ಚಿತ್ರದುರ್ಗದಲ್ಲಿ “ಪೈಲ್ವಾನ್‌’

ಸುದೀಪ್‌ ಜೊತೆ ಬಾಲಿವುಡ್‌ ನಟ ಸುನೀಲ್‌ಶೆಟ್ಟಿ ಭಾಗಿ

Team Udayavani, Jul 10, 2019, 3:04 AM IST

ಸುದೀಪ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೈಲ್ವಾನ್‌’ ಬಿಡುಗಡೆಗೆ ಸಜ್ಜಾಗಿದೆ. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, ಕೋಟೆ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ಚಿತ್ರತಂಡ ತಯಾರು ನಡೆಸಿದೆ.

ಹೌದು, ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಚಿತ್ರದ ಟೀಸರ್‌ ಮತ್ತು ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಎಲ್ಲರಲ್ಲೂ ಹೊಸದೊಂದು ಕುತೂಹಲ ಹುಟ್ಟುಹಾಕಿದ್ದ ಚಿತ್ರತಂಡ, ಈಗ ಆಡಿಯೋ ಬಿಡುಗಡೆ ಸಮಾರಂಭವನ್ನು ಚಿತ್ರದುರ್ಗದಲ್ಲಿ ನೆರವೇರಿಸುವ ಮೂಲಕ ಮತ್ತೊಂದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಜುಲೈ 27 ರಂದು ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಕಾಣಿಸಿಕೊಳ್ಳುತ್ತಿದ್ದು, ಅಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಾಡುಗಳು ಬಿಡುಗಡೆಯಾಗಲಿವೆ. ಇಷ್ಟು ದಿನ “ಪೈಲ್ವಾನ್‌’ ಚಿತ್ರದ ಹಾಡುಗಳು ಹೇಗಿರಲಿವೆ ಎಂಬ ಪ್ರಶ್ನೆಗೆ ಜುಲೈ 27 ರಂದು ಉತ್ತರ ಸಿಗಲಿದೆ. ಅಂದಹಾಗೆ, ಅಂದು ನಡೆಯಲಿರುವ ಕಲರ್‌ಫ‌ುಲ್‌ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಬಾಲಿವುಡ್‌ ನಟ ಸುನೀಲ್‌ಶೆಟ್ಟಿ ಕೂಡ ಆಗಮಿಸುತ್ತಿರುವುದು ವಿಶೇಷ.

ಇದೇ ಮೊದಲ ಬಾರಿಗೆ ಸುನೀಲ್‌ಶೆಟ್ಟಿ ಅವರು, “ಪೈಲ್ವಾನ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲ, ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿರುವ ಕಲ್ಲಿನಕೋಟೆ ಚಿತ್ರದುರ್ಗಕ್ಕೂ ಮೊದಲ ಸಲ ಭೇಟಿ ನೀಡುತ್ತಿರುವುದು ವಿಶೇಷ. ಇನ್ನು, ಸುದೀಪ್‌ ಅಭಿಮಾನಿಗಳಂತೂ, “ಪೈಲ್ವಾನ್‌’ ಹಾಡುಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕಕೊಳ್ಳುತ್ತಿದ್ದಾರೆ.

ಅಂದಹಾಗೆ, ಈ ಹಿಂದೆ ದಾವಣಗೆರೆಯಲ್ಲಿ ಸುದೀಪ್‌ ಅಭಿನಯದ “ಹೆಬ್ಬುಲಿ’ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿತ್ತು. ಈಗ “ಪೈಲ್ವಾನ್‌’ ಚಿತ್ರದ ಹಾಡುಗಳನ್ನು ಚಿತ್ರದುರ್ಗದಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದುರ್ಗಕ್ಕೂ ಸುದೀಪ್‌ ಅವರಿಗೂ ಅವಿನಾಭಾವ ಸಂಬಂಧ. ಕಾರಣ, ಚಿತ್ರದುರ್ಗದಲ್ಲೇ ಸುದೀಪ್‌ ಅವರ ಅತೀ ಹೆಚ್ಚು ಅಭಿಮಾನಿ ವರ್ಗ ತುಂಬಿಕೊಂಡಿದೆ.

ಅಷ್ಟೇ ಅಲ್ಲ, ಅವರು “ಗಂಡುಗಲಿ ವೀರಮದಕರಿ ನಾಯಕ’ ಸಿನಿಮಾ ಮಾಡುವುದಾಗಿ ನಿರ್ಧರಿಸಿದ್ದು ಕೂಡ ಇದೇ ಕಾರಣಕ್ಕೆ. ಆದರೆ, ಆ ಚಿತ್ರವನ್ನು ಸುದೀಪ್‌ ಅವರು ಕೆಲವು ಕಾರಣಗಳಿಂದ ಕೈಬಿಟ್ಟಿದ್ದಾರೆ. ಈಗ “ಪೈಲ್ವಾನ್‌’ ಸುದ್ದಿ ಜೋರಾಗಿದ್ದು, ಹಾಡುಗಳ ಬಿಡುಗಡೆ ಮೂಲಕ ಮತ್ತೊಂದು ಕುತೂಹಲಕ್ಕೆ ಚಿತ್ರ ಕಾರಣವಾಗಲಿದೆ. ಆಗಸ್ಟ್‌ ಕೊನೆಯ ವಾರದಲ್ಲಿ “ಪೈಲ್ವಾನ್‌’ ರಿಲೀಸ್‌ ಆಗಲಿದೆ ಎಂಬ ಸುದ್ದಿ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ