ಮತ್ತೊಮ್ಮೆ ಕಾಂಚನ ಆರ್ಭಟ

ಈ ವಾರ ರಾಜ್ಯಾದ್ಯಂತ ಬಿಡುಗಡೆ

Team Udayavani, Apr 25, 2019, 3:08 AM IST

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ “ಕಾಂಚನ’ ಈಗ ಪುನಃ ಸುದ್ದಿಯಾಗುತ್ತಿದೆ. ಹೌದು, ಈ ಹಿಂದೆ ಎರಡು ಭಾಗಗಳಲ್ಲಿ ತೆರೆಕಂಡಿದ್ದ “ಕಾಂಚನ’ ಚಿತ್ರ ಎಲ್ಲೆಡೆ ಯಶಸ್ಸು ಪಡೆದಿತ್ತು. ಈಗ “ಕಾಂಚನ 3′ ಚಿತ್ರ ಬಿಡುಗಡೆಯಾಗುತ್ತಿದೆ. ಈ ಶುಕ್ರವಾರ ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

ಹಿಂದಿನ ಎರಡು ಚಿತ್ರಗಳಲ್ಲೂ ಕನ್ನಡದ ನಟ,ನಟಿಯರು ಕಾಣಿಸಿಕೊಂಡಿದ್ದರು. ಆದರೆ, “ಕಾಂಚನ 3′ ಚಿತ್ರದಲ್ಲೊಂದು ಬದಲಾವಣೆಯಾಗಿದೆ. ನೃತ್ಯ ನಿರ್ದೇಶಕ, ನಿರ್ದೇಶಕ, ರಾಘವ್‌ ಲಾರೆನ್ಸ್‌ ಅವರಿಲ್ಲಿ ನಟಿಸಿದ್ದಾರೆ. 2.45 ಅವಧಿಯಲ್ಲಿರುವ ಚಿತ್ರದಲ್ಲಿ ಹಾರರ್‌ ಅಂಶಗಳು ಹೆಚ್ಚಾಗಿವೆ. ಅದಷ್ಟೇ ಅಲ್ಲ, ಇಲ್ಲಿ ಅಷ್ಟೇ ಹಾಸ್ಯ ಪ್ರಸಂಗಗಳು ಇವೆ ಎಂಬುದು ಚಿತ್ರತಂಡದ ಮಾತು.

ಈ ಹಿಂದೆ ಬಿಡುಗಡೆಗೊಂಡಿರುವ ಚಿತ್ರಕ್ಕೆ ಎರಡು ಭಾಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ವಿದೇಶದಲ್ಲೂ ಒಳ್ಳೆಯ ಮೆಚ್ಚುಗೆ ಕಾಣುವ ಮೂಲಕ ಸುಮಾರು 60 ಕೋಟಿ ರು.ಗಳಿಕೆಯಾಗಿತ್ತು ಎಂಬುದನ್ನು ವಿವರಿಸುವ ಚಿತ್ರತಂಡ ಈಗ “ಕಾಂಚನ 3′ ಕೂಡ ಎಲ್ಲರಿಗೂ ಇಷ್ಟವಾಗುವಂತಹ ಚಿತ್ರವಾಗಲಿದೆ ಎಂಬ ನಂಬಿಕೆಯಲ್ಲಿದೆ.

ಅಂದಹಾಗೆ, ರಾಘವ್‌ ಲಾರೆನ್ಸ್‌ ಅವರು ಚೆನ್ನೈನಲ್ಲಿ ಒಂದು ಚಾರಿಟಬಲ್‌ ಟ್ರಸ್ಟ್‌ ತೆರೆದಿದ್ದಾರೆ. ಆ ಮೂಲಕ ಒಂದಷ್ಟು ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ಈಗ ಕರ್ನಾಟಕದಲ್ಲೂ ತಮ್ಮ ಚಾರಿಟಬಲ್‌ ಟ್ರಸ್ಟ್‌ ಅನ್ನು ಶುರು ಮಾಡಲು ಯೋಚಿಸಿದ್ದಾರೆ.

ಆ ಮೂಲಕ ಈ ಭಾಗದ ಒಂದಷ್ಟು ಜನರಿಗೂ ಸಹಾಯವಾಗಲಿ ಎಂಬುದು ಟ್ರಸ್ಟ್‌ ಉದ್ದೇಶ ಎಂಬುದು ಅವರ ಮಾತು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಈ ವೇಳೆ ನಾಯಕಿಯರಾದ ವೇದಿಕಾ, ಮುಂಬೈ ಮೂಲದ ಮಾಡೆಲ್‌ ನಿಖೀ ತಂಬೂಲಿ ಮತ್ತು ನಿರ್ಮಾಪಕ, ವಿತರಕ ಯೋಗಿ ದ್ವಾರಕೀಶ್‌ ಸೇರಿದಂತೆ ಇತರರು ಇದ್ದರು.

ಚಿತ್ರಕ್ಕೆ ಜೆಸ್ಸಿ ಸ್ಯಾಮ್ಯುಯಲ್‌ ಸಂಗೀತವಿದೆ. ವೆಂಟ್ರಿ ಕ್ಯಾಮೆರಾ ಹಿಡಿದರೆ, ರುಬಿನ್‌ ಸಂಕಲನ ಮಾಡಿದ್ದಾರೆ. ಅಶ್ವಿ‌ನಿ ರಾಮಪ್ರಸಾದ್‌ ಚಿತ್ರದ ಆಡಿಯೋ ಹಕ್ಕು ಪಡೆದಿದ್ದಾರೆ.ದುಕೊಂಡಿದ್ದಾರೆ. ಇದೇ ಶುಕ್ರವಾರದಂದು ಸುಮಾರು 200 ಕೇಂದ್ರಗಳಲ್ಲಿ ಕಾಂಚಾನ ರಾರಾಜಿಸಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ