ಇನ್ಮುಂದೆ ವರ್ಷಕ್ಕೊಂದು ಸಿನ್ಮಾ ಫಿಕ್ಸ್‌


Team Udayavani, Jun 19, 2018, 11:02 AM IST

dhruva-sarja.jpg

ಆರು ವರ್ಷ, ಮೂರು ಸಿನಿಮಾ…. ಇದು ಧ್ರುವಸರ್ಜಾ ಕುರಿತ ಮಾತು. ಹೌದು, ಧ್ರುವ ಸರ್ಜಾ ಇಂಡಸ್ಟ್ರಿಗೆ ಬಂದು ಆರು ವರ್ಷ ಆಗೋಯ್ತು. ಈ ಆರು ವರ್ಷದಲ್ಲಿ ಮೂರು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಮೂರು ಚಿತ್ರಗಳೂ ಹ್ಯಾಟ್ರಿಕ್‌ ಗೆಲುವು ಕೊಟ್ಟಿವೆ. ಭರ್ಜರಿ ಹಿಟ್‌ ಸಿನಿಮಾ ಕೊಟ್ಟಿರುವ ಧ್ರುವ ಸರ್ಜಾ, ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಹೇಗೆ? ಇದು ಅಭಿಮಾನಿಗಳು ಆಗಾಗ ಕೇಳುತ್ತಿದ್ದ ಪ್ರಶ್ನೆ. ಈಗ ಧ್ರುವ ಸರ್ಜಾ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ವರ್ಷಕ್ಕೆ ಒಂದು ಸಿನಿಮಾ ಗ್ಯಾರಂಟಿ.

ಸಾಧ್ಯವಾದರೆ, ಎರಡು ಸಿನಿಮಾ ಮಾಡಲು ಪ್ರಯತ್ನಿಸುವುದಾಗಿಯೂ ಹೇಳಿದ್ದಾರೆ. “ಉದಯವಾಣಿ’ ಜೊತೆ ಮಾತನಾಡಿದ ಧ್ರುವಸರ್ಜಾ, “ಸದ್ಯಕ್ಕೆ ನಂದಕಿಶೋರ್‌ ನಿರ್ದೇಶನದ “ಪೊಗರು’ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಚಿತ್ರದ ಪಾತ್ರಕ್ಕಾಗಿ ಸುಮಾರು 32 ಕೆಜಿ ತೂಕ ಇಳಿಸಿಕೊಂಡಿದ್ದುಂಟು. ಮತ್ತೆ ಇನ್ನೊಂದು ಶೇಡ್‌ ಪಾತ್ರಕ್ಕೆ ಮತ್ತದೇ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಈಗ ಶೇ.90 ರಷ್ಟು ಹಿಂದಿನ ತೂಕದಷ್ಟೇ ಬಂದಿದ್ದೇನೆ.

ಒಂದುವರೆ ತಿಂಗಳಲ್ಲಿ 32 ಕೆಜಿ ತೂಕ ಇಳಿಸಿರುವ ಧ್ರುವಸರ್ಜಾ, ಆ ಪಾತ್ರದಲ್ಲಿ ಕೇವಲ 20 ನಿಮಿಷ ಮಾತ್ರ ಕಾಣಿಸಿಕೊಳ್ಳುತ್ತಾರಂತೆ. ತೆರೆ ಮೇಲೆ ನಿಮಿಷಗಳ ಕಾಲ ಬಂದು ಹೋಗುವ ಪಾತ್ರಕ್ಕೆ ಸಿಕ್ಕಾಪಟ್ಟೆ ವರ್ಕೌಟ್‌ ಮಾಡಿ, ದೇಹದ ತೂಕ ಇಳಿಸಿಕೊಂಡ ಧ್ರುವಸರ್ಜಾಗೆ “ಪೊಗರು’ ಮೇಲೆ ಅತೀವ ವಿಶ್ವಾಸವಿದೆ. ಈ ಚಿತ್ರಕ್ಕಾಗಿ ಮಾಡಿದ ಕಸರತ್ತು ವೀಡಿಯೋದಲ್ಲಿ ಸೆರೆಯಾಗಿದ್ದು, ಸಿನಿಮಾ ಬಿಡುಗಡೆ ಮುನ್ನ, ಆ ವರ್ಕೌಟ್‌ ಮಾಡಿದ ವೀಡಿಯೋವನ್ನು ಬಿಡುಗಡೆ ಮಾಡಲಿದ್ದಾರಂತೆ.

“ಪೊಗರು’ ಇನ್ನೊಂದು ಹಂತದ ಚಿತ್ರೀಕರಣವಿದ್ದು, ಇನ್ನೆರೆಡು ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈಗ ಅದರ ಜೊತೆ ಜೊತೆಗೇ ಉದಯ್‌ಮೆಹ್ತಾ ಅವರ ನಿರ್ಮಾಣದಲ್ಲಿ ನಂದಕಿಶೋರ್‌ ನಿರ್ದೇಶನದಲ್ಲಿ ಇನ್ನೊಂದು ಚಿತ್ರ ಶುರುವಾಗಲಿದೆ. ಆ ಬಳಿಕ ರಾಘವೇಂದ್ರ ಅವರ ಸಿನಿಮಾ. ಅದಿನ್ನೂ ಮಾತುಕತೆಯಲ್ಲಿದೆ. ಇನ್ನೂ ಒಂದಷ್ಟು ಮಾತುಕತೆ ನಡೆಯುತ್ತಿದೆ. ಒಂದಾದ ಮೇಲೊಂದು ಚಿತ್ರವನ್ನಷ್ಟೇ ಮಾಡ್ತೀನಿ’ ಎನ್ನುತ್ತಾರೆ ಧ್ರುವ.

ಟಾಪ್ ನ್ಯೂಸ್

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

2drugs

ಅರ್ಧ ಕೆ.ಜಿ. ಗಾಂಜಾ ವಶ ಆರೋಪಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

premam poojyam

ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌: ಮನಗೆದ್ದ ಪ್ಯೂರ್‌ ಲವ್‌ ಸ್ಟೋರಿ

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು

ek-love-ya

6 ಮಿಲಿಯನ್‌ ದಾಟಿದ ‘ಏಕ್‌ ಲವ್‌ ಯಾ’ ಚಿತ್ರದ ಎಣ್ಣೆ ಸಾಂಗ್‌

ತಿಂಗಳಾದ್ರೂ ಕರಗದ ಅಪ್ಪು ಅಭಿಮಾನಿಗಳ ಸಾಲು…

ತಿಂಗಳಾದ್ರೂ ಕರಗದ ಅಪ್ಪು ಅಭಿಮಾನಿಗಳ ಸಾಲು…

raymo

ಇಶಾನ್- ಅಶಿಕಾ ಅಭಿನಯದ ಪ್ಯೂರ್ ಲವ್ ಸ್ಟೋರಿ “ರೆಮೋ” ಟೀಸರ್ ರಿಲೀಸ್

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

8bankloan

ಸಾಲ ಪಡೆಯಲು ಜನಜಂಗುಳಿ

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

covid

ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

6crop

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.