ಜ.28 ಕ್ಕೆ ‘ಒಂಬತ್ತನೇ ದಿಕ್ಕು’ ರಿಲೀಸ್
Team Udayavani, Jan 24, 2022, 11:16 AM IST
ಎಲ್ಲ ಅಂದುಕೊಂಡಂತೆ ಆಗಿದ್ದರೆ, ದಯಾಳ್ ನಿರ್ದೇಶನದ, “ಲೂಸ್ ಮಾದ’ ಯೋಗಿ ನಾಯಕರಾಗಿ ನಟಿಸಿರುವ “ಒಂಬತ್ತನೇ ದಿಕ್ಕು’ ಚಿತ್ರ 2021ರ ವರ್ಷಾಂತ್ಯಕ್ಕೆ (ಡಿ. 31ಕ್ಕೆ) ಬಿಡುಗಡೆಯಾಗಿ ತೆರೆಗೆ ಬರಬೇಕಿತ್ತು.
ಆದರೆ ಒಮಿಕ್ರಾನ್ ಆತಂಕ ಹೆಚ್ಚಾದ ಕಾರಣ ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದರಿಂದ, ಅನಿವಾರ್ಯವಾಗಿ “ಒಂಬತ್ತನೆ ದಿಕ್ಕು’ ಬಿಡುಗಡೆಯನ್ನು ಚಿತ್ರತಂಡ ಜನವರಿ 28ಕ್ಕೆ ಮುಂದೂಡಿತ್ತು. ಇದೀಗ ಸರ್ಕಾರ ವೀಕೆಂಡ್ ಲಾಕ್‌ಡೌನ್ ತೆರೆವುಗೊಳಿಸಿದ್ದರಿಂದ, ನಿಧಾನವಾಗಿಒಂದೊಂದೆ ಚಿತ್ರತಂಡಗಳು ಹೊಸದಾಗಿ ತಮ್ಮ ಚಿತ್ರಗಳ ಬಿಡುಗಡೆಯನ್ನು ದಿನಾಂಕವನ್ನು ಫೈನಲ್ ಮಾಡಿಕೊಳ್ಳುತ್ತಿವೆ. ಅದರಂತೆ, “ಒಂಬತ್ತನೇ ದಿಕ್ಕು’ ಚಿತ್ರತಂಡ ಕೂಡ ಈಗಾಗಲೇ ಘೋಷಿಸಿಕೊಂಡಂತೆ ಜ. 28ಕ್ಕೆ ತೆರೆಗೆ ಬರುತ್ತಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್, “ಈ ಮೊದಲುಥಿಯೇಟರ್‌ಗಳ ಲಭ್ಯತೆ ಮತ್ತು ಒಮಿಕ್ರಾನ್ ಆತಂಕದಿಂದ ಬಿಡುಗಡೆ ಮಾಡಿದರೆ ಸಿನಿಮಾಕ್ಕೆ ತೊಂದರೆಯಾಗುತ್ತದೆ.ನಮ್ಮ ಸಿನಿಮಾವನ್ನು ನಾವೇ ಸಾಯಿಸಬಾರದೆಂಬ ಕಾರಣಕ್ಕೆಸಿನಿಮಾದ ಬಿಡುಗಡೆಯನ್ನು ಜ. 28ಕ್ಕೆ ಮುಂದೂಡಿದ್ದೆವು. ಈಗ ನಿಧಾನವಾಗಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿರುವುದರಿಂದ, ಮೊದಲೇ ಅಂದುಕೊಂಡಂತೆ ಜ. 28ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದ್ದಾರೆ.
ಇನ್ನು “ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಲೂಸ್ ಮಾದ ಯೋಗಿ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆಡೈಲಾಗ್ ಕಿಂಗ್ ಸಾಯಿಕುಮಾರ್, ಸಂಪತ್, ಅಶೋಕ್,ರಮೇಶ್ ಭಟ್, ಪ್ರಶಾಂತ್ ಸಿದ್ಧಿ ಮೊದಲಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.