ʼಕಬ್ಜʼ ಟೀಸರ್ ಔಟ್: ಗನ್ ಸೌಂಡ್ ನಲ್ಲಿ ನೆತ್ತರ ಕಥೆ ಬರೆದ ಉಪ್ಪಿ – ಚಂದ್ರು
Team Udayavani, Sep 17, 2022, 5:14 PM IST
ಬೆಂಗಳೂರು: ಆರ್. ಚಂದ್ರು ಅವರ ಪ್ಯಾನ್ ಇಂಡಿಯಾ ʼಕಬ್ಜʼ ಸಿನಿಮಾದ ಬಹು ನಿರೀಕ್ಷಿತ ಟೀಸರ್ ರಿಲೀಸ್ ಆಗಿದೆ.
ಅದ್ಧೂರಿ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು.
ಅಂಡರ್ ವರ್ಲ್ಡ್ ಜಗತ್ತಿನ ಕಥೆಯಾಗಿರುವ ʼಕಬ್ಜʼದಲ್ಲಿ ಕಿಚ್ಚ ಸುದೀಪ್ ʼಭಾರ್ಗವ್ ಭಕ್ಷಿಯಾಗಿʼ ಕಾಣಿಸಿಕೊಳ್ಳಲಿದ್ದಾರೆ. 60-70-80 ರ ದಶಕದ ರೌಡಿಸಂ ಜಗತ್ತಿನ ಕಥೆಯನ್ನು ರೆಟ್ರೋ ಸ್ಟೈಲ್ ನಲ್ಲಿ ನಿರ್ದೇಶಕರು ಹೇಳಲಿದ್ದಾರೆ.
ಟೀಸರ್ ಆರಂಭದಲ್ಲಿ ತಾಯಿಯೊಬ್ಬಳ ದೃಶ್ಯವನ್ನು ಭಾವನಾತ್ಮಕವಾಗಿ ಹೇಳಲಾಗಿದ್ದು, ಆ ಬಳಿಕದ ದೃಶ್ಯಗಳು ಬರೀ ಗನ್ ಸೌಂಡ್, ಮಾಸ್ ಫೈಟಿಂಗ್ ಗಳೇ ಹೈಲೈಟ್ ಆಗಿದೆ. ಉಪ್ಪಿ ಕಾರಿನಿಂದ ಇಳಿಯುವ ಸ್ಟೈಲ್, ಗನ್ ಹಿಡಿದು ಶೂಟ್ ಮಾಡುವ ರೀತಿ ನೋಡಿದರೆ ಇದೊಂದು ಪಕ್ಕಾ ಪ್ಯಾನ್ ಇಂಡಿಯಾದ ದೊಡ್ಡ ಸಿನಿಮಾ ಆಗುವುದರಲ್ಲಿ ಸಂಶಯವೇ ಇಲ್ಲ. ಟೀಸರ್ ನಲ್ಲಿ ರವಿ ಬಸ್ರೂರು ಅವರ ಬಿಜಿಎಂ ಸದ್ದು, ಗನ್ ಸದ್ದಿನಷ್ಟೇ ಕೇಳುಗರ ಗಮನ ಸೆಳೆಯುತ್ತದೆ.
ಉಪ್ಪಿ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ʼಭಾರ್ಗವ್ ಭಕ್ಷಿಯʼ ಅವತಾರವತ್ತ ಕಿಚ್ಚ ಸುದೀಪ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಅದ್ಧೂರಿ ಮೇಕಿಂಗ್ ನಿಂದಲೂ ಟೀಸರ್ ಗಮನ ಸೆಳೆಯುತ್ತದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ʼಕಬ್ಜʼ ಟೀಸರ್ ಭರ್ಜರಿ ವೀಕ್ಷಣೆ ಪಡೆದುಕೊಂಡಿದೆ.
ಮಲ್ಟಿಸ್ಟಾರರ್ ಸಿನಿಮಾ, ಶ್ರೇಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡರೆ, ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಕಾಟ್ ರಾಜು ಮತ್ತು ಸುಬ್ಬರಾಜು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ