Udayavni Special

ಬುಕ್‌ ಮೈ ಶೋ ವಿರುದ್ಧ ಮತ್ತೆ ಆಕ್ರೋಶ

ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುತ್ತಿಲ್ಲವೆಂದ ಚಿತ್ರತಂಡ

Team Udayavani, Feb 18, 2020, 7:04 AM IST

saguta

ಕನ್ನಡ ಚಿತ್ರ ಮಾಡಿದ ಪ್ರತಿಯೊಬ್ಬರದ್ದೂ ಒಂದೇ ದೂರು. ಬುಕ್‌ ಮೈ ಶೋ ಕನ್ನಡ ಚಿತ್ರಗಳನ್ನು ಕೊಲ್ಲುತ್ತಿದೆ ಎಂಬುದೇ ಆ ದೂರು. ಹೌದು, ಬಹುತೇಕ ಕನ್ನಡ ಸಿನಿಮಾಗಳ ನಿರ್ಮಾಪಕ, ನಿರ್ದೇಶಕರು ಬುಕ್‌ ಮೈ ಶೋ ವಿರುದ್ಧ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಕಂಟೆಂಟ್‌ ಇರುವ ಚಿತ್ರಗಳಿಗೆ ಕಿಂಚಿತ್ತೂ ಪ್ರೋತ್ಸಾಹ ಕೊಡದೆ, ಮನಬಂದಂತೆ ವರ್ತಿಸುತ್ತಿದೆ. ಬುಕ್‌ ಮೈ ಶೋ ನಿರ್ವಹಣೆ ಮಾಡುವವರ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂಬ ಆಕ್ರೋಶ ಈಗ ಜೋರಾಗಿದೆ.

ಇತ್ತೀಚೆಗೆ “ದಿಯಾ’ ಮತ್ತು “ಜಂಟಲ್‌ಮೆನ್‌’ ಚಿತ್ರಗಳಿಗೂ ಇದೇ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಒಳ್ಳೆಯ ಚಿತ್ರಗಳಾಗಿದ್ದರೂ, ಅವುಗಳಿಗೆ ಬುಕ್‌ ಮೈ ಶೋ ಯಾವುದೇ ಬೆಂಬಲ ನೀಡದೆ, ಸಿನಿಮಾ ಹಾಳು ಮಾಡಲು ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಈಗ “ಸಾಗುತ ದೂರ ದೂರ’ ಚಿತ್ರದ ಸರದಿ. ರವಿತೇಜ ನಿರ್ದೇಶನದ ಅಮಿತ ಪೂಜಾರಿ ನಿರ್ಮಾಣದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲೆಡೆಯಿಂದಲೂ ಚಿತ್ರತಂಡದ ಬಗ್ಗೆ ಮೆಚ್ಚುಗೆಯೂ ಬಂದಿದೆ. ಆದರೆ, ಬುಕ್‌ ಮೈ ಶೋ ಎಂಬ ಮಾಫಿಯಾದಲ್ಲಿ ಸಿಲುಕಿ ಚಿತ್ರ ಸಾಯುವ ಸ್ಥಿತಿಗೆ ಬಂದಿದೆ ಎಂಬುದು ಚಿತ್ರತಂಡದ ಆರೋಪ.

ಚಿತ್ರದ ಗೆಲುವಿನ ಕುರಿತು ಸಂಭ್ರಮ ಹಂಚಿಕೊಳ್ಳಲು ಬಂದಿದ್ದ ನಿರ್ದೇಶಕ ರವಿತೇಜ, ಬುಕ್‌ ಮೈ ಶೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಎಲ್ಲಾ ಕಡೆಯಿಂದಲೂ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ, ಬುಕ್‌ ಮೈ ಶೋನಲ್ಲಿ 11 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಇದೆ. ಆದರೆ, ಎಲ್ಲೂ ಒಂದು ವಿಮರ್ಶೆ ಇಲ್ಲ. ಯಾರಿಂದಲೂ ನಾಲ್ಕು ಲೈನ್‌ ಪದಗಳಿಲ್ಲ. ಬುಕ್‌ ಮೈ ಶೋ ಅನ್ನುವುದು ಒಂದು ಮಾಫಿಯಾ ಆಗಿದೆ. ಅದನ್ನು ನಡೆಸೋರು. ನಮ್ಮ ಕನ್ನಡಿಗರಲ್ಲ. ಕನ್ನಡದ ಒಳ್ಳೆಯ ಚಿತ್ರಗಳಿಗೆ ಅಲ್ಲಿ ಬೆಲೆಯೇ ಇಲ್ಲ. ಕಾಸು ಕೊಟ್ಟರೆ ಮಾತ್ರ ಅಲ್ಲಿ ಒಳ್ಳೆಯ ರೇಟಿಂಗ್‌ ಸಿಗುತ್ತೆ. ಇಲ್ಲವಾದರೆ, ಕಡೆಗಣಿಸಲಾಗುತ್ತದೆ.

ಇದು ದೊಡ್ಡ ಅನ್ಯಾಯ. ಈ ವಿರುದ್ಧ ಎಲ್ಲರೂ ಧ್ವನಿಗೂಡಿಸಬೇಕು. ವಾಣಿಜ್ಯಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಚಿತ್ರರಂಗದ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸಿ, ಇದಕ್ಕೊಂದು ಸೂಕ್ತ ಪರಿಹಾರ ಸೂಚಿಸಬೇಕು. ಕನ್ನಡದ ಆ್ಯಪ್‌ವೊಂದನ್ನು ತೆರೆದು, ಆ ಮೂಲಕ ಕನ್ನಡದ ಒಳ್ಳೆಯ ಸಿನಮಾಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಇನ್ನು, ಕನ್ನಡ ಸಿನಿಮಾಗಳಿಗೆ ಬೆಲೆ ಕೊಡದ ಬುಕ್‌ ಮೈ ಶೋ ವಿರುದ್ಧ ಎಲ್ಲರೂ ಹೋರಾಡಬೇಕು’ ಎಂಬುದು ಅವರ ಮಾತು.

ನಿರ್ಮಾಪಕ ಅಮಿತ್‌ ಪೂಜಾರಿ, ನಟಿ ಉಷಾ ಭಂಡಾರಿ, ನಟ ಮಹೇಶ್‌ ಸಿದ್ದು, ನವೀನ್‌ಕುಮಾರ್‌ ಸೇರಿದಂತೆ ಚಿತ್ರತಂಡದ ಪ್ರತಿಯೊಬ್ಬರೂ, ಬುಕ್‌ ಮೈ ಶೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಂಟೆಂಟ್‌ ಸಿನಿಮಾಗಳು ಬರುವುದು ಅಪರೂಪ. ಹೊಸ ಪ್ರತಿಭೆಗಳು ಸೇರಿ ಮಾಡಿದ ಚಿತ್ರಕ್ಕೆ ಬೆಂಬಲ ಸಿಕ್ಕರೂ ಬುಕ್‌ ಮೈ ಶೋನಲ್ಲಿ ಮಾತ್ರ ಕಡೆಗಣಿಸಲಾಗುತ್ತಿದೆ. ಹೀಗಾದರೆ, ಕನ್ನಡ ಚಿತ್ರಗಳು ಸಂಪೂರ್ಣ ನೆಲಕಚ್ಚುತ್ತವೆ. ಹಿಂದಿ, ತಮಿಳು, ತೆಲುಗು ಚಿತ್ರಗಳು ಇರದಿದ್ದರೂ, ಅವುಗಳಿಗೆ ರಿವೀವ್‌ ಕೊಡುತ್ತಾರೆ. ಕನ್ನಡ ಸಿನಿಮಾಗಳಿಗೆ ಮಾತ್ರ ಈ ಅನ್ಯಾಯ ನಡೆಯುತ್ತಿದೆ. ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಒಕ್ಕೊರಲ ಮನವಿ ಮಾಡಿದರು.

ಟಾಪ್ ನ್ಯೂಸ್

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ek-love-ya

‘ಏಕ್‌ ಲವ್‌ ಯಾ’ ಜ.21ಕ್ಕೆ ರಿಲೀಸ್‌

hftytyt

ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್

xdfgdgr

ಸಿನಿ ರಸಿಕರ ಗಮನ ಸೆಳೆದ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

Untitled-1

ಅತ್ತಿಕುಪ್ಪೆಯಲ್ಲಿ ಪಡಿತರ ಉಪಕೇಂದ್ರ ಉದ್ಘಾಟನೆ,ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

Dak Seva Award for Achievers

8 ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರಧಾನ ಮಾಡಿದ ರಾಜ್ಯಪಾಲರು

davanagere news

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

12

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.