ಇಂದು ಪಾರ್ವತಮ್ಮ ಟ್ರೇಲರ್‌ ಬಿಡುಗಡೆ

ಮೇ.24 ರಿಂದ ಹರಿಪ್ರಿಯಾ ತನಿಖೆ ಶುರು

Team Udayavani, May 14, 2019, 3:00 AM IST

ಇತ್ತೀಚೆಗಷ್ಟೇ ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿದ್ದ ಹರಿಪ್ರಿಯಾ ಅಭಿನಯದ “ಡಾಟರ್‌ ಅಫ್ ಪಾರ್ವತಮ್ಮ’ ಚಿತ್ರದ ಲಿರಿಕಲ್‌ ವಿಡಿಯೋಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಚಿತ್ರತಂಡ ಮೇ.14 (ಇಂದು) ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದೆ. ಈ ಚಿತ್ರಕ್ಕೆ ಗೀತೆಯೊಂದನ್ನು ರಚಿಸಿದ್ದ ನಟ ಧನಂಜಯ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದಾರೆ.

ಪಿಆರ್‌ಕೆ ಯುಟ್ಯೂಬ್‌ ಚಾನೆಲ್‌ನಲ್ಲಿ ಮಧ್ಯಾಹ್ನ ಟ್ರೇಲರ್‌ ಅಪ್‌ಲೋಡ್‌ ಆಗಲಿದೆ. ಎನರ್ಜಿಟಿಕ್‌ ಟೈಟಲ್‌ನ ಚಿತ್ರ ಇದಾಗಿರುವುದರಿಂದ ಪಾರ್ವತಮ್ಮ ಪಾತ್ರದಲ್ಲಿ ಸುಮಲತಾ ಅಂಬರೀಶ್‌ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಇನ್ನಷ್ಟು ತೂಕ ಹೆಚ್ಚಿದೆ ಎಂಬುದು ಚಿತ್ರತಂಡದ ಹೇಳಿಕೆ.

“ಚಿತ್ರದಲ್ಲಿ ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅವರ 25 ನೇ ಚಿತ್ರ ಎಂಬುದು ವಿಶೇಷ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ಹರಿಪ್ರಿಯಾ ಅವರು ಇದೇ ಮೊದಲ ಬಾರಿಗೆ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಅವರಿಲ್ಲಿ ಭರ್ಜರಿ ಸ್ಟಂಟ್ಸ್‌ ಕೂಡ ಮಾಡಿದ್ದಾರೆ.

ಆರ್‌ಎಕ್ಸ್‌ 100 ಬೈಕ್‌ ಓಡಿಸುವುದರ ಜೊತೆಗೆ ರೌಡಿಗಳನ್ನು ಕ್ರಿಕೆಟ್‌ ಮೈದಾನದಲ್ಲಿ ಕ್ರಿಕೆಟ್‌ ಬ್ಯಾಟ್‌ ಹಿಡಿದು ಹಿಗ್ಗಾಮುಗ್ಗಾ ಚಚ್ಚಿರುವುದು ಸಿನಿಮಾದ ಹೈಲಟ್‌’ ಎನ್ನುವ ನಿರ್ದೇಶ ಶಂಕರ್‌, ಈಗಾಗಲೇ ಚಿತ್ರದ ಲಿರಿಕಲ್‌ ವಿಡಿಯೋ ನೋಡಿ ಶ್ರೀಮುರಳಿ, ಪ್ರೇಮ್‌, ಅಭಿಷೇಕ್‌ ಅಂಬರೀಶ್‌, ಪವನ್‌ ಒಡೆಯರ್‌, ಗುರುನಂದನ್‌ ಹಾಗೂ ತೆಲುಗು ನಟ ಸುಮನ್‌ ಸೇರಿದಂತೆ ಹಲವರು ನಟ,ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ.

ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರ. ಸೆಂಟಿಮೆಂಟ್‌, ಎಮೋಷನ್ಸ್‌, ಲವ್‌, ಆ್ಯಕ್ಷನ್ಸ್‌, ಕಾಮಿಡಿ, ಥ್ರಿಲ್ಲರ್‌ ಎಲ್ಲವೂ ಇಲ್ಲಿದೆ. ಎರಡು ಫೈಟ್ಸ್‌, ಭರ್ಜರಿ ಚೇಸ್‌ ದೃಶ್ಯಗಳಿವೆ. ಅಮ್ಮ-ಮಗಳು ಕಾಂಬಿನೇಷನ್‌ ಚಿತ್ರದ ಹೈಲೈಟ್‌. ಇಲ್ಲಿ ಭಾವನೆಗಳ ಜೊತೆಗೆ ಭಾವುಕ ಅಂಶಗಳೂ ತುಂಬಿಕೊಂಡಿವೆ. ಇದು ಒಂದು ವರ್ಗಕ್ಕೆ ಸೀಮಿತವಾದ ಸಿನಿಮಾವಲ್ಲ, ಕುಟುಂಬ ಸಮೇತ ಬಂದು ನೋಡಬಹುದು.

ಚಿತ್ರ ನೋಡಿದವರಿಗೆ ಒಬ್ಬ ಅಮ್ಮನಿಗೆ ಇಂತಹ ಮಗಳಿರಬೇಕು. ಒಬ್ಬ ಮಗಳಿಗೆ ಇಂತಹ ಅಮ್ಮ ಇರಬೇಕು ಅಂತೆನಿಸದೇ ಇರದು. ಅಷ್ಟೊಂದು ಮೌಲ್ಯಗಳು ತುಂಬಿರುವ ಚಿತ್ರ ಎಂಬುದು ಚಿತ್ರತಂಡದ ಮಾತು. ಮಿಥುನ್‌ ಮುಕುಂದನ್‌ ಸಂಗೀತದಲ್ಲಿ ಎರಡು ಹಾಡುಗಳು ಚಿತ್ರದಲ್ಲಿವೆ. ಅರುಳ್‌ ಕೆ. ಸೋಮುಸುಂದರಂ ಅವರ ಛಾಯಾಗ್ರಹಣವಿದೆ.

ವಿನೋದ್‌ ಸಾಹಸವಿದೆ. ಚಿತ್ರದಲಿ ಸೂರಜ್‌ ಗೌಡ, ಪ್ರಭು, ತರಂಗ ವಿಶ್ವ, ರಾಘವೇಂದ್ರ, ಶ್ರೀಧರ್‌, ಸುಧಿ ಇತರರು ನಟಿಸಿದ್ದಾರೆ. ಚಿತ್ರವನ್ನು ಶಶಿಧರ್‌ ಕೆ.ಎಂ ನಿರ್ಮಿಸಿದ್ದಾರೆ. ಇವರೊಂದಿಗೆ ನಿರ್ಮಾಣದಲ್ಲಿ ಕೃಷ್ಣ, ಮಧು, ಸಂದೀಪ್‌ ಸಾಥ್‌ ನೀಡಿದ್ದಾರೆ. ಮೇ. 24 ರಂದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಾರ್ವತಮ್ಮನ ದರ್ಶನವಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

  • ದಿಗಂತ್‌ ಅಭಿನಯದ "ಶಾರ್ಪ್‌ ಶೂಟರ್‌' ಚಿತ್ರ ನಿರ್ದೇಶಿಸಿದ್ದ ಗೌಸ್‌ಪೀರ್‌, ಆ ಚಿತ್ರದ ಬಳಿಕ ಬೇರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ...

  • ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ತಾರೆ ಸುಧಾರಾಣಿ ಪುತ್ರಿ ನಿಧಿರಾವ್‌ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಚಿತ್ರರಂಗದಲ್ಲಿ ಹರಿದಾಡುತ್ತಿದೆ....

  • ನಟ ಉಪೇಂದ್ರ ಅವರು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಆಗಿನ್ನೂ ಶೀರ್ಷಿಕೆ ಪಕ್ಕಾ...

  • ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಚಿತ್ರ ಯಾವಾಗ ತೆರೆಗೆ ಬರಬಹುದು ಎಂಬ ಲೆಕ್ಕಚಾರದಲ್ಲಿ ಸುದೀಪ್‌ ಅಭಿಮಾನಿಗಳಿದ್ದಾರೆ. ಮತ್ತೂಂದೆಡೆ ಅಭಿಮಾನಿಗಳ ಕುತೂಹಲವನ್ನು...

  • ಚಿರಂಜೀವಿ ಸರ್ಜಾ "ಖಾಕಿ' ಚಿತ್ರದ ಹೀರೋ ಎಂದು ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿದ್ದಾರೆ ಅಂತಾನೂ ತಿಳಿಸಲಾಗಿತ್ತು....

ಹೊಸ ಸೇರ್ಪಡೆ