ಬಿಟ್ಸಾಂಗ್ನಲ್ಲೇ ಲವ್, ಮದುವೆ, ಮಕ್ಕಳು…
Team Udayavani, Apr 7, 2020, 11:29 AM IST
ದಯಾಳ್ ಪದ್ಮನಾಭನ್ ನಿರ್ದೇಶಿಸುತ್ತಿರುವ ಒಂಭತ್ತನೇ ದಿಕ್ಕು ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಸದ್ಯ ಲಾಕ್ ಡೌನ್ನಲ್ಲಿ ಸಿನಿಮಾದ ಯಾವ ಕೆಲಸಗಳು ನಡೆಯುತ್ತಿಲ್ಲ. ಸಾಕಷ್ಟು ಸಿನಿಮಾಗಳ ಚಿತ್ರೀಕರಣ, ಪೋಸ್ಟ್ ಪ್ರೂಡಕ್ಷನ್ ಕೆಲಸಗಳು ಬಾಕಿ ಇವೆ. ಈ ನಡುವೆಯೇ ಒಂಭತ್ತನೇ ದಿಕ್ಕು ಚಿತ್ರದ ಬಿಟ್ ಸಾಂಗ್ವೊಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.
ಚಿತ್ರದ ಬಿಟ್ ಸಾಂಗ್ನಲ್ಲಿ ಸಿನಿಮಾದ ಪ್ರಮುಖ ಘಟ್ಟವನ್ನು ಹೇಳಿದ್ದಾರೆ. ನಾಯಕ ಯೋಗಿ ಹಾಗೂ ನಾಯಕಿ ಅದಿತಿಗೆ ಪರಿಚಯ ಆಗೋದು, ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಮದುವೆ, ಮುಂದೆ ಮಗ ಹುಟ್ಟೋದು, ಮಗನ ಮದುವೆ, ನಾಯಕ-ನಾಯಕಿಗೆ ವಯಸ್ಸಾಗೋದು … ಇಂತಹ ಅಂಶಗಳನ್ನು ಇಟ್ಟುಕೊಂಡು ಈ ಹಾಡು ಮಾಡಲಾಗಿದೆ. ಫೋಟೋಗಳನ್ನೇ ಬಳಸಿಕೊಂಡು ದಯಾಳ್ ಈ ಹಾಡ ಮಾಡಿದ್ದಾರೆ. ನಾಯಕ-ನಾಯಕಿಯ ವಿವಿಧ ಗೆಟಪ್ಗ್ಳ ಫೋಟೋಶೂಟ್ ಮಾಡಿಸಿ ಆ ಅದನ್ನು ಹಾಡಿನಲ್ಲಿ ಜೋಡಿಸಿದ್ದಾರೆ. ಈಗ ಈ ಬಿಟ್ ಸಾಂಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.