ಪಡ್ಡೆಹುಲಿ ಮೊಗದಲ್ಲಿ ಸಂತಸ

ಹೊಸಬರ ಚಿತ್ರಕ್ಕೆ ಸಮಯ ಕೊಡಿ

Team Udayavani, Apr 25, 2019, 3:10 AM IST

ಹೊಸ ಪ್ರತಿಭೆ ಶ್ರೇಯಸ್‌ ಅಭಿನಯದ “ಪಡ್ಡೆಹುಲಿ’ ಚಿತ್ರಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಇದು ಖುಷಿಯನ್ನು ಹೆಚ್ಚಿಸಿದೆ. ಆದರೆ, ಮಾಲ್‌ಗ‌ಳಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರ ಸರಿಯಾದ ವೇಳೆಗೆ ಪ್ರದರ್ಶನ ಮಾಡದಿರುವುದರಿಂದ ಗಳಿಕೆ ಕಡಿಮೆಯಾಗುತ್ತಿದೆ ಎಂಬ ಬೇಸರ ನಿರ್ಮಾಪಕ ಕೆ.ಮಂಜು ಅವರದು.

ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕುರಿತು ಸಂತಸ ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮ ಎದುರು ಬಂದಿದ್ದ ವೇಳೆ, ಕೆ.ಮಂಜು, ಪತ್ರಿಕೆಗಳ ವಿಮರ್ಶೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಬುಕ್‌ ಮೈ ಶೋ ವಿರುದ್ಧ ಕಿಡಿಕಾರಿದರು. ಇಲ್ಲಿಯವರೆಗೂ ಬುಕ್‌ ಮೈ ಶೋನವರು ವಿಮರ್ಶೆ ಮಾಡಿಲ್ಲ. ಅದಕ್ಕೆ ಕಾರಣ ಏನೆಂಬುದು ಗೊತ್ತಿಲ್ಲ.

ಸಿನಿಮಾ ಚೆನ್ನಾಗಿ ಪ್ರದರ್ಶನ ಕಂಡರೆ, ಅದನ್ನು ಮುಂದುವರೆಸಬೇಕಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು ಕೆ.ಮಂಜು. ಕೆಲ ಚಿತ್ರಮಂದಿರಗಳು ಸೇರಿದಂತೆ ಮಲ್ಟಿಪ್ಲೆಕ್ಸ್‌ನಲ್ಲಿ ಇದೊಂದು ದಂಧೆಯಂತೆ ನಡೆಯುತ್ತಿದೆ. ನಿರ್ಮಾಪಕರಿಗೆ ಹೇಳದೆ, ಕೇಳದೆ ಚಿತ್ರವನ್ನು ತೆಗೆಯಲಾಗುತ್ತಿದೆ.

ಅವರೆಲ್ಲಾ ದುಡ್ಡು ಮಾಡಲು ಹೊರಟಿದ್ದಾರೆ. ನಿರ್ಮಾಪಕರ ಕಷ್ಟದ ಬಗ್ಗೆ ಯೋಚಿಸಿಲ್ಲ. ಉತ್ತಮ ಚಿತ್ರಕ್ಕೆ ಈ ರೀತಿ ಅನ್ಯಾಯವಾಗುತ್ತಿದ್ದರೂ ಸಂಬಂಧಿಸಿದವರು ಏನೂ ಮಾತಾಡುತ್ತಿಲ್ಲ. ಸರ್ಕಾರ ಕೂಡ ಮಲ್ಟಿಪ್ಲೆಕ್ಸ್‌ ನಡೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು’ ಎಂಬುದು ಮಂಜು ಮಾತು. ನಿರ್ದೇಶಕ ಗುರುದೇಶಪಾಂಡೆ ಅವರಿಗೆ “ಪಡ್ಡೆಹುಲಿ’ ಕುರಿತು ಕೇಳಿಬಂದ ಪ್ರತಿಕ್ರಿಯೆ ಖುಷಿಕೊಟ್ಟಿದೆ.

ಆದರೆ, ಸಿನಿಮಾಗಳ ಪ್ರದರ್ಶನಕ್ಕೆ ತೊಂದರೆಯಾದರೆ, ಸಂಬಂಧಿಸಿದ ಮಂಡಳಿ ಅಂತಹ ಚಿತ್ರಗಳ ನಿರ್ಮಾಪಕರ ಪರವಾಗಿರಬೇಕು. ಅವರಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು. ಇದು ಹೊಸ ಹುಡುಗನ ಸಿನಿಮಾ. ನಾಯಕ ಶ್ರೇಯಸ್‌ ನಟನೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಹೊಸಬರ ಚಿತ್ರ ಆಗಿರುವುದರಿಂದ ಸಿನಿಮಾ ನಿಧಾನವಾಗಿ ಜನರನ್ನು ಆಕರ್ಷಿಸುತ್ತದೆ. ಅದಕ್ಕೆ ಸಮಯವೂ ಬೇಕು. ಹಿಂದೆ ಕೂಡ ಹಲವು ಚಿತ್ರಗಳು ಹೀಗೆ ಆಗಿದ್ದವು. ಅವುಗಳಿಗೆ ಸಮಯ ಸಿಕ್ಕಿದ್ದರಿಂದ ಅವು ಸೂಪರ್‌ಹಿಟ್‌ ಚಿತ್ರಗಳೆನಿಸಿಕೊಂಡಿವೆ. ಬುಕ್‌ ಮೈ ಶೋ ಒಂದು ಖಾಸಗಿ ಕಂಪೆನಿ. ಆ ಬಗ್ಗೆ ಅನೇಕ ದೂರು ಬಂದರೂ ಯಾರೂ ಗಮನಿಸಿಲ್ಲ.

ವಾಣಿಜ್ಯ ಮಂಡಳಿ ಕೂಡ ಒಂದು ಆ್ಯಪ್‌ ಶುರು ಮಾಡುವುದಾಗಿ ಹೇಳಿತ್ತು. ಆ ಬಗ್ಗೆ ಇದುವರೆಗೂ ವಿಷಯ ಗೊತ್ತಾಗಿಲ್ಲ ಅದೇನೆ ಇರಲಿ, “ಪಡ್ಡೆಹುಲಿ’ ಚಿತ್ರವನ್ನು ಎಲ್ಲರೂ ಬೆಂಬಲಿಸಬೇಕು, ಹೊಸಬರನ್ನು ಪ್ರೋತ್ಸಾಹಿಸಬೇಕು ಎಂದರು ಗುರುದೇಶಪಾಂಡೆ. ಈ ವೇಳೆ ನಿರ್ಮಾಪಕ ರಮೇಶ್‌ರೆಡ್ಡಿ, ನಾಯಕ ಶ್ರೇಯಸ್‌, ನಾಯಕಿ ನಿಶ್ವಿ‌ಕಾನಾಯ್ಡು “ಪಡ್ಡೆಹುಲಿ’ ಸಂತಸ ಹಂಚಿಕೊಂಡರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ