ಪಟ್ಟು ಹಾಕುವ ಪೈಲ್ವಾನ್ ಬಂದ ; ಟ್ರೈಲರ್ ನಲ್ಲಿ ಸುದೀಪ್ ರಾಕಿಂಗ್

Team Udayavani, Aug 22, 2019, 10:13 PM IST

‘ಬಲ ಇದೆ ಅಂತ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ’ ಎಂಬ ಸಾಲಿನೊಂದಿಗೆ ಪ್ರಾರಂಭವಾಗುವ ‘ಪೈಲ್ವಾನ್’ ಚಿತ್ರದ ಟ್ರೈಲರ್ ಇದೀಗ ಕಿಚ್ಚನ ಅಭಿಮಾನಿಗಳಲ್ಲಿ ನಿರೀಕ್ಷೆಯ ಕಿಚ್ಚನ್ನು ಹೆಚ್ಚಿಸಿದೆ.

ಅಭಿನಯ ಚಕ್ರವರ್ತಿ ಮೊಟ್ಟಮೊದಲ ಬಾರಿಗೆ ಪೈಲ್ವಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದ ಪಾತ್ರಕ್ಕಾಗಿ ಕಿಚ್ಚ ತನ್ನ ದೇಹವನ್ನು ಸಾಮು ಮಾಡಿ ಹುರಿಗೊಳಿಸಿದ್ದಾರೆ. ಅದರ ಫಲಿತಾಂಶ ಈ ಚಿತ್ರದ ಟ್ರೈಲರ್ ನಲ್ಲಿ ಭರ್ಜರಿಯಾಗಿಯೇ ಕಾಣಿಸುತ್ತಿದೆ.

ಪೈಲ್ವಾನ್ ಚಿತ್ರದ ಕಥೆ ಏನಿರಬಹುದೆಂಬ ಕುತೂಹಲ ಈ ಟ್ರೈಲರ್ ನೋಡುವವರಲ್ಲಿ ಮೂಡುತ್ತದೆ. ಪಕ್ಕಾ ಗ್ರಾಮೀಣ ಸೊಗಡು ಮತ್ತು ವೃತ್ತಿಪರ ಬಾಕ್ಸಿಂಗ್ ಕಾದಾಟದ ಹಿಂಟ್ ಅನ್ನು ಟ್ರೈಲರ್ ನಲ್ಲಿ ನೀಡಿರುವುದು ಸುದೀಪ್ ಅಭಿಮಾನಿಗಳನ್ನು ಕುತೂಹಲಕ್ಕೀಡು ಮಾಡಿದೆ.

ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಅವರ ದೇಸೀ ಲುಕ್ ಗಮನ ಸೆಳೆಯುತ್ತದೆ. ಈ ಚಿತ್ರದಲ್ಲಿ ಶೆಟ್ರಿಗೆ ಒಂದು ಜಬರ್ದಸ್ತ್ ಪಾತ್ರವಿರುವುದಂತೂ ನಿಜ. ಚಂದನವನದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಮುಂದಿನ ತಿಂಗಳು 12ನೇ ತಾರೀಖಿಗೆ ವಿಶ್ವಾದ್ಯಂತ ಬಿಡುಗಡೆಗೊಳ್ಳುತ್ತಿದೆ.

ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸುನಿಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಸೇರಿದಂತೆ ಹೆಸರಾಂತ ನಟ-ನಟಿಯರ ದಂಡೇ ಪೈಲ್ವಾನ್ ನಲ್ಲಿದೆ.

ಶುಕ್ರವಾರ ಬಿಡುಗಡೆಗೊಂಡಿರುವ ಪೈಲ್ವಾನ್ ಟ್ರೈಲರ್ ಯೂ-ಟ್ಯೂಬ್ ನಲ್ಲಿ ಈಗಾಗಲೇ ಒಂಭತ್ತು ಲಕ್ಷ ವೀಕ್ಷಣೆಗೆ ಒಳಪಟ್ಟಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇದೇ ಮೊದಲ ಬಾರಿಗೆ ನಟನೆ ಜೊತೆ ನಿರ್ದೇಶನಕ್ಕಿಳಿದಿರುವ ಹೀರೋ "ಮದರಂಗಿ' ಕೃಷ್ಣ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ "ಲವ್‌ ಮಾಕ್ಟೇಲ್‌' ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ....

  • "ನಾನು ಸಿನಿಮಾ ಬಿಟ್ಟು ಎಲ್ಲೂ ಹೋಗಿಲ್ಲ. ನಾನು ಇಲ್ಲೇ ಇದ್ದೀನಿ. ಆದ್ರೆ ಅದೇನೋ ಗೊತ್ತಿಲ್ಲ, ನಾನು ಇತ್ತೀಚೆಗೆ ಮಾಡುತ್ತಿರುವ ಸಿನಿಮಾಗಳನ್ನು ಎಲ್ಲರೂ ನನ್ನ...

  • ಪ್ರಜ್ವಲ್‌ ದೇವರಾಜ್‌ ನಾಯಕರಾಗಿರುವ "ಜಂಟಲ್‌ಮನ್‌' ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಫೆಬ್ರವರಿ 07 ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌,...

  • ಈಗಾಗಲೇ ತನ್ನ ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ "ಡೆಮೊ ಪೀಸ್‌' ಚಿತ್ರ ತೆರೆಗೆ ಬರೋದಕ್ಕೆ...

  • ಸದ್ಯ "ಭೀಮಸೇನ ನಳಮಹರಾಜ' ಚಿತ್ರ ತೆರೆಗೆ ಬರುವ ನಿರೀಕ್ಷೆಯಲ್ಲಿರುವ ನಟಿ ಆರೋಹಿ ನಾರಾಯಣ್‌ ಈಗ ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ....

ಹೊಸ ಸೇರ್ಪಡೆ