಲು ಅನೀಶ್‌ ಯೋಚಿಸಿದ್ದಾರೆ. 

ಅಂದಹಾಗೆ, ಚಿತ್ರ ಈಗ ಸೆನ್ಸಾರ್‌ ಅಂಗಳದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ “ವಾಸು’ ಜುಲೈನಲ್ಲೇ ಬರುವ ಸಾಧ್ಯತೆ ಇದೆ. ಇಲ್ಲವಾದರೆ, ಆಗಸ್ಟ್‌ ಮೊದಲ ವಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾನೆ.  ಚಿತ್ರಕ್ಕೆ ದಿಲೀಪ್‌ ಚಕ್ರವರ್ತಿ ಛಾಯಾಗ್ರಹಣವಿದೆ. ನಿಶ್ವಿ‌ಕಾ ನಾಯ್ಡು ನಾಯಕಿ. ಉಳಿದಂತೆ ಅವಿನಾಶ್‌, ಗಿರೀಶ್‌, ಮಂಜುನಾಥ್‌ ಹೆಗಡೆ, ಅರುಣ ಬಾಲರಾಜ್‌, ದೀಪಕ್‌ ಶೆಟ್ಟಿ ಇತರರು ನಟಿಸಿದ್ದಾರೆ. ಅಜಿತ್‌ ಉಗ್ಗಿನ್‌ ವಾಸನ್‌ ಈ ಚಿತ್ರದ ನಿರ್ದೇಶಕರು.

ಟಾಪ್ ನ್ಯೂಸ್

Untitled-1

ಕೊಹ್ಲಿ ಕಾರು ಮಾರಟಕ್ಕಿದೆ!

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

ಚಕ್ರವರ್ತಿ, ರಸೆಲ್‌ ದಾಳಿಗೆ ಆರ್‌ಸಿಬಿ ಕಂಗಾಲು

ಶಂಕಿತ ಉಗ್ರನಿಗಿತ್ತು ವಿದೇಶಿ ಸಂಪರ್ಕ : ಭಯೋತ್ಪಾದನೆ ನಿಗ್ರಹ ದಳ ಮಾಹಿತಿ

ಶಂಕಿತ ಉಗ್ರನಿಗಿತ್ತು ವಿದೇಶಿ ಸಂಪರ್ಕ : ಭಯೋತ್ಪಾದನೆ ನಿಗ್ರಹ ದಳ ಮಾಹಿತಿ

ghdyt

ಉತ್ತರದ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ?  

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಗೆ ಗಾಯ : ಮೈಸೂರು KSOU ವಿವಿ ಆವರಣದಲ್ಲಿ ಘಟನೆ

ಮೈಸೂರು : ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

karmanye vadhikaraste sloka

ಶ್ರೀಕೃಷ್ಣ ವಾಣಿ ದರ್ಶನ: ಮರ್ಡರ್‌ ಮಿಸ್ಟರಿ ಬಿಡುಗಡೆಗೆ ರೆಡಿ

shruthi

ಭಜರಂಗಿಯಲ್ಲಿ ರಗಡ್‌ ಶ್ರುತಿ: ಹೆಚ್ಚಾಗುತ್ತಿದೆ ಸಿನಿಮಾ ನಿರೀಕ್ಷೆ

fgdtgr

ಯಜಮಾನ ಚಿತ್ರಕ್ಕೆ ‘ಸೈಮಾ’ ಪ್ರಶಸ್ತಿಗಳ ಗೊಂಚಲು |ಈ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎಂದ ದರ್ಶನ್

fgrt

ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ|ಹ್ಯಾಟ್ರಿಕ್ ಬಾರಿಸಲು ಸಿದ್ಧರಾದ ಅಪ್ಪು-ಆನಂದರಾಮ್

ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

ದುಸ್ತರ ರಸ್ತೆಯಲ್ಲೇ ಸರ್ವ ಋತುವಿನಲ್ಲೂ ಸಂಚಾರ

ದುಸ್ತರ ರಸ್ತೆಯಲ್ಲೇ ಸರ್ವ ಋತುವಿನಲ್ಲೂ ಸಂಚಾರ

Untitled-1

ಕೊಠಡಿ, ಶಿಕ್ಷಕರು ದೊರೆತರೆ ಶತಮಾನ ಸಂಭ್ರಮ ಇಮ್ಮಡಿ

ಗಂಗೊಳ್ಳಿ: ಬ್ರೇಕ್‌ವಾಟರ್‌ ಕಾಮಗಾರಿಯಲ್ಲಿ  ಬಿರುಕು

ಗಂಗೊಳ್ಳಿ: ಬ್ರೇಕ್‌ವಾಟರ್‌ ಕಾಮಗಾರಿಯಲ್ಲಿ  ಬಿರುಕು

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದರೂ ಮೂಲಸೌಲಭ್ಯ ಮರೀಚಿಕೆ

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದರೂ ಮೂಲಸೌಲಭ್ಯ ಮರೀಚಿಕೆ

Untitled-1

ಶಾಲಾರಂಭವಾದರೂ ವಿದ್ಯಾರ್ಥಿಗಳಿಗೆ ಸಾಕಷ್ಟು ಬಸ್‌ಗಳಿಲ್ಲದೆ ಸಂಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.