ವಿಕ್ರಾಂತ್ ರೋಣ ವಿದೇಶಿ ಹಕ್ಕಿಗೆ 10 ಕೋಟಿ!
Team Udayavani, May 9, 2022, 12:29 PM IST
ಕನ್ನಡ ಚಿತ್ರರಂಗದಲ್ಲಿ ಮತ್ತೆ ಸ್ಟಾರ್ ಸಿನಿಮಾಗಳ ಅಬ್ಬರ ಶುರುವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಕೆಜಿಎಫ್-2′ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದು ಮುನ್ನುಗ್ಗುತ್ತಿದೆ. ಈಗ ಮತ್ತಷ್ಟು ಸ್ಟಾರ್ ಸಿನಿಮಾಗಳು ರಿಲೀಸ್ ಅಖಾಡಕ್ಕೆ ಧುಮುಕಿವೆ. ಈಗಾಗಲೇ ಕಿಚ್ಚ ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರ ಜು.28ಕ್ಕೆ ತೆರೆಗೆ ಬರಲಿದೆ. ಇದಕ್ಕೂ ಮುನ್ನ ಚಿತ್ರ ತನ್ನ ಬಿಝಿನೆಸ್ನಿಂದ ಸುದ್ದಿ ಮಾಡುತ್ತಿದೆ.
“ವಿಕ್ರಾಂತ್ ರೋಣ’ ಚಿತ್ರದ ಓವರ್ ಸೀಸ್ (ವಿದೇಶಿ)ರೈಟ್ಸ್ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಮೂಲಗಳ ಪ್ರಕಾರ, 10 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, “ಒನ್ ಟ್ವೆಂಟಿ 8 ಮೀಡಿಯಾ’ ಇದನ್ನು ಪಡೆದುಕೊಂಡಿದೆ.
ಈ ಬಗ್ಗೆ ಮಾತನಾಡುವ ನಿರ್ಮಾಪಕ ಜಾಕ್ ಮಂಜುನಾಥ್, “ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿರಬೇಕು ಎಂಬುದನ್ನು ನಾನು ಯಾವಾಗಲೂ ನಂಬಿಕೊಂಡು ಬಂದಿದ್ದೇನೆ. ಭಾವನೆಗಳು ಪ್ರಪಂಚದಾದ್ಯಂತ ಒಂದೇ ಸ್ವರ ಮತ್ತು ತಾಳದಲ್ಲಿ ಕೂರುತ್ತದೆ. ಅದೇ ಕಾರಣದಿಂದ ಓವರ್ ಸೀಸ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಬಿಡುಗಡೆಗೂ ಮುನ್ನವೇ ಓವರ್ ಸೀಸ್ ಔಟ್ರೇಟ್ ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ’ ಎನ್ನುತ್ತಾರೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3ಡಿ ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ